ವಿಧಾನಪರಿಷತ್ ದಕ್ಷಿಣ ಪದವಿಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಧು.ಜಿ.ಮಾದೇಗೌಡ 12,205 ಅಂತರಗಳ ಭರ್ಜರಿ ಜಯಗಳಿಸಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿದ್ದ ಮೈ.ವಿ. ರವಿಶಂಕರ್ 33,878 ಮತಗಳನ್ನು ಪಡೆದಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಒಟ್ಟು 17 ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿದ ಬಳಿಕವು ಮಧು ರವರಿಗೆ ನಿಗದಿತ ಕೋಟಾ ತಲುಪಲು 808 ಮತಗಳ ಕೊರತೆ ಎದುರಾಯಿತ್ತು.

ಆಗ ಅಗತ್ಯವಿರುವ 808 ಮತಗಳು ಬಿಜೆಪಿ ಅಭ್ಯರ್ಥಿ ರವಿಶಂಕರ್ ಮತಪತ್ರದಲ್ಲಿ ಬರುವವರೆಗು ಎಣಿಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ. ಕೋಟ ತಲುಪುತ್ತಿದ್ದಂತೆಯೇ ಎಣಿಕೆ ನಿಲ್ಲಿಸಿದ ಅಧಿಕಾರಿಗಳು ಮಧುರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಬುಧವಾರ ಬೆಳ್ಳಗ್ಗೆ 8ಕ್ಕೆ ಆರಂಭವಾದ ಮತ ಎಣಿಕೆ ಕಾರ್ಯವು ಗುರುವಾರ ಮಧ್ಯಾಹ್ನ 1ರವರೆಗೆ ನಡೆಯಿತ್ತು. ಇದೇ ಮೊದಲ ಭಾರಿಗೆ 29 ಘಂಟೆಗಳ ಕಾಲ ನಿರಂತರ ಮತ ಎಣಿಕೆಯನ್ನು ಮಾಡಿದ್ದು ಇದೇ ಮೊದಲು ಎಂದು ಚುನಾವಣ ವಿಶ್ಲೇಷಕರು ಹೇಳಿದ್ದಾರೆ.






