• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

‌ಸಿಎಂ ಮಮತಾ ಬ್ಯಾನರ್ಜಿಗೆ ʼಹಿಂದೂ ಯುವ ವಾಹಿನಿʼ ಕಾರ್ಯಕರ್ತರಿಂದ ಕಪ್ಪು ಭಾವುಟ ಪ್ರದರ್ಶನ

Any Mind by Any Mind
March 3, 2022
in ದೇಶ, ರಾಜಕೀಯ
0
‌ಸಿಎಂ ಮಮತಾ ಬ್ಯಾನರ್ಜಿಗೆ ʼಹಿಂದೂ ಯುವ ವಾಹಿನಿʼ ಕಾರ್ಯಕರ್ತರಿಂದ ಕಪ್ಪು ಭಾವುಟ ಪ್ರದರ್ಶನ
Share on WhatsAppShare on FacebookShare on Telegram

ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಾರಣಾಸಿಯ ಕ್ಷೇತ್ರಕ್ಕೆ (Varanasi) ಭೇಟಿ ನೀಡಿದ ಸಂದರ್ಭದಲ್ಲಿ, ಹಿಂದೂ ಯುವ ವಾಹಿನಿ ಕಾರ್ಯಕರ್ತರಿಂದ (Hindu Yuva Vahini) ಪ್ರತಿಭಟನೆ ಎದುರಿಸಿದರು. ಬಲಪಂಥೀಯ ಸಂಘಟನೆಯ (Right Wing) ಸದಸ್ಯರು ಕಪ್ಪು ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಬ್ಯಾನರ್ಜಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ADVERTISEMENT

ಸಮಾಜವಾದಿ ಪಕ್ಷದ (Samajawadi Party) ಅಭ್ಯರ್ಥಿ ಪರ ಪ್ರಚಾರ ಮಾಡಲು ಬುಧವಾರ ಸಂಜೆ ನಗರಕ್ಕೆ ಆಗಮಿಸಿದ ಬ್ಯಾನರ್ಜಿ, ‘ಗಂಗಾ ಆರತಿ’ಯಲ್ಲಿ (Ganga Arathi) ಪಾಲ್ಗೊಳ್ಳಲು ದಶಾಶ್ವಮೇಧ ಘಾಟ್‌ಗೆ ತೆರಳುತ್ತಿದ್ದಾಗ ಹಿಂದೂ ವಾಹಿನಿಯ ಕಾರ್ಯಕರ್ತರು ಚೆಟ್‌ಗಂಜ್ ಕ್ರಾಸಿಂಗ್‌ನಲ್ಲಿ ಅವರ ಬೆಂಗಾವಲು ಪಡೆಯ ಮುಂದೆ ಜಮಾಯಿಸಿದರು.

ಪ್ರತಿಭಟನಾಕಾರರು ಬ್ಯಾನರ್ಜಿ ವಿರುದ್ಧ ಘೋಷಣೆ ಕೂಗಿ, ಕಪ್ಪು ಬಾವುಟವನ್ನು ಪ್ರದರ್ಶಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು. ಬ್ಯಾನರ್ಜಿ ತಮ್ಮ ವಾಹನದಿಂದ ಕೆಳಗಿಳಿದು ರಸ್ತೆಯಲ್ಲೇ ಕೆಲಕಾಲ ನಿಂತರು.

ಬೆಂಗಾವಲು ಪಡೆ ಮುಂದೆ ಸಾಗುತ್ತಿದ್ದಂತೆ, ಗದೌಲಿಯಾ ಪ್ರದೇಶದಲ್ಲಿ ಬಿಜೆಪಿ (BJP) ಬೆಂಬಲಿಗರು ಬ್ಯಾನರ್ಜಿ ವಿರುದ್ಧ ಕಪ್ಪು ಬಾವುಟಗಳನ್ನು ತೋರಿಸಿ “ಮಮತಾ ಬ್ಯಾನರ್ಜಿ ವಾಪಾಸ್ ಜಾವೋ (ಹಿಂತಿರುಗಿ)” ಮತ್ತು “ಜೈ ಶ್ರೀ ರಾಮ್” (Jai Shree Ram) ಎಂಬ ಘೋಷಣೆಗಳನ್ನು ಕೂಗುವ ಮೂಲಕ ಬ್ಯಾನರ್ಜಿ ಅವರಿಗೆ ತಡೆಹಾಕಿದರು. ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಕಪ್ಪು ಬಾವುಟ ಹಿಡಿದ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರು.

ಹಿಂದೂ ಯುವ ವಾಹಿನಿಯನ್ನು ಬಿಜೆಪಿ ನಾಯಕ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (cm yogi adityanath) ಅವರು ಸುಮಾರು ಎರಡು ದಶಕಗಳ ಹಿಂದೆ ಸ್ಥಾಪಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಮೋದಿಯ ಕಟು ಟೀಕಾಕಾರರಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷರು, ವಾರಣಾಸಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.

Tags: CM Mamata BanerjeeCM Yogi AdityanathCongress PartyCovid 19Ganga ArathimHindu Yuva VahiniJai Shree RamPM Narendra ModiRight Wing PoliticsSamajawadi PartyvaranasiWest Begalಕರೋನಾಕೋವಿಡ್-19ನರೇಂದ್ರ ಮೋದಿ
Previous Post

ಯುವ ಹೋರಾಟಗಾರ ಅನೀಶ್‌ ಖಾನ್‌ ಕೊಲೆ, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ತಿರುವು ನೀಡುವುದೇ?

Next Post

Uttar Pradesh | ವಿಧಾನಸಭೆ ಚುನಾವಣೆಯ 6ನೇ ಹಂತದ ಮತದಾನ ಆರಂಭ

Related Posts

ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 
ದೇಶ

ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

by Shivakumar
November 3, 2026
0

ರಸ್ತೆಗಳಲ್ಲಿ ಮಹೀಂದ್ರಾ ಥಾರ್, ಸ್ಕಾರ್ಪಿಯೋ, XUV500 ಮತ್ತು XUV700 ವಾಹನಗಳನ್ನು ನೋಡದವರೇ ಇಲ್ಲ. ವಿಭಿನ್ನ ವಿನ್ಯಾಸ, ಗಟ್ಟಿಮುಟ್ಟಾದ ನೋಟ ಹಾಗೂ ಆಕರ್ಷಕ ರೋಡ್ ಪ್ರೆಸೆನ್ಸ್‌ನಿಂದ ಈ ಎಸ್‌ಯುವಿಗಳು...

Read moreDetails
Congress members have set out to engage in new-style politics after finishing off Siddaramaiah: H.D. Kumaraswamy

ಸಿದ್ದರಾಮಯ್ಯರನ್ನು ಮುಗಿಸಿ ಕಾಂಗ್ರೆಸ್ ನವರು ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ : ಹೆಚ್.ಡಿ. ಕುಮಾರಸ್ವಾಮಿ

November 3, 2026
'No one can occupy a protest site indefinitely': Supreme Court issues notice to Central Government

‘ಯಾರೂ ಅನಿರ್ದಿಷ್ಟಾವಧಿಗೆ ಪ್ರತಿಭಟನಾ ಸ್ಥಳವನ್ನು ಆಕ್ರಮಿಸಿಕೊಳ್ಳುವಂತಿಲ್ಲ’: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

November 3, 2026
Central government's revenue sheet: October GST collection sets all-time record!

ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಆದಾಯದ ಹೊಳೆ: ಸಾರ್ವಕಾಲಿಕ ದಾಖಲೆ ಬರೆದ ಅಕ್ಟೋಬರ್ ಜಿಎಸ್‌ಟಿ ಸಂಗ್ರಹ!

November 3, 2026
Massive protest by the ‘INDIA’ alliance in Bengaluru on Nov. 5: KPCC President B.K. Hariprasad

ನ. 5ರಂದು ಬೆಂಗಳೂರಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಬೃಹತ್ ಪ್ರತಿಭಟನೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

November 3, 2026
Next Post
Uttar Pradesh | ವಿಧಾನಸಭೆ ಚುನಾವಣೆಯ 6ನೇ ಹಂತದ ಮತದಾನ ಆರಂಭ

Uttar Pradesh | ವಿಧಾನಸಭೆ ಚುನಾವಣೆಯ 6ನೇ ಹಂತದ ಮತದಾನ ಆರಂಭ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada