ಮಂಡ್ಯ :ರಾಜಕಾರಣದಲ್ಲಿ ಶಾಸಕ ನರೇಂದ್ರ ಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.ಹಣೆ ಬರಹ ಸರಿಲ್ಲದ ಕಾರಣಕ್ಕೆ ಸಚಿವ ಸ್ಥಾನ ಕೈ ತಪ್ಪಿದೆ. ಕಾಂಗ್ರೆಸ್ ಪಕ್ಷದಿಂದಲ್ಲೇ ಅನ್ಯಾಯ ಆಗ್ತಿದೆ ಎಂದು ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಬೇಸರ ಹೊರ ಹಾಕಿದ್ದಾರೆ.
ಸಚಿವ ಸ್ಥಾನ ಬೇಡಿಕೆ ಅಲ್ಲ, ನನ್ನ ಹಕ್ಕು, ನನಗೆ ಯೋಗ್ಯತೆ, ಅರ್ಹತೆ, ಸೀನಿಯರಿಟಿ ಇಲ್ವಾ..? ಎಂದು ಪ್ರಶ್ನಿಸಿದ್ದು, ನನ್ನ ಹಕ್ಕನ್ನು ಪ್ರಬಲವಾಗಿ ಪ್ರತಿಪಾದನೆ ಮಾಡುವ ದಿನ ಹತ್ತಿರ ಬರ್ತಿದೆ ಎಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗತ್ತೆ ಅನ್ನೋ ಚರ್ಚೆಗಳ ನಡುವೆ ಮಂಡ್ಯದಲ್ಲಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ನಾನು ಸಚಿವ ಸ್ಥಾನ ಕೇಳ್ತಿದ್ದೇನೆ, ನಮ್ಮ ಹೈಕಮಾಂಡ್ ಯಾವಾಗ ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಸಿಎಂ ಕೂಡ ನನ್ನ ಕ್ಷೇತ್ರದಲ್ಲಿ ಎರಡ್ಮೂರು ಬಾರಿ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಕಾದು ನೋಡಬೇಕು. ಸಚಿವ ಸ್ಥಾನ ಬೇಡಿಕೆ ಅಲ್ಲ, ನನ್ನ ಹಕ್ಕು.ಮಂಡ್ಯದಲ್ಲಿ ಕಾಂಗ್ರೆಸ್ನಲ್ಲಿ ಸೀನಿಯರ್ ಲೀಡರ್ ಇದ್ದೇನೆ. ಹಕ್ಕು ಇಲ್ವಾ..? ಎಂದು ಪ್ರಶ್ನಿಸಿದ್ದಾರೆ.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅಣ್ಣತಮ್ಮಂದಿರ ರೀತಿ ಇದ್ದೇವೆ. ನನಗೆ ಯೋಗ್ಯತೆ, ಅರ್ಹತೆ, ಸೀನಿಯರಿಟಿ ಇದೆ. ವಿದ್ಯಾರ್ಥಿ ದೆಸೆಯಿಂದಲೇ ನಾನು ಕಾಂಗ್ರೆಸ್ ಕಟ್ಟಿದವನು. ಇವತ್ತಿನ ಮಟ್ಟಕ್ಕೆ ಆ ಪ್ರಶ್ನೆ ಎತ್ತುವುದಕ್ಕೆ ಕರ್ನಾಟಕದ ಕಾಂಗ್ರೆಸ್ನಲ್ಲಿ ಬಹಳಷ್ಟು ಜನಕ್ಕೆ ಅಧಿಕಾರ ಇಲ್ಲ. ನನ್ನ ಹಣೆ ಬರಹ ಸರಿ ಇಲ್ಲ ಹಾಗಾಗಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದಿದ್ದಾರೆ.
ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳೋದು ಬಿಡೋದು ಸಿಎಂ ಅವರಿಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ಮಾನದ ಬಳಿಕ ನನ್ನ ಬೇಡಿಕೆ ಎತ್ತೋದು. ನಮ್ಮ ಪಕ್ಷದಲ್ಲಿ ರೀ ಶಫಲ್ ನಡೆದಾಗ ಈ ಚರ್ಚೆ ನಡೆಯುತ್ತದೆ. ಪದೇ ಪದೇ ನರೇಂದ್ರ ಸ್ವಾಮಿಗೆ ಅನ್ಯಾಯ ಆಗ್ತಿದೆ. ರಾಜಕಾರಣದಲ್ಲಿ ನನಗೆ ನತದೃಷ್ಟತನ ಅನ್ನೋದು ಜಾಸ್ತಿ ಕಾಡ್ತಿದೆ ಎಂದಿದ್ದಾರೆ.
1994, 1999, 2008ರ ಪ್ರಕರಣ ನೋಡಿ ರಾಜಕೀಯದ ಪ್ರಾರಂಭ ಒಂದು ಸಂಘರ್ಷ ಜೊತೆಯಲ್ಲೆ ರಾಜಕೀಯ ಮಾಡುವ ಅನಿವಾರ್ಯತೆ ಎದುರಾಗಿದೆ. ಅದು ಯಾರ ಜೊತೆಗೆ..? ನಮ್ಮ ಪಕ್ಷದ ಜೊತೆಯಲ್ಲೆ. ಆದ್ರೆ ನಾನು ಪಕ್ಷದ ಸಿದ್ದಾಂತ, ಸಂಘಟನೆ ಬಿಡಲಿಲ್ಲ. ಪಕ್ಷೇತರನಾಗಿ ಇದ್ದಾಗಲು ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿದ್ದೆ. ಅವತ್ತು ಬಿಜೆಪಿ ಸರ್ಕಾರದ ಮಂತ್ರಿಯಾಗಿದ್ರು ಮಂಡ್ಯ ಡಿಸಿಸಿ ಸ್ಥಾನ ದಳದಿಂದ ಕಿತ್ತು ಕಾಂಗ್ರೆಸ್ಗೆ ಮಾಡಿದ್ದೆ. ಮನ್ಮುಲ್ ಅಧಿಕಾರವನ್ನು ಜನತಾ ದಳದಿಂದ ಕಿತ್ತು ಕಾಂಗ್ರೆಸ್ಗೆ ಮಾಡಿದ್ದು ನಾನೇ ಎಂದಿದ್ದಾರೆ.