• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಷೇರುಪೇಟೆಯಲ್ಲಿ ರಕ್ತದೋಕುಳಿ!; ಒಂದೇ ದಿನ 9 ಲಕ್ಷ ಕೋಟಿ ರೂ ಸಂಪತ್ತು ನಾಶ

ಪ್ರತಿಧ್ವನಿ by ಪ್ರತಿಧ್ವನಿ
December 20, 2021
in Uncategorized
0
ಷೇರುಪೇಟೆಯಲ್ಲಿ ರಕ್ತದೋಕುಳಿ!; ಒಂದೇ ದಿನ 9 ಲಕ್ಷ ಕೋಟಿ ರೂ ಸಂಪತ್ತು ನಾಶ
Share on WhatsAppShare on FacebookShare on Telegram

ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಾರದ ಆರಂಭದಲ್ಲೇ ಷೇರುಪೇಟೆಯಲ್ಲಿ ರಕ್ತದೋಕುಳಿ ನಡೆದಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1500 ಅಂಶಗಳಷ್ಟು ಕುಸಿತ ದಾಖಲಿಸಿತ್ತು. ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿಗಳು ಶೇ.2ರಷ್ಟು ಕುಸಿತ ದಾಖಲಿಸಿವೆ.

ADVERTISEMENT

ಓಮಿಕ್ರಾನ್ ರೂಪಾಂತರಿ ಪತ್ತೆಯಾದ ನಂತರದಲ್ಲಿ ಷೇರುಪೇಟೆ ಸತತ ಇಳಿಜಾರು ಹಾದಿಯಲ್ಲಿ ಸಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿದ್ದರೆ, ಮತ್ತೊಂದುಕಡೆ, ದೇಶೀಯ ಹೂಡಿಕೆದಾರರು ತಟಸ್ಥರಾಗಿದ್ದಾರೆ. ಹೀಗಾಗಿ ಷೇರುಪೇಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳು ಇಳಿಜಾರಿನಲ್ಲಿವೆ. ವಾರಂತ್ಯದ ವೇಳೆಗೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ದಿನದ ವಹಿವಾಟಿನಲ್ಲಿ 1,500 ಅಂಶ ಕುಸಿತ ದಾಖಲಿಸಿದ ಸೆನ್ಸೆಕ್ಸ್ ನಂತರ ಕೊಂಚ ಚೇತರಿಸಿಕೊಂಡಿತು. 1,189 ಅಂಶ ಕುಸಿತದೊಂದಿಗೆ 55,822ಕ್ಕೆ ಸ್ಥಿರಗೊಂಡಿತು. ತಿಂಗಳ ಹಿಂದಷ್ಟೇ 62,245 ಅಂಶಗಳಿಗೆ ಜಿಗಿದಿದ್ದ ಸೆನ್ಸೆಕ್ಸ್ ಸತತ ಕುಸಿಯುತ್ತಾ ಬಂದಿದೆ. ಒಂದೇ ದಿನ ಶೇ.2ರಷ್ಟು ಸೆನ್ಸೆಕ್ಸ್ ಸೂಚ್ಯಂಕ ಕುಸಿದ ಪರಿಣಾಮ ಹೂಡಿಕೆದಾರರ 9 ಲಕ್ಷ ಕೋಟಿ ರುಪಾಯಿ ಸಂಪತ್ತು ನಾಶವಾಗಿದೆ. ವಾರವಿಡೀ ಕುಸಿತದ ನಿರೀಕ್ಷೆಯಲ್ಲಿರುವ ಮಾರುಕಟ್ಟೆಯು ಮತ್ತಷ್ಟು ಲಕ್ಷ ಕೋಟಿಗಳ ಸಂಪತ್ತು ಕಳೆದುಕೊಳ್ಳಲು ಸಿದ್ದವಾಗುತ್ತಿದೆ. ದಿನದ ವಹಿವಾಟಿನಲ್ಲಿ ಕುಸಿತ ತೀವ್ರತೆ ಎಷ್ಟಿತ್ತೆಂದರೆ ಪೇಟೆಯ ಎಲ್ಲಾ ಸೂಚ್ಯಂಕಗಳೂ ಕುಸಿತ ದಾಖಲಿಸಿವೆ.

ಓಮಿಕ್ರಾನ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಲೌಕ್ಡೌನ್ ನಂತಹ ಕಠಿಣ ಕ್ರಮಗಳಿಗೆ ಮುಂದಾಗಿರುವುದರಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಗೆ ಹಿನ್ನಡೆಯಾಗಲಿದೆ. ಈ ಕಾರಣಕ್ಕಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈಗಾಗಲೇ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡುವ ಮುನ್ಸೂಚನೆ ಹಿನ್ನೆಲೆಯಲ್ಲಿ ತಮ್ಮ ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ.

ಬೃಹತ್ ನಗದಿನೊಂದಿಗೆ ಕುಳಿತಿರುವ ದೇಶೀಯ ಫಂಡ್ ಹೌಸ್ ಗಳು ಕಾದು ನೋಡುವ ತಂತ್ರ ಅನುಸರಿಸುತ್ತಿವೆ. ಹೀಗಾಗಿ ಷೇರುಪೇಟೆ ಇಳಿಜಾರಿನಲ್ಲಿದೆ. ಈ ಹಿಂದೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಹಿಂಪಡೆದಾಗ ಷೇರುಪೇಟೆಯಲ್ಲಿ ತಲ್ಲಣ ಉಂಟಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಎಸ್ಐಪಿ) ಮೂಲಕವೇ ವಿವಿಧ ಮ್ಯೂಚುವಲ್ ಫಂಡ್ ಗಳಿಗೆ ಪ್ರತಿ ತಿಂಗಳು 1 ಲಕ್ಷ ಕೋಟಿ ರುಪಾಯಿ ಹರಿದು ಬರುತ್ತಿದೆ. ಹೀಗಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಹಿಂಪಡೆದರೂ ಪೇಟೆಯಲ್ಲಿ ಅಂತಹ ಬದಲಾವಣೆಯಾಗದು. ಈಗ ಒಮಿಕ್ರಾನ್ ವ್ಯಾಪಕವಾಗಿ ಹರಡುವ ಆತಂಕ ಮತ್ತು ತಡೆಯುವ ಸಲುವಾಗಿ ಲಾಕ್ಡೌನ್ ಮಾಡುವ ಸಾಧ್ಯತೆ ನಿರೀಕ್ಷೆಯಲ್ಲಿ ಹೂಡಿಕೆಗೆ ಮುಂದಾಗಿಲ್ಲ.

ಓಮಿಕ್ರಾನ್ ರೂಪಾಂತರಿ ಈಗಾಗಲೇ ಲಸಿಕೆ ಪಡೆದವರಲ್ಲೂ ಕಾಣಿಸಿಕೊಂಡಿರುವುದು ಮತ್ತು ಎಲ್ಲಾ ವಯೋಮಿತಿಯವರಲ್ಲೂ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ತ್ವರಿತವಾಗಿ ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಓಮಿಕ್ರಾನ್ ಕ್ಷಿಪ್ರವಾಗಿ ಹರಡಿದರೆ ಲಾಕ್ಡೌನ್ ಹೊರತಾದ ಬೇರೆ ಪರ್ಯಾಯ ಮಾರ್ಗಗಳೂ ಇಲ್ಲದಾಗಿವೆ. ಭಾರತದಲ್ಲಿ ಹೆಚ್ಚಿನ ಆತಂಕ ಏಕೆಂದರೆ, ಮಕ್ಕಳಿಗೆ ಇನ್ನೂ ಲಸಿಕೆ ನೀಡುತ್ತಿಲ್ಲ.

ಓಮಿಕ್ರಾನ್ ಈಗಾಗಲೇ ಮಕ್ಕಳಲ್ಲೂ ಕಾಣಿಸಿಕೊಳ್ಳತೊಡಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ನಗದು ಇಟ್ಟುಕೊಂಡಿರುವ ಫಂಡ್ ಹೌಸ್ ಗಳು ಕಾದು ನೋಡುವ ತಂತ್ರ ಅನುಸರಿಸುತ್ತಿವೆ. ಇಂತಹ ಹೊತ್ತಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಬೃಹತ್ ಪ್ರಮಾಣದಲ್ಲಿ ಹಿಂಪಡೆಯಲು ಮುಂದಾದರೆ ಮಾರುಕಟ್ಟೆ ತ್ವರಿತ ಕುಸಿತವಾಗುತ್ತದೆ.

Tags: Covid 19ಓಮಿಕ್ರಾನ್ಕರೋನಾಕೋವಿಡ್-19ಜಿಡಿಪಿಪೇರುಪೇಟೆರಕ್ತದೋಕುಳಿ
Previous Post

ಹಾಸ್ಯ ಕಲಾವಿದರಿಗೆ ಸ್ವಾಗತ, ನಾವು ನಿಜವಾಗಿಯೂ ವಿಶ್ವಮಾನವರವರು : ಕರ್ನಾಟಕಕ್ಕೆ ಕೌಂಟರ್‌ ಕೊಟ್ಟ ಕೆ.ಟಿ. ರಾಮ್‌ ರಾವ್

Next Post

40 ಸಾವಿರ ವರ್ಷಗಳಿಂದಲೂ ಭಾರತೀಯರ ಡಿಎನ್ಎ ಒಂದೇ ಆಗಿದೆ : ಮೋಹನ್ ಭಾಗವತ್ ಹೇಳಿಕೆ ಶ್ರೇಷ್ಠತಾ ವ್ಯಸನದ ಪರಾಕಾಷ್ಠೆ

Related Posts

B‌REAKING NEWS : ಎಲ್ಲವೂ ಊಹಾಪೋಹ, ಎಲ್ಲಾ ಸುಳ್ಳು : ಸಭೆ ಬಳಿಕ ವೇಣುಗೋಪಾಲ್‌ ಫಸ್ಟ್‌ ರಿಯಾಕ್ಷನ್..!
Uncategorized

B‌REAKING NEWS : ಎಲ್ಲವೂ ಊಹಾಪೋಹ, ಎಲ್ಲಾ ಸುಳ್ಳು : ಸಭೆ ಬಳಿಕ ವೇಣುಗೋಪಾಲ್‌ ಫಸ್ಟ್‌ ರಿಯಾಕ್ಷನ್..!

by ಪ್ರತಿಧ್ವನಿ
May 26, 2026
0

ನವದೆಹಲಿ : ರಾಜ್ಯದ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇಂದು ದಿನವಿಡೀ ನಡೆದ ಸಭೆಗಳು ಮುಕ್ತಾಯಗೊಂಡಿದೆ. ಆದರೆ ಮಾಧ್ಯಮಗಳಲ್ಲಿ ಹಲವು ರೀತಿಯ ವರದಿಗಳು ಬರುತ್ತಿದ್ದವು,...

Read moreDetails
ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

May 22, 2026
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
Next Post
40,000 ವರ್ಷಗಳಿಂದ ಭಾರತೀಯರ DNA ಒಂದೇ, ನಮ್ಮೆಲ್ಲರ ಪೂರ್ವಜರೂ ಒಂದೇ: ಮೋಹನ್ ಭಾಗವತ್

40 ಸಾವಿರ ವರ್ಷಗಳಿಂದಲೂ ಭಾರತೀಯರ ಡಿಎನ್ಎ ಒಂದೇ ಆಗಿದೆ : ಮೋಹನ್ ಭಾಗವತ್ ಹೇಳಿಕೆ ಶ್ರೇಷ್ಠತಾ ವ್ಯಸನದ ಪರಾಕಾಷ್ಠೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada