ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು( CM Siddaramaiahi ) ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಹಲವು ಕಾರ್ಯಕ್ರಮಗಳಿವೆ ಅವರು ವ್ಹೀಲ್ ಚೇರ್ ಮೇಲೆಯ ಬಂದಿದ್ದು ಕೂಡ ಸಾಕ್ಷಿ. ಆದರೆ ಇದನ್ನೇ ಇಟ್ಟುಕೊಂಡು ಅವರ ಬಗ್ಗೆ ಲೇವಡಿ ಮಾಡುವುದು ಎಷ್ಟು ಸರಿ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ ವಿಧಾನ ಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ.

ಸಿಎಂ ಮಂಡಿ ನೋವಿನ ಬಗ್ಗೆ ಛಲವಾದಿ ನಾರಾಯಣ ಸ್ವಾಮಿ ( Chalavadi Narayanaswamy ) ಲೇವಡಿ ಮಾಡಿದ್ದಾರೆ. ಜನರಿಗೆ ಅನ್ಯಾಯ ಮಾಡಿದ್ದಕ್ಕೆ ಈ ರೀತಿಯಾಗಿದೆ ಎಂದು ಕೇವಲವಾಗಿ ಮಾತನಾಡಿದ್ದಾರೆ. ಭಾಷಣ ಮಾಡುವ ಭರದಲ್ಲಿ ಛಲವಾದಿ ನಾರಾಯಣಸ್ವಾಮಿ ನೀವ ಜನಕ್ಕೆ ಅನ್ಯಾಯ ಮಾಡಿದ್ದೀರಿ. ನಮ್ಮವರ ಹಣ ದುರುಪಯೋಗ ಮಾಡಿಕೊಂಡಿದ್ದೀರಿ. ಹೀಗೆ ಮಾಡಿದ್ದಕ್ಕೆ ಇಂದು ನೀವು ಕುಂಟುತ್ತಿದ್ದೀರಿ ಎಂದು ಹೇಳಿದ್ದಾರೆ.

ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನಿಮಗೆ ಈ ಸ್ಥಿತಿ ಬಂದಿದೆ. ಗ್ಯಾರಂಟಿಗಳನ್ನು ನೀವು ಕೊಟ್ಟೆ ಇಲ್ಲ. ನಮ್ಮಲ್ಲಿ ವಿದ್ಯಾವಂತರು ಹೆಚ್ಚಾಗ್ತಿದ್ದಾರೆ, ಆದ್ರೆ ನಿರುದ್ಯೋಗ ಹೆಚ್ಚಾಗಿದೆ. ಪೇಪರ್ಗಳಲ್ಲಿ ಅಷ್ಟೇ ಗ್ಯಾರಂಟಿ ಇದೆ. ನಮಗೆ ಆ ಗ್ಯಾರಂಟಿ ಸಿಗುತ್ತಿಲ್ಲ. ಗುಲಾಮಗಿರಿಯ ಸುಖದ ಸಂಭ್ರಮ ಮಾಡ್ತಿದ್ದಾರೆ ಅವರು. ದಲಿತರು ಬೀದಿಯಲ್ಲಿ ಕುಳಿತಿದ್ದೇವೆ.ದಲಿತರಿಗೆ ಅನ್ಯಾಯ ಮಾಡಿದ್ದಕ್ಕೆ ಕುಂಟುವ ಹಾಗಾಗಿದೆ. ವ್ಹೀಲ್ಚೇರ್ ಬಂದಿದೆ. ಎಂದು ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.