ಮುಡಾ ಹಗರಣಕ್ಕೆ (MUDA) ಸಂಬಂಧಿಸಿದಂತೆ ED ಸುಮಾರು 300 ಕೋಟಿ ರೂಪಾಯಿಗಳ 142 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ನಾನು ಸ್ನೇಹಮಯಿ ಕೃಷ್ಣ (Snehamayi krishna) ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಇದುವರೆಗೂ ಸ್ನೇಹಮಯಿ ಕೃಷ್ಣ ಅವರ ಅವರ ದನಿಯನ್ನು ಹತ್ತಿಕ್ಕುವ ಕೆಲಸ ಮಾಡಿತ್ತು.ಈಗ ಜಾರಿ ನಿರ್ದೇಶನಾಲಯ (ED) ಸಿದ್ಧರಾಮಯ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ಅವರ ವಿರುದ್ಧವು ಕೂಡ ಸರ್ಕಾರ ಹೇಳಿಕೆ ಕೊಟ್ಟಿತ್ತು ಎಂದು ಟೀಕಿಸಿದ್ದಾರೆ.

ಈ ವಿಚಾರದಲ್ಲಿ ನಮಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರ ಯಾವುದೇ ಮೇಲೆ ವಿರೋಧವಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾಗ, ತಮ್ಮಿಂದ ತಪ್ಪಾದಾಗ ರಾಜೀನಾಮೆ ನೀಡಬೇಕು.ಈಗಲೂ ಕಾಲ ಮಿಂಚಿಲ್ಲ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ.
ಹೀಗಾಗಿ ಈ ತಕ್ಷಣವೇ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು.ಮುಡಾದಲ್ಲಿ ಅಕ್ರಮ ಆಗಿರುವುದು ಸತ್ಯ.ಈ ಮುಡಾ ಅಕ್ರಮವನ್ನು ಸಿಬಿಐಗೆ ವಹಿಸಬೇಕು ಮತ್ತು ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದ್ದಾನೆ.