ನ್ಯಾಯಾಲಯದ ಸೂಚನೆ ನಂತರವೂ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯುತ್ತಿರುವ ಸಾರಿಗೆ ಸೇವೆಗಳಾದ ಓಲಾ, ಉಬರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸಾರಿಗೆ ಆಯುಕ್ತರಿಗೆ ಮಂಗಳವಾರ (ಆಗಸ್ಟ್ 22) ಪತ್ರ ಬರೆದಿದೆ.

ಓಲಾ ಮತ್ತು ಉಬರ್ ಆಪ್ ಆಧಾರಿತ ಸಂಸ್ಥೆಗಳಾಗಿದ್ದು ಚಾಲಕರು ಮತ್ತು ಪ್ರಯಾಣಿಕರ ಬಳಿ ಹಗಲು ದರೋಡೆ ನಡೆಸುತ್ತಿರುವುದು ಸಾರಿಗೆ ಇಲಾಖೆಗೆ ದೂರು ಬಂದಾಗ, ಅಂದಿನ ಕಮಿಷನರ್ ನೋಟೀಸ್ ನೀಡಿದ್ದರು.
ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಕಂಪನಿಗಳ ಅರ್ಜಿಯನ್ನು ಸ್ವೀಕರಿಸಿ, ದಿನಾಂಕ 2022ರ ಅಕ್ರೋಬರ್ 10ರ ಮಧ್ಯಂತರ ಅರ್ಜಿಯಲ್ಲಿ ಉಬರ್ ಮತ್ತು ಓಲಾ ಶೇ 10ಕ್ಕಿಂತಲೂ ಹೆಚ್ಚು ಕಮಿಷನ್ ಪಡೆಯಬಾರದು ಎಂದು ಆದೇಶ ನೀಡಿತ್ತು,
ಕೇಸ್ ಇನ್ನು ಬಾಕಿ ಇದ್ದು ಮಧ್ಯಂತರ ಆದೇಶ ಜೇವಂತವಾಗಿರುವಾಗ, ಆದೇಶವನ್ನು ಉಲ್ಲಂಘಸಿ 20 ರಿಂದ 33 % ವರೆಗೂ ಕಮಿಷನ್ ಪಡೆಯುತ್ತಿದ್ಧು ಇಂದು ನ್ಯಾಯಾಲಕ್ಕ್ಕೆ ಧಾಖಲೆ ಸಮೇತ, ಸ್ವಯಂ. ನ್ಯಾಯಾಂಗ ನಿಂದನೆಯನ್ನು ಧಾಖಲಿಸಲು ಉಚ್ಚ ನ್ಯಾಯಾಲದಲ್ಲಿ ಸಲ್ಲಿಸಲಾಯಿತು, ಇದಕ್ಕೆ ಸರ್ಕಾರ ಉತ್ತರಿಸಬೇಕಿದೆ, ಅದೇ ರೀತಿಯಲ್ಲಿ ಸಾರಿಗೆ ಆಯುಕ್ತರಿಗೂ ಸಹಾ ದೂರು ದಾಖಲಿಸಬೇಕು ಮತ್ತು ಕ್ರಮ ಜರಿಗಿಸಲು ಒಕ್ಕೂಟ ಪತ್ರದಲ್ಲಿ ಕೋರಿದೆ.






