ಈ ಬಾರಿ ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12 ಈವರೆಗೂ ಒನ್ ಮ್ಯಾನ್ ಶೋ ಆಗಿತ್ತು. ಶೋ ಆರಂಭವಾದ ದಿನದಿಂದಲೂ ಗಿಲ್ಲಿ ನಟ(Gilli Nata) ಸಂಪೂರ್ಣ ಕಾರ್ಯಕ್ರಮವನ್ನು ಆವರಿಸಿಕೊಂಡಿದ್ದರು. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಕನ್ನಡದ ವಿನ್ನರ್ ಗಿಲ್ಲಿನಟ ಆಗಬಹುದು ಎನ್ನುವ ಭರವಸೆ ಬಹುತೇಕರಲ್ಲಿತ್ತು. ಈಗಾಗಲೇ ಕನ್ನಡಿಗರ ಮನಸ್ಸು ಗೆದ್ದಿರುವ ಗಿಲ್ಲಿ ನಟ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.

ಗಿಲ್ಲಿ ಬಿಗ್ ಬಾಸ್ ಕನ್ನಡದ ವಿನ್ನರ್ ಪಟ್ಟ ಗೆದ್ದೇ ಗೆಲ್ಲುತ್ತಾರೆ ಎನ್ನುವ ಖುಷಿಯಲ್ಲಿರುವ ಗಿಲ್ಲಿನಟ ಅಭಿಮಾನಿಗಳಿಗೆ ಇದೀಗ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಖ್ಯಾತ ಜ್ಯೋತಿಷಿ ಒಬ್ಬರು ಗಿಲ್ಲಿ ಗೆಲುವಿನ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಜ್ಯೋತಿಷಿ ಪ್ರಶಾಂತ್ ಕಿಣಿ ಎನ್ನುವವರು ಈ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿನಟ ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ತಲುಪುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಪ್ರಶಾಂತ್ ಕಿಣಿ ಅವರ ಈ ಪೋಸ್ಟ್‌ಗೆ ಗಿಲ್ಲಿ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದು, ನಾವು ಗಿಲ್ಲಿಯನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂದಿದ್ದರು. ಆದರೆ ಇದೀಗ ದಿಢೀರ್ ಹೊಸ ಪೋಸ್ಟ್ ಮಾಡಿರುವ ಪ್ರಶಾಂತ್ ಕಿಣಿ ಅವರು ʼಗಿಲ್ಲಿನಟ ಬಿಗ್ ಬಾಸ್ ವಿನ್ ಆಗಲ್ಲ. ಈ ಬಾರಿಯ ಬಿಗ್ ಬಾಸ್ ಗೆಲ್ಲೋದು ಮಹಿಳಾ ಸ್ಪರ್ಧಿʼ ಎಂದು ಪೋಸ್ಟ್ ಮಾಡಿದ್ದಾರೆ.

ಪ್ರಶಾಂತ್ ಕಿಣಿ ಅವರ ಈ ಪೋಸ್ಟ್ ಗಿಲ್ಲಿ ಅಭಿಮಾನಿಗಳ ನಿದ್ದೆ ಕೆಡಿಸಿದ್ದು, ನಮ್ಮ ವೋಟ್‌ಗಳಿಂದಲೇ ಗಿಲ್ಲಿಯನ್ನು ಗೆಲ್ಲಿಸಿ ನಿಮ್ಮ ಭವಿಷ್ಯವಾಣಿಯನ್ನು ಸುಳ್ಳು ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. ಸದ್ಯ ಪ್ರಶಾಂತ್ ಕಿಣಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮಹಿಳಾ ಸ್ಪರ್ಧಿ ವಿನ್ನರ್ ಅಂದರೆ ಅಶ್ವಿನಿ ಗೌಡ ಅಥವಾ ರಕ್ಷಿತಾ ಶೆಟ್ಟಿ ವಿನ್ನರ್ ಆಗುತ್ತಾರಾ ಎನ್ನುವ ಕಮೆಂಟ್‌ಗಳು ಹರಿದಾಡುತ್ತಿದೆ.







