ನಿರ್ದೇಶಕ ಪುರಿ ಜಗನ್ನಾಥ್ ನಟ ವಿಜಯ್ ದೇವರಕೊಂಡ ಕಾಂಬಿನೇಷನ್ನ ಲೈಗರ್ಚಿತ್ರ ವಿಶ್ವದಾದ್ಯಂತ ತೆರೆಕಂಡಿದ್ದು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಡುಗಡೆಯಾದ ಎರಡೇ ದಿನಕ್ಕೆ ಬಾಕ್ಸ್ ಆಫೀಸಿನಲ್ಲಿ ತೀವ್ರ ಕುಸಿತ ಕಂಡಿದ್ದು ಈ ನಡುವೆ ಸಿನಿಮಾಕ್ಕೆ ದಿ ಇಂಟರ್ನೆಟ್ ಮೂವಿ ಡೇಟಾಬೇಸ್(IMDB)ಯಲ್ಲಿ ಚಿತ್ರಕ್ಕೆ ಅತ್ಯಂತ ಕಡಿಮೆ ರೇಟಿಂಗ್ ದೊರೆತಿರುವುದು ಎಲ್ಲರಲ್ಲು ಅಚ್ಚರಿ ಮೂಡಿಸಿದೆ.
IMDBಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಚಿತ್ರಕ್ಕೆ ರೇಟಿಂಗ್ ನೀಡಿದ್ದು ಸಿನಿಮಾಗೆ 10ಕ್ಕೆ 1.7 ದೊರೆತಿದೆ. ಬಾಲಿವುಡ್ ನಟ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ(5.0) ರೇಟಿಂಗ್ ಅನ್ನು ಲೈಗರ್ ಹಿಂದಿಕ್ಕಿದೆ.

ಈ ಕುರಿತು ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಚಿತ್ರದಲ್ಲಿ ಯಾವುದೇ ಕಥೆಯಿಲ್ಲ ಚಿತ್ರ ನೀರಸವಾಗಿದ್ದು ಯಾವುದೇ ಮನರಂಜನೆಯನ್ನು ನೀಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇತ್ತ ಕೆಲವರು ನಾಯಕ ಹಾಗೂ ನಾಯಕಿ ಇಬ್ಬರಿಗೂ ನಟನೆ ಬರುವುದಿಲ್ಲ ಇಬ್ಬರು ಸೂಕ್ತವಾದ ತರಬೇತಿ ಪಡೆಯುವುದು ಉತ್ತಮ ಎಂದಿದ್ದಾರೆ. ಇನ್ನು ಕೆಲವರು ಈ ಚಿತ್ರವನ್ನು ಥಿಯೇಟರ್ಗೆ ಹೋಗಿ ನೋಡಿ ನಿಮ್ಮ ಅಮೂಲ್ಯವಾದ ಸಮಯವನ್ನ ಹಾಳು ಮಾಡಿಕೊಳ್ಳಬೇಡಿ ಇದು ಒಟಿಟಿಯಲ್ಲಿ ನೋಡಲು ಯೋಗ್ಯವಾದ ಸಿನಿಮಾ ಅಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಲೈಗರ್ ಚಿತ್ರವನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ(ಟ್ರೋಲ್) ಮಾಡಲಾಗಿದ್ದು ಪುರಿ ಜಗನ್ನಾಥ್ ಚಿತ್ರದ ದೃಶ್ಯವನ್ನ ಹಾಕಿ ಚಿತ್ರವನ್ನ ಟೀಕಿಸಲಾಗಿದೆ.