ಚುನಾವಣಾ ತಂತ್ರಜ್ಞ ಕಾಂಗ್ರೆಸ್ ಪಾಲಿನ ಆಶಾಕಿರಣ ಎಂದೇ ಸದ್ದು ಮಾಡಿದ ಪ್ರಶಾಂತ್ ಕಿಶೋರ್ ತಾವು ಕಾಂಗ್ರೆಸ್ ಸೇರುವುದಿಲ್ಲ ಎಂದು ನಿನ್ನೆ ಸಾಯಂಕಾಲ ಸ್ಪಷ್ಟ ಪಡಿಸಿದರು. ಈ ಹಿಂದೆ ಎರಡು ವಾರಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿತ್ತು.
ಆದರೆ, ಕಾಂಗ್ರೆಸ್ ಸೇರಬೆಂಕೆಂದರೆ ತಮ್ಮಗೆ ಮುಕ್ತ ಅವಕಾಶ ನೀಡಬೇಕು ಮತ್ತು ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬ ಷರತ್ತನ್ನು ಕಾಂಗ್ರೆಸ್ ನಾಯಕರಿಗೆ ವಿಧಸಿದ್ದರು ಎಂದು ತಿಳಿದು ಬಂದಿದೆ. ಆದರೆ, ಇದಕ್ಕೊಪ್ಪದ ಕಾಂಗ್ರೆಸ್ ನಾಯಕರು 2024ರ ಚುನಾವಣೆಗೆ ಮೇಲ್ವಿಚಾರಣ ಸಮಿತಿಯನ್ನು ನೇಮಿಸುವುದಾಗಿ ಹೇಳಿತ್ತು.
ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು ಸಲಹೆಗಾರರಿಗೆ ಪಕ್ಷವನ್ನು ನಡೆಸುವ ಅಧಿಕಾರವನ್ನು ನೀಡಬಾರದು ಎಂದು ಅಭಿಪ್ರಾಯಪಟ್ಟಿತ್ತು. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬೇರೆಯದೆ ಇದೇ ಒಬ್ಬ ವ್ಯಕ್ತಿಯ ಕೈಗೆ ಇಡೀ ಪಕ್ಷದ ಅಧಿಕಾರವನ್ನು ಕೊಡಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.
ಅದಲ್ಲದೆ ರಾಹುಲ್ ಗಾಂಧಿಗೂ ಸಹ ಪ್ರಶಾಂತ್ಗೆ ಕಾಂಗ್ರೆಸ್ನ ಸಂಪೂರ್ಣ ಅಧಿಕಾರವನ್ನು ಕೊಡಲು ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ. ಇದಲ್ಲದೆ ಕಾಂಗ್ರೆಸ್ ಪಕ್ಷದ ಬಂಡಾಯ ಗುಂಪು ಎಂದೇ ಕರೆಲ್ಪಡುವ G-23 ನಾಯಕರು ಈ ವಿಚಾರದ ಬಗ್ಗೆ ಪುನಃ ಪುನಃ ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಆಹ್ವಾನವನ್ನು ತಿರಸ್ಕರಿಸಿದ ನಂತರ ಈ ಕುರಿತು ಟ್ವೀಟ್ ಮಾಡಿದ ಪ್ರಶಾಂತ್ ಪಕ್ಷದಲ್ಲಿ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಸರಿಯಾದ ನಾಯಕತ್ವ ಹಾಗೂ ಸಾಮೂಹಿಕ ಇಚ್ಚಾಶಕ್ತಿಯ ಅವಶ್ಯಕತೆಯಿದೆ ಎಂದು ಹೇಳಿದ್ದರು.