ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ಗೆ ಸುಪ್ರೀಂಕೋರ್ಟ್ ಆಘಾತ ನೀಡಿದೆ. ಇಂದು ನಡೆದ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ವಿಚಾರಣೆಗೆ ಇನ್ನೂ 1 ವರ್ಷ ಸಮಯವನ್ನು ನೀಡಿದೆ.

ಅಲ್ಲದೆ ಒಂದು ವರ್ಷದ ಕಾಲ ಸಂಪೂರ್ಣ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕಾಲಾವಕಾಶ ನೀಡಿದೆ. ಒಂದು ವರ್ಷದಲ್ಲಿ ಬಹತೇಕ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಹೀಗಾಗಿ ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಕೋರ್ಟ್ ಅಲ್ಲಿಯವರೆಗೆ ಜಾಮೀನು ನೀಡಲು ನಿರಾಕರಿಸಿದೆ. ಈ ಆದೇಶದಿಂದ ಮುಂದಿನ ವರ್ಷ ಮೇ 15ರವರೆಗೆ ದರ್ಶನ್ಗೆ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.
ಅನಗತ್ಯ ಕಾರಣ ನೀಡಿ ಸಾಕ್ಷ್ಯ ವಿಚಾರಣೆ ಮುಂದೂಡಬಾರದು, 1 ವರ್ಷದಲ್ಲಿ ಬಹುತೇಕ ಅರ್ಜಿಯ ವಿಚಾರಣೆ ನಡೆಯದಿದ್ದರೆ ಮತ್ತೆ ಅರ್ಜಿಯ ಪರಿಶೀಲನೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ದರ್ಶನ್ ಮಧ್ಯಂತರ ಜಾಮೀನು ಅರ್ಜಿಯಲ್ಲಿ ಏನಿತ್ತು..?
ಪ್ರಮುಖವಾಗಿ ಜೈಲಿನಲ್ಲಿ ಸೌಲಭ್ಯಗಳ ಕೊರತೆಯಾಗುತ್ತಿದೆ, ನನ್ನ ಕುಟುಂಬವನ್ನು ಭೇಟಿ ಮಾಡಲು ಜೈಲಧಿಕಾರಿಗಳಿಂದ ಅವಕಾಶ ಸಿಗುತ್ತಿಲ್ಲ, ಆರೋಗ್ಯ ಸಮಸ್ಯೆ ಕಾಡುತ್ತಿದೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆಗಳು ನಡೆಯುತ್ತಿವೆ, ಅಲ್ಲದೆ ಕ್ವಾರಂಟೈನ್ ಸೆಲ್ನಲಿ ಇಟ್ಟಿರುವುಸು ಸೇರಿ ಹೀಗೆ ಅನೇಕ ಕಾರಣಗಳೊಂದಿಗೆ ದರ್ಶನ್ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
ಸುಪ್ರೀಂಕೋರ್ಟ್ ಹೇಳಿದ್ದೇನು..?
ಇವರು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಸಾಕ್ಷ್ಯಗಳ ವಿಚಾರಣೆಗೆ ತುಂಬಾ ವಿಳಂಬವಾಗಿದೆ, 60 ಸಾಕ್ಷಿಗಳ ವಿಚಾರಣೆ ಶೀಘ್ರ ಮುಗಿಸಬೇಕಿದೆ. ಅನಗತ್ಯ ಕಾರಣ ನೀಡಿ ಸಾಕ್ಷ್ಯಗಳ ವಿಚಾರಣೆ ಮುಂದೂಡಬಾರದು. ಹೀಗಾಗಿ ಸಾಕ್ಷ್ಯಗಳ ವಿಚಾರಣೆಗೆ 1 ವರ್ಷ ಕಾಲಾವಕಾಶ ನೀಡಲಾಗಿದೆ. ಬಳಿಕ ಜಾಮೀನು ಅರ್ಜಿಯ ಪರಿಶೀಲನೆ ನಡೆಸಲಾಗುವುದು. 272 ಸಾಕ್ಷಿಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆಯಷ್ಟೇ ಆಗಿದೆ. ಇದಕ್ಕೆ ಸಂಬಂಧಿಸಿದ ವಿವರವಾದ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.





