ಚಿತ್ರದುರ್ಗ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಅವರು ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಹಾಸ್ಟೆಲ್ ವಾರ್ಡನ್ ನೀಡಿದಂತ ದೂರಿನ ಆಧಾರದ ಮೇಲೆ, ಅವರ ವಿರುದ್ಧ ರೇಪ್ ಕೇಸ್ ದಾಖಲಾಗಿದೆ ಚಿತ್ರದುರ್ಗ ಎಸ್.ಪಿ. ಪರುಶುರಾಮ ಹೇಳಿದ್ದಾರೆ.
ಈ ಸಂಬಂಧ ಹಾಸ್ಟೆಲ್ ನ ಲೇಡಿ ವಾರ್ಡನ್ ಒಬ್ಬರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ದೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಅತ್ಯಾಚಾರ ಎಸಗಿರೋದಾಗಿ ಆರೋಪಿಸಲಾಗಿದೆ ಎಂದು ಹೇಳಿದ್ದಾರೆ.
ಹಾಸ್ಟೆಲ್ ವಾರ್ಡನ್ ನೀಡಿದಂತ ದೂರಿನ ಆಧಾರದ ಮೇಲೆ ಮಾಜಿ ಶಾಸಕ ಎಸ್ ಕೆ ಬಸವರಾಜನ್ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಎ1 ಆರೋಪಿಯಾಗಿ ಎಸ್ ಕೆ ಬಸವರಾಜನ್ ಮಾಡಲಾಗಿದ್ದರೇ, ಅವರ ಪತ್ನಿ ಸೌಭಾಗ್ಯ ಎ.2 ಆರೋಪಿಯಾಗಿಸಲಾಗಿದೆ ಎಂದು ಚಿತ್ರದುರ್ಗ ಎಸ್.ಪಿ. ಪರುಶುರಾಮ ಹೇಳಿದ್ದಾರೆ.

ಮತ್ತೊಂದೆಡೆ ಮುರುಘಾ ಶರಣರಿಗೆ ಜೀವ ಬೆದರಿಕೆ ಆರೋಪದಲ್ಲಿಯೂ ಎಸ್ ಕೆ ಬಸವರಾಜನ್ ವಿರುದ್ಧ ದೂರು ನೀಡಲಾಗಿದೆ. ಈ ಸಂಬಂಧವೂ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.