ಪ್ರತಿಯೊಬ್ಬರ ದೇಹದಲ್ಲೂ ಆಗಾಗ ಏನಾದರೂ ಒಂದು ಸಮಸ್ಯೆಗಳು ಎದುರಾಗ್ತಾನೆ ಇರುತ್ತೆ ಸ್ವಲ್ಪ ಮಟ್ಟಿಗೆ ಏರುಪೇರು ಕೂಡ ಅದು ದೊಡ್ಡ ಮಟ್ಟದಲ್ಲಿ ಆರೋಗ್ಯ ಸಮಸ್ಯೆಯನ್ನು ತಂದೊಡುತ್ತದೆ. ಅದರಲ್ಲಿ ಬಿಪಿ ಕೂಡ ಒಂದು, ಬಿಪಿ ನಾರ್ಮಲ್ ಆಗಿದ್ದರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಆದರೆ ಹೆಚ್ಚು ಜನಕ್ಕೆ ಹೈ ಬಿಪಿ ಸಮಸ್ಯೆ ಇರುತ್ತದೆ ಇನ್ನು ಕೆಲವರಿಗೆ ಲೋ ಬಿಪಿ ಸಮಸ್ಯೆ ಇರುತ್ತದೆ..
ಲೋ ಬಿಪಿ ಸಮಸ್ಯೆ ಎದುರಾಗೋದಕ್ಕೆ ಪ್ರಮುಖ ಕಾರಣಗಳು ಏನೆಂದರೆ. ಎಮೋಷನಲ್ ಸ್ಟ್ರೆಸ್ ಇಂದಾಗಿ ,ಭಯ ಹೆಚ್ಚಾದಾಗ ,ಇನ್ಸೆಕ್ಯುರಿಟಿಯಿಂದಾಗಿ ಹಾಗೂ ದೇಹದಲ್ಲಿ ಏನಾದರೂ ನೋವು ಕಾಣಿಸಿಕೊಂಡಾಗ, ಡಿ ಹೈಡ್ರೇಶನ್ ನಿಂದಾಗಿ ಕೂಡ ಲೋ ಬಿಪಿ ಸಮಸ್ಯೆ ಎದುರಾಗುತ್ತದೆ ಹಾಗೂ ಇದು ರಕ್ತದ ಪ್ರಮಾಣವನ್ನ ಕಡಿಮೆ ಮಾಡುತ್ತದೆ, ಮದ್ಯಪಾನ ಸೇವಿಸುವವರಲ್ಲಿ, ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಂಡಾಗ.
ವೈದ್ಯರು ಹೇಳುವ ಪ್ರಕಾರ ಲೋ ಬಿಪಿ ಆದರೆ ಸಮಸ್ಯೆಗಳು ಹೆಚ್ಚಾಗೋದು ಜಾಸ್ತಿ. ಹಾಗಾಗಿ ಶುರುವಿನಿಂದಲೇ ಟ್ರೀಟ್ಮೆಂಟ್ ಅಥವಾ ಲೋ ಬಿಪಿ ಬಗ್ಗೆ ಕಾಳಜಿ ವಹಿಸುವಂಥದ್ದು ಉತ್ತಮ. ಹಾಗೂ ಮುಖ್ಯವಾಗಿ ಲೋ ಬಿಪಿ ಸಿಂಟಮ್ಸ್ ಗಳು ಕಾಣಿಸಿಕೊಳ್ಳುತ್ತವೆ ಅನ್ನೋದರ ಮಾಹಿತಿ ಹೀಗಿದೆ.
- ದೇಹದಲ್ಲಿ ಎಲೆಕ್ಟ್ರೋಲೈಟ್ ಇಂಬ್ಯಾಲೆನ್ಸ್ ಆಗುವುದು ಡಿ ಹೈಡ್ರೇಶನಿಂದಾಗಿ. ಇಂತಹ ಸಂದರ್ಭದಲ್ಲಿ ಕಣ್ಣು ಮಂಜಾಗುತ್ತದೆ ಇದು ಲೋ ಬಿಪಿಯ ಪ್ರಮುಖ ಕಾರಣವಾಗಿದೆ, ಯಾವುದು ಕೂಡ ಸರಿಯಾಗಿ ಕಾಣಿಸುವುದಿಲ್ಲ.ಅದರಲ್ಲೂ ಕೂಡ ಬಿಸಿಲಲ್ಲಿ ಹೆಚ್ಚಿರುವಾಗ ಈ ಸಮಸ್ಯೆ ಎದುರಾಗುತ್ತದೆ.
- ಬಿಪಿ ಲೋ ಆದಾಗ ಹೆಚ್ಚು ಜನಕ್ಕೆ ತಲೆ ಸುತ್ತುತ್ತದೆ.ಆಯಾಸ ಹೆಚ್ಚಾದಾಗ, ಟ್ರಾವೆಲ್ ಜಾಸ್ತಿ ಮಾಡಿದ್ರೆ ,ಬಿಸಿಲಲ್ಲಿ ಹೆಚ್ಚು ಓಡಾಡಿದಾಗ, ಊಟ ತಿಂಡಿ ಸರಿಯಾಗಿ ಮಾಡುತ್ತಿದ್ದಾಗ ಹಾಗೂ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತಲೆ ಸುತ್ತುತ್ತದೆ.
- ಲೋ ಬಿಪಿಯ ಸಿಂಪ್ಟಮ್ಸ್ ಅಲ್ಲಿ ವಾಕರಿಕೆ ಕೂಡ ಒಂದು .ಹೆಚ್ಚು ಜನಕ್ಕೆ ಈ ಸಮಸ್ಯೆ ಕಾಡುತ್ತದೆ ,ಅದರಲ್ಲೂ ಕೂಡ ಬೆಳಗಿನ ಜಾವ ಹಾಗೂ ಊಟ ತಿಂಡಿ ನಂತರ ವಾಂತಿ ಬಂದಂತಾಗುತ್ತದೆ, ಯಾವ ಆಹಾರವೂ ಕೂಡ ಅಷ್ಟೇ ಇರುವುದಿಲ್ಲ, ಹೊಟ್ಟೆ ತುಂಬಿದಂತೆ ಇರುತ್ತದೆ, ಇದು ಕೂಡ ಪ್ರಮುಖ ಕಾರಣ.
- ಇನ್ನು ಲೋ ಬಿಪಿ ಸಮಸ್ಯೆ ಇದ್ದವರಿಗೆ ನಿದ್ದೆ ಹೆಚ್ಚಿರುತ್ತದೆ, ಎಲ್ಲಿ ಕೂತರು ನಿಂತ್ರು ತೂಕಡಿಸ್ತಾನೆ ಇರ್ತಾರೆ, ಸಾಮಾನ್ಯವಾಗಿ ರಾತ್ರಿ ಹೊತ್ತು ನಿದ್ದೆ ಸರಿಯಾಗಿ ಆಗದಿದ್ದರೆ ಹಗಲು ನಿದ್ದೆ ಬರುತ್ತದೆ . ಆದರೆ ಲೋ ಬಿಪಿ ಇದ್ದವರಿಗೆ ರಾತ್ರಿ ಹಗಲು ಎನ್ನದೆ ನಿದ್ದೆ ತೂಕಡಿಕೆ ಎಚ್ಚರುತ್ತದೆ.
- ಲೋ ಬಿಪಿ ಇದ್ದವರಿಗೆ ವೀಕ್ನೆಸ್ ಅನ್ನೋದು ತುಂಬಾನೇ ಕಾಮನ್ ಯಾವ ಕೆಲಸ ಮಾಡಿದ್ರು ಸುಸ್ತು ಸ್ವಲ್ಪ ಓಡಾಡಿದರು ಯಾವಾಗ್ಲೂ ಟೈಯರ್ಡ್ ಆಗಿರ್ತಾರೆ.