ಮಲಯಾಳಂ ನಟ ವಿಜಯ್ ಬಾಬು ವಿರುದ್ಧ ಯುವ ನಟಿ ಮೇಲೆ ಅತ್ಯಾಚಾರ ಎಸಗಿದ ದೂರು ದಾಖಲಾಗಿದೆ.
ಇದೇ ವೇಳೆ ಅತ್ಯಾಚಾರ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿರುವ ನಟ ವಿಜಯ್ ಬಾಬು, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ನಟಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.
ನಟ ವಿಜಯ್ ಬಾಬು ನನ್ನ ಮೇಲೆ ಕಳೆದ ಒಂದು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವ ನಟಿ ಆರೋಪ ಮಾಡಿ ಫೇಸ್ ಬುಕ್ ನಲ್ಲಿ ಸತತವಾಗಿ ಪೋಸ್ಟ್ ಹಾಕಿದ್ದಾರೆ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿ ಬಾರಿಯೂ ನನ್ನ ವಿಶ್ವಾಸ ಸಂಪಾದಿಸಿ, ನೀವು ಫಿಲ್ಮ್ ಇಂಡಸ್ಟ್ರಿಸ್ ಗೆ ಹೊಸಬಳು. ನಿನಗೆ ಸರಿಯಾದ ಮಾರ್ಗದರ್ಶನ ಇಲ್ಲ ಎಂದು ನನ್ನ ಹಿತೈಷಿ ಎಂಬಂತೆ ಬಿಂಬಿಸಿಕೊಂಡು ನನ್ನನ್ನು ದೈಹಿಕವಾಗಿ ಬಳಸಿಕೊಂಡರು ಎಂದು ಆರೋಪಿಸಿದ್ದಾರೆ.
ನನಗೆ ಮತ್ತು ಬರುವ ಔಷಧ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆದರೆ ನಾನು ಪ್ರಜ್ಞೆಯಲ್ಲಿ ಇದ್ದಾಗ ಆತನ ಜೊತೆ ಸೆಕ್ಸ್ ಗೆ ಒಪ್ಪಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.