ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೆಂಟ್ಸ್ ನಿಗದಿತ 20 ಓವರ್ ಗಳಲ್ಲಿ 181 ರನ್ನ ಬೃಹತ್ ಮೊತ್ತವನ್ನು ಕಲೆಹಾಕಿತ್ತು. RCB ಬೌಲರ್ ಗಳು ಬೋಲಿಂಗ್ ನಲ್ಲಿ ಲಕ್ನೋ ತಂಡವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಾಯಿತಾದ್ರೂ ಅಂತಿಮವಾಗಿ ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಲಕ್ನೋ ಸೂಪರ್ ಜಾನ್ಸ್ ಯಶಸ್ವಿಯಾಯಿತು.
ಬೃಹತ್ ಮೊತ್ತವನ್ನು ಬೆನ್ನತ್ತಿದ RCB ತಂಡ ಆರಂಭಿಕ ಆಘಾತ ಎದುರಿಸಬೇಕಾಯಿತು. ವಿರಾಟ್ ಕೊಹ್ಲಿ ಹಾದಿಯಾಗಿ ಎಲ್ಲಾ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಪೆವಿಲಿಯನ್ ಕಡೆ ಮುಖ ಮಾಡಿದ್ರು. ಯಾವೊಬ್ಬ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ನಾಯಕ ಫಾಫ್ ಡುಪ್ಲೆಸಿಸ್ ಒಂದಕ್ಕೆ ಸಾಧನೆ ಮಾಡಿದ್ರೆ, ಮ್ಯಾಕ್ಸ್ ವೆಲ್ ಶೂನ್ಯ ಸುತ್ತಿದ್ರು. ಅಂತಿಮವಾಗಿ ದಿನೇಶ್ ಕಾರ್ತಿಕ್ ಮತ್ತು ಲೊಮ್ರೋರ್ ಜೊತೆಯಾಟದಲ್ಲಿ ರನ್ ಕಲೆಹಾಕುವ ಶತಪ್ರಯತ್ನ ನಡೆಸಲಾಯಿತಾದ್ರೂ , ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.
ಕೊನೆಯ ೫ ಓವರ್ ಗಳಲ್ಲಿ ಈ ಇಬ್ಬರು ಆಟಗಾರರು ಶಕ್ತಿ ಮೀರಿ ಹೋರಾಟ ನಡೆಸಿದರಾದರೂ ಗೆಲುವು ದಕ್ಕಲಿಲ್ಲ. ಕೀಪರ್ ಕ್ಯಾಚ್ ಕೊಟ್ಟು ದಿನೇಶ್ ಕಾರ್ತಿಕ್ ತೆರಳಿದ ನಂತರ ಅಂತಿಮವಾಗಿ RCB ಅಭಿಮಾನಿಗಳು ಗೆಲುವಿನ ಆಸೆ ಕೈಬಿಟ್ಟರು. ನಂತರ ಅನಗತ್ಯ ರನ್ ಕದಿಯಲು ಹೋಗಿ ಡಾಗರ್ ಶೂನ್ಯಕ್ಕೆ ಔಟ್ ಆದ್ರೆ.. ಇನ್ನುಳಿದ ಆಟಗಾರು ಪೆವಿಲಿಯನ್ ಪರೇಡ್ ನಡೆಸಿದ್ರು. ಅಂತಿಮವಾಗಿ 153 ರನ್ ಗೆ ಆಲ್ ಔಟ್ ಆಗುವ ಮೂಲಕ RCB ಸೋಲೊಪ್ಪಿಕೊಂಡಿತು.