• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಮೇಶ್ವರಕ್ಕೆ ಹೋದರೂ ತಪ್ಪಿಲ್ಲ ಶನೇಶ್ವರನ ಕಾಟ : ಲಾಕ್‌ ಡೌನ್‌ ಎಂಬ ʻರಾಜಕೀಯʼ ನಾಟಕ!

ಪ್ರತಿಧ್ವನಿ by ಪ್ರತಿಧ್ವನಿ
January 6, 2022
in ಕರ್ನಾಟಕ, ರಾಜಕೀಯ
0
ರಾಮೇಶ್ವರಕ್ಕೆ ಹೋದರೂ ತಪ್ಪಿಲ್ಲ ಶನೇಶ್ವರನ ಕಾಟ : ಲಾಕ್‌ ಡೌನ್‌ ಎಂಬ ʻರಾಜಕೀಯʼ ನಾಟಕ!
Share on WhatsAppShare on FacebookShare on Telegram

ಮತ್ತೆ ಲಾಕ್‌ ಡೌನ್‌ ವಿಚಾರ ಮುನ್ನೆಲೆಗೆ ಬಂದು ಭಾರೀ ಚರ್ಚೆಗೆ ಆದಿಯಾಡಿದೆ. ಮೊದಲ ಮತ್ತು ಎರಡನೇ ಅಲೆ ನೋಡಿ ಜನರು ಕೊರೋನಾಗಿಂತ ಹೆಚ್ಚು ಸೋತಿದ್ದು ಸರ್ಕಾರದ ಈ ಅವೈಜ್ಞಾನಿಕ ಲಾಕ್‌ ಡೌನ್‌ಗೆ. ಇದೀಗ ಮತ್ತೆ ಮೂರನೇ ಅಲೆ ಆರಂಭವಾಗಿದ್ದು, ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ ಅರ್ಥಾತ್‌ ವೀಕೆಂಡ್‌ ಲಾಕ್‌ ಡೌನ್‌ಗೆ ಜಾರಿಯಾಗಿದೆ. ಅಲ್ಲದೆ ಹುಚ್ಚು ಸರ್ಕಾರದ ತುಚ್ಛ ಆಟಕ್ಕೆ ಲಾಕ್‌ ಡೌನ್‌ ಜಾರಿಯಾದರೂ ಅಚ್ಚರಿ ಪಡಬೇಕಿಲ್ಲ.

ADVERTISEMENT

ಜನವರಿ 7ರ ನಂತರ ಮತ್ತೆ ಹೊಸದಾದ ಮಾರ್ಗಸೂಚಿ ಜಾರಿಯಾಗುತ್ತಿದ್ದು, ಈ ಪೈಕಿ ವೀಕೆಂಡ್‌ ಕರ್ಫ್ಯೂ ಕೂಡ ಒಂದು. ಎಂದರೆ ಹೆಚ್ಚು ಕಮ್ಮಿ ವಾರದ ಎರಡು ದಿನಗಳ ಲಾಕ್‌ ಡೌನ್‌ ಜಾರಿಯಾಗುತ್ತಿದೆ. ಈಗಾಗಲೇ ಕಳೆದ ಕೆಲ ಲಾಕ್‌ ಡೌನ್‌ ನಲ್ಲಿ ನರಕಯಾತನೆ ಅನುಭವಿಸಿ ರೋಸಿಹೋಗಿರುವ ಜನರು ಈಗ ಮತ್ತೊಂದು ಲಾಕ್‌ ಡೌನ್‌ ಎಂಬ ನಾಟಕಕ್ಕೆ ಸಜ್ಜಾಗ ಬೇಕಿದೆ. ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲಿ ಸ್ವೀಡನ್‌ ದೇಶದ ಸಾಂಕ್ರಾಮಿಕ ಶಾಸ್ತ್ರತಜ್ಞ ಮಾರ್ಟಿನ್‌ ಕಾಲ್‌ಡಾರ್ಫ್‌ ಈ ಲಾಕ್‌ ಡೌನ್‌ ಬೇಕು ಬೇಡಗಳ ಬಗ್ಗೆ ಬಹಳ ಪರಿಣಾಮಕಾರಿಯಾಗಿ ವಿಷಯ ಮಂಡಿಸಿದ್ದರು.

ಈ ವೇಳೆ ಕೊರೋನಾ ತಡೆಗಟ್ಟುವಲ್ಲಿ ಲಾಕ್‌ ಡೌನ್‌ ಎಷ್ಟರ ಮಟ್ಟಿಗೆ ಪಾತ್ರವಹಿಸಲಿದೆ ಎಂಬುವುದರ ಕುರಿತು ವಿಸ್ತ್ರತವಾಗಿ ಮಾತನಾಡಿದ್ದರು. ʻʻಸಾಂಕ್ರಾಮಿಕ ರೋಗಶಾಸ್ತ್ರತಜ್ಞರು 2020ರ ಮಾರ್ಚ್‌ನಲ್ಲಿ ಏನನ್ನು ಮನಗಂಡಿದ್ದರೋ ಅದೀಗ ಎಲ್ಲರಿಗೂ ಸ್ಪಷ್ಟವಾಗಿದೆ. ಕೋವಿಡ್‌ ಅನ್ನು ನಿಗ್ರಹಿಸಲು ಸಾಧ್ಯವಿಲ್ಲ. ಲಾಕ್‌ ಡೌನ್‌ಗಳು ಸೋಂಕು ಹರಡುವಿಕೆಯನ್ನು ಮುಂದೂಡುತ್ತವೆ ಮತ್ತು ಸಾಂಕ್ರಾಮಿಕ ಅವಧಿಯನ್ನು ವಿಸ್ತರಿಸುತ್ತವೆ. ಅಲ್ಲದೆ ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣಕ್ಕೂ ಧಕ್ಕೆಯುಂಟು ಮಾಡುತ್ತವೆʼʼ ಎಂದು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಯೋಚಿಸಿದರೆ ಲಾಕ್‌ ಡೌನ್‌ ಎಂಬುವುದು ಕೊರೋನಾ ವೈರಾಣು ಹರಡುವುದನ್ನು ತಡೆಯುವ ಬದಲು ಮುಂದೂಡುತ್ತದೆ ಎನ್ನುವುದು ಮನಗಾಣಬಹುದು. ಆದರೆ ಇಲ್ಲಿನ ಸರ್ಕಾರ ವೈರಾಣು ಶಾಸ್ತ್ರದ, ಸಾಂಕ್ರಾಮಿಕ ಶಾಸ್ತ್ರದ ಗಂಧಗಾಳಿ ಗೊತ್ತಿಲ್ಲದ ವೈದ್ಯರನ್ನು ಸಲಹಾ ಸಮಿತಿಯಲ್ಲಿಟ್ಟುಕೊಂಡು ಪದೇ ಪದೇ ಲಾಕ್‌ ಡೌನ್‌ ಹೇರಲು ಮುಂದಾಗುತ್ತಿರುವುದು ಒಪ್ಪೊತ್ತಿನ ಹಿಟ್ಟಿಗಾಗಿ ಹೋರಾಡುವ ಬಡ ಜನರ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ ಎಂಬ ಕನಿಷ್ಠ ಜ್ಞಾನವನ್ನು ಕಳಕೊಂಡಿದ್ದಾರೆ.

ಇದೇ ವಿಚಾರವಾಗಿ ನಗರದ ಪ್ರತಿಷ್ಠ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರ ಜೊತೆಗೆ ಮಾತನಾಡಿದ ಪ್ರತಿಧ್ವನಿ, ಸೋಂಕು ತಡೆಗಟ್ಟುವಲ್ಲಿ ಲಾಕ್‌ ಡೌನ್‌ ಪಾತ್ರ ನಿಜಕ್ಕೂ ಇದೆಯೇ ಎಂದು ಕೇಳಿತ್ತು. ಇದಕ್ಕೆ ಉತ್ತರಿಸಿದ ಹೆಸರು ಹೇಳಲು ಇಚ್ಚಿಸದ 55 ವರ್ಷದ ಹಿರಿಯ ವೈದ್ಯರೊಬ್ಬರು, ಇವೆಲ್ಲವೂ ರಾಜಕೀಯ ನಾಟಕ ಎಂದು ಒಂದೇ ಮಾತಿನಲ್ಲಿ ಸೋಂಕು ತಡೆಗಟ್ಟುವಲ್ಲಿ ಲಾಕ್‌ ಡೌನ್‌ ಪಾತ್ರ ದೊಡ್ಡದು ಎಂಬ ಸರ್ಕಾರದ, ತಾಂತ್ರಿಕ ಸಲಹಾ ಸಮಿತಿಯ ಹಾಗೂ ಮಾಧ್ಯಮಗಳ ವಾದವನ್ನು ತಳ್ಳಿಹಾಕಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಸೋಂಕು ತಡೆಗಟ್ಟಲು ಬೇಕಿರುವು ಜನರಲ್ಲಿ ತಿಳುವಳಿಕೆ ಮೂಡಿಸುವುದು. ಅಗತ್ಯಕ್ಕೂ ಮೀರಿ ವೈದ್ಯಕೀಯ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ಲಸಿಕೆಯನ್ನು ಪರಿಣಾಮಕಾರಿಯಾಗಿ ನೀಡುವುದು ಎಂದರು.

ಈಗಾಗಲೇ ದಿನದಿಂದ ದಿನಕ್ಕೆ ಸರ್ಕಾರ ಕೊಡುತ್ತಿರುವ ಮಾಹಿತಿಯ ಪ್ರಕಾರ ಸೋಂಕು ಹೆಚ್ಚಳವಾಗುತ್ತಿದೆ. ಇದೇ ರೀತಿಯಲ್ಲಿ ಮುಂದುವರೆದರೆ ದಿನವೊಂದಕ್ಕೆ 25 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಕೊರೋನಾ, ಓಮೈಕ್ರಾನ್‌ಗಿಂತ ಭೀಕರವಾದ ಲಾಕ್‌ ಡೌನ್‌ಗೆ ಜನರು ಹೈರಾಣಾಗಿ ಹೋಗಲಿದ್ದಾರೆ. ಗತಿಗೆಟ್ಟ ಸರ್ಕಾರ ಇಂಥಾ ಮತಿಗೆಟ್ಟ ನಿರ್ಧಾರಗಳಿಗೆ ಬಡವರು ಹಾಗೂ ತಳವರ್ಗದವರು ತಮ್ಮ ಬದುಕನ್ನು ಕಾಣಿಕೆಯಾಗಿ ನೀಡಬೇಕಿದೆ. ಅಂತರರಾಷ್ಟ್ರೀಯ ವೈದ್ಯರೂ ಕೂಡ ಲಾಕ್‌ ಡೌನ್‌ ನಿಂದ ಸೋಂಕು ತಡೆಗಟ್ಟಲು ಸಾಧ್ಯವೇ ಇಲ್ಲ ಎಂದು ಶರಾ ಬರೆಯುವ ಹೊತ್ತಲ್ಲಿ ಇಲ್ಲಿನ ಸರ್ಕಾರಗಳು ಮತ್ತೊಂದು ಲಾಕ್‌ ಡೌನ್‌ ಎನ್ನುತ್ತಲೇ ಜನರ ಜೀವ ಹಿಂಡುತ್ತಿದೆ. ಸರ್ಕಾರ ಈ ಲಾಕ್‌ ಡೌನ್‌ ನಾಟಕಕ್ಕೆ ಸಿಲುಕಿದ ಜನರು, ರಾಮೇಶ್ವರಕ್ಕೆ ಹೋದರು ತಪ್ಪಿಲ್ಲ ಶನೇಶ್ವರನ ಕಾಟ ಎಂಬ ಮಾತುಗಳನ್ನು ಒಳಗೊಳಗಿಂದಲೇ ಆಡಿಕೊಳ್ಳುವಂತಾಗಿದೆ.

Tags: ರಾಮೇಶ್ವರಲಾಕ್‌ ಡೌನ್‌
Previous Post

‘ಪ್ರಾಣ ಹೋದರೂ ಸರಿ, ಮೇಕೆದಾಟು ಪಾದಯಾತ್ರೆ ಮಾಡಿಯೇ ತೀರುತ್ತೇವೆ: ಡಿ.ಕೆ. ಶಿವಕುಮಾರ್

Next Post

ರೆಡಿ ಇದೆ “ವೆಡ್ಡಿಂಗ್ ಗಿಫ್ಟ್” : ಶೂಟಿಂಗ್ ಮುಗಿಸಿದ ವಿಕ್ರಂ ಪ್ರಭು ಚಿತ್ರ

Related Posts

ದೇವೇಗೌಡರ ರಾಜ್ಯಸಭೆ ಟಿಕೆಟ್ ವಿವಾದಕ್ಕೆ ನಾಳೆ ತೆರೆ? ಜೆಪಿ ಭವನದಲ್ಲಿ ಮಾಜಿ ಪ್ರಧಾನಿಯ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ

ದೇವೇಗೌಡರ ರಾಜ್ಯಸಭೆ ಟಿಕೆಟ್ ವಿವಾದಕ್ಕೆ ನಾಳೆ ತೆರೆ? ಜೆಪಿ ಭವನದಲ್ಲಿ ಮಾಜಿ ಪ್ರಧಾನಿಯ ಮಹತ್ವದ ಸುದ್ದಿಗೋಷ್ಠಿ

by ಪ್ರತಿಧ್ವನಿ
June 9, 2026
0

ಬೆಂಗಳೂರು: ರಾಜ್ಯಸಭಾ ಚುನಾವಣೆಯ ರಾಜಕೀಯ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಹೆಸರು ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ....

Read moreDetails
ಶಕ್ತಿ ಯೋಜನೆಯ ಹೊಡೆತಕ್ಕೆ ಸಿಲುಕಿ ದುರಂತ ಅಂತ್ಯಕಂಡಿತಾ ವ್ಯಾಪಾರಿ ಕುಟುಂಬ..?

ಶಕ್ತಿ ಯೋಜನೆಯ ಹೊಡೆತಕ್ಕೆ ಸಿಲುಕಿ ದುರಂತ ಅಂತ್ಯಕಂಡಿತಾ ವ್ಯಾಪಾರಿ ಕುಟುಂಬ..?

June 9, 2026
ಟಿಎಂಸಿಯಲ್ಲಿ ಬಂಡಾಯದ ಬಿರುಗಾಳಿಯ ನಡುವೆ ದೀದಿ ಬೆನ್ನಿಗೆ ನಿಂತ ಸಂಸದರು : ಭಿನ್ನಮತೀಯರ ತರಾಟೆ

ಟಿಎಂಸಿಯಲ್ಲಿ ಬಂಡಾಯದ ಬಿರುಗಾಳಿಯ ನಡುವೆ ದೀದಿ ಬೆನ್ನಿಗೆ ನಿಂತ ಸಂಸದರು : ಭಿನ್ನಮತೀಯರ ತರಾಟೆ

June 9, 2026
ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ಅವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

June 9, 2026
ಮಹಿಳೆಯರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ : ಖರ್ಗೆ ವಾಗ್ದಾಳಿ

ಮಹಿಳೆಯರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ : ಖರ್ಗೆ ವಾಗ್ದಾಳಿ

June 9, 2026
Next Post
ರೆಡಿ ಇದೆ “ವೆಡ್ಡಿಂಗ್ ಗಿಫ್ಟ್” : ಶೂಟಿಂಗ್ ಮುಗಿಸಿದ ವಿಕ್ರಂ ಪ್ರಭು ಚಿತ್ರ

ರೆಡಿ ಇದೆ "ವೆಡ್ಡಿಂಗ್ ಗಿಫ್ಟ್" : ಶೂಟಿಂಗ್ ಮುಗಿಸಿದ ವಿಕ್ರಂ ಪ್ರಭು ಚಿತ್ರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada