ರಾಹುಲ್ ಗಾಂಧಿಯವರನ್ನು ರಾಷ್ಟ್ರೀಯ ಕಾಂಗ್ರೆಸ್ನ ಮುಂದಿನ ಅಧ್ಯಕ್ಷರಾಗುವಂತೆ ಪಕ್ಷದ ಪ್ರಮುಕರೆಲ್ಲಾ ಸೇರಿ ಒತ್ತಾಯಿಸುತ್ತೇವೆ ಎಂದು ರಾಜ್ಯಸಬೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರನ್ನು ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಪ್ಯಾನ್ ಇಂಡಿಯಾ ವರ್ಷಸ್ಸು ಯಾರಿಗೂ ಇಲ್ಲ. ಪಕ್ಷವನ್ನು ಮುನ್ನಡೆಸಲು ಬಯಸುವವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪಶ್ಚಿಮ ಬಂಗಾಳದಿಂದ ಗುಜರಾತಿನವರೆಗೆ ಚಿರಪರಿಚಿತರಾಗಿರಬೇಕು ಎಂದಿದ್ದಾರೆ.
ಅಧ್ಯಕ್ಷರಾಗಲು ಬಯಸುವವರಿಗೆ ಪಕ್ಷದಲ್ಲಿ ಸಂಪೂರ್ಣ ಮನ್ನಣೆ ಸಿಗಬೇಕು ಅವರ ಆಯ್ಕೆಗೆ ಎಲ್ಲರ ಒಪ್ಪಿಗೆ ಇರಬೇಕು. ಅಂಥವರು ಪಕ್ಷದಲ್ಲಿ ಬೇರೆ ಯಾರೂ ಇಲ್ಲ. ಪಕ್ಷದ ನಾಯಕರೆಲ್ಲರು ಸೇರಿ ರಾಹುಲ್ ಗಾಂಧಿಯವರನ್ನು ಮುಂಚೂಣಿಗೆ ಬರುವಂತೆ ಒತ್ತಾಯಿಸುತ್ತೇವೆ ಎಂಉ ಹೇಳಿದ್ದಾರೆ.
ಸದ್ಯ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆಯ ಸಿದ್ದತೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸದ ಕಾರಣ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಹೆಚ್ಚಿದೆ.
ಅಕ್ಟೋಬರ್ ಅಥವಾ ನವೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಪೂರ್ಣಪ್ರಮಾಣದ ಅಧ್ಯಕ್ಷರನ್ನು ಹೊಂದಲಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.