• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಲಿಂಗಾಯತ ನಾಯಕರಿಲ್ಲದೆ ಬಿಜೆಪಿ ಗೆಲ್ಲಲ್ಲ ಎಂದ ಪ್ರದೀಪ್‌ ಶೆಟ್ಟರ್:‌ ಪಕ್ಷದ ನಾಯಕರಿಂದಲೇ ಆಕ್ಷೇಪ

ಪ್ರತಿಧ್ವನಿ by ಪ್ರತಿಧ್ವನಿ
September 3, 2023
in Top Story, ಕರ್ನಾಟಕ, ರಾಜಕೀಯ
0
ಲಿಂಗಾಯತ ನಾಯಕರಿಲ್ಲದೆ ಬಿಜೆಪಿ ಗೆಲ್ಲಲ್ಲ ಎಂದ ಪ್ರದೀಪ್‌ ಶೆಟ್ಟರ್:‌ ಪಕ್ಷದ ನಾಯಕರಿಂದಲೇ ಆಕ್ಷೇಪ
Share on WhatsAppShare on FacebookShare on Telegram

ವೀರಶೈವ ಲಿಂಗಾಯತ ನಾಯಕರು ಬಿಜೆಪಿಯ ನಾಯಕರಾದರೆ ಮಾತ್ರ ಬಿಜೆಪಿ ಗೆಲ್ಲಲು‌ ಸಾಧ್ಯ ಎಂಬ ಎಮ್‌ಎಲ್‌ಸಿ ಸದಸ್ಯ ಪ್ರದೀಪ್ ಶೆಟ್ಟರ್‌ ಹೇಳಿಕೆಗೆ ಬಿಜೆಪಿ ಪಕ್ಷದ ನಾಯಕರಿಂದ ಅಸಮಾಧಾನ ವ್ಯಕ್ತವಾಗಿದೆ.

ADVERTISEMENT

ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳ ಮಠ ಅವರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರದೀಪ್ ಶೆಟ್ಟರ್ ಹೇಳಿಕೆ ಖಂಡನೀಯ. ಬಿಜೆಪಿಯಿಂದ ಎರಡು ಬಾರಿ ವಿಧಾನಪರಿಷತ್‌ಗೆ ಆಯ್ಕೆಯಾದವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ನಿಮ್ಮಂತಹ ನಾಯಕರು ಮಾರ್ಗದರ್ಶನ ಮಾಡಬೇಕು. ಅದನ್ನು ಬಿಟ್ಟು ಇಂತಹ ಹೇಳಿಕೆ ನೀಡಬಾರದು. ಕಾರ್ಯಕ್ರಮಕ್ಕೆ ನಿಮ್ಮನ್ನು ಕರೆಯದಿದ್ದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಲು ನಾವು ಸಿದ್ಧ. ಆದರೆ, ಬಿಜೆಪಿ ಚಿಹ್ನೆ ಮೇಲೆ ಎರಡು ಬಾರಿ ಎಂಎಲ್‌ಸಿ ಆಗಿಯೂ ಈ ರೀತಿ ಮಾತಾಡುವುದು ಸರಿಯಲ್ಲ. ಜಗದೀಶ್ ಶೆಟ್ಟರ್ ಆರು ಬಾರಿ ಶಾಸಕರಾಗಿದ್ದೂ ವೈಯಕ್ತಿಕ ವರ್ಚಸ್ಸಿನಿಂದ ಅಲ್ಲ, ಬದಲಾಗಿ ಬಿಜೆಪಿ ಚಿಹ್ನೆಯಿಂದಲೇ ಎಂದು ಬಸವರಾಜ ಹೇಳಿದ್ದಾರೆ.

ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ತುಳಿದಿರುವುದು ಬಿಜೆಪಿಯ ಸೋಲಿಗೆ ಕಾರಣವಾಗಿದೆ ಎಂದು ಜಗದೀಶ್‌ ಶೆಟ್ಟರ್‌ ಸಹೋದರ ಪ್ರದೀಪ್ ಶೆಟ್ಟರು ಆರೋಪಿಸಿದ್ದರು. ಅಲ್ಲದೆ, ಅನೇಕ ಲಿಂಗಾಯತ ನಾಯಕರು ಒಂದು ಕಾಲು ಪಕ್ಷದಿಂದ ಹೊರಗಡೆ ಇಟ್ಟಿದ್ದಾರೆ ಎಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದರು.

ಅದಾಗ್ಯೂ, ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಅನೇಕ ಕಾಂಗ್ರೆಸ್ ದೊಡ್ಡ ನಾಯಕರು ನನ್ನ ಸಂಪರ್ಕ ಮಾಡಿದ್ದಾರೆ ಎಂದು ಶೆಟ್ಟರ್‌ ಹೇಳಿದ್ದರು.

ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವುದು ಸಮಸ್ಯೆ ಆಗಿದೆ ಎಂದು ಹೇಳಿದ ಅವರು, ಈಗ ಪಕ್ಷದಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿದೆ. ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರೇ ಇಲ್ಲ. ಬಿಜೆಪಿ ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಲಿಂಗಾಯತ ನಾಯಕರಿಗೆ ಮೋಸ ಆಗುತ್ತಿರುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇವೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಬಿಜೆಪಿಯಲ್ಲಿ ಇರುವುದೇ ಅಲ್ಪ ಸ್ವಲ್ಪ ಲಿಂಗಾಯತ ನಾಯಕರು. ಅವರನ್ನು ಅವಗಣನೆ ಮಾಡಿದ್ರೆ ಬಿಜೆಪಿ ಕೆಟ್ಟ ಸ್ಥಿತಿಗೆ ಹೋಗತ್ತೆ. ರಾಜ್ಯದ ಬಿಜೆಪಿ ಉಸ್ತುವಾರಿಗಳು ಬದಲಾಗಬೇಕು ಎಂದು ಅವರು ಹೇಳಿದ್ದರು.

ಬಿಜೆಪಿ ತನ್ನನ್ನೂ ಕಡೆಗಣನೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, “ನಾನು ಎಮ್‌ಎಲ್‌ಸಿ ಆಗಿದ್ದರೂ ಕಾರ್ಯಕ್ರಮಗಳಿಗೆ ನನ್ನ ಆಹ್ವಾನಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನನ್ನ ಕರೆದಿಲ್ಲ. ಇದೊಂದೆ ಕಾರ್ಯಕ್ರಮ ಅಲ್ಲ. ನಾಲ್ಕೈದು ಕಾರ್ಯಕ್ರಮಕ್ಕೆ ಕಡೆಗಣಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.  

Tags: BJPjagadeesh shettarPradeep Shettarಪ್ರದೀಪ್‌ ಶೆಟ್ಟರ್‌ಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಕಾಂಗ್ರೆಸ್‌ನೊಂದಿಗೆ ವಿಲೀನದ ಕುರಿತು ಅಂತಿಮ ಹಂತದಲ್ಲಿ ಮಾತುಕತೆ, ಕಾರ್ಯಕರ್ತರ ಸಭೆ ನಂತರ ನಿರ್ಧಾರ: ವೈಎಸ್ ಶರ್ಮಿಳಾ

Next Post

ಸನಾತನ ಧರ್ಮದ ಬಗ್ಗೆ ಸ್ಟಾಲಿನ್‌ ಪುತ್ರ ಟೀಕೆ: ವಿಪಕ್ಷಗಳು ಹಿಂದೂ ಧರ್ಮವನ್ನು ದ್ವೇಷಿಸುತ್ತಿದೆ ಎಂದ ಅಮಿತ್‌ ಶಾ

Related Posts

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?
Top Story

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

by ಪ್ರತಿಧ್ವನಿ
April 21, 2026
0

ಬೆಂಗಳೂರು: ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್‌ಡಿ ದೇವೇಗೌಡರಿಗೆ (Former Prime Minister, Rajya Sabha Member HD Deve Gowda) ಇದೀಗ ಮುಖ್ಯಮಂತ್ರಿ...

Read moreDetails
ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

April 20, 2026
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
Next Post
ಸನಾತನ ಧರ್ಮದ ಬಗ್ಗೆ ಸ್ಟಾಲಿನ್‌ ಪುತ್ರ ಟೀಕೆ: ವಿಪಕ್ಷಗಳು ಹಿಂದೂ ಧರ್ಮವನ್ನು ದ್ವೇಷಿಸುತ್ತಿದೆ ಎಂದ ಅಮಿತ್‌ ಶಾ

ಸನಾತನ ಧರ್ಮದ ಬಗ್ಗೆ ಸ್ಟಾಲಿನ್‌ ಪುತ್ರ ಟೀಕೆ: ವಿಪಕ್ಷಗಳು ಹಿಂದೂ ಧರ್ಮವನ್ನು ದ್ವೇಷಿಸುತ್ತಿದೆ ಎಂದ ಅಮಿತ್‌ ಶಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!