• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಷೇರುಪೇಟೆಯಲ್ಲೀಗ ಐಪಿಒ ಸುಗ್ಗಿ, ಹೂಡಿಕೆದಾರರಿಗೆ ಹಬ್ಬ

ಪ್ರತಿಧ್ವನಿ by ಪ್ರತಿಧ್ವನಿ
November 11, 2021
in ಕರ್ನಾಟಕ, ದೇಶ
0
ಷೇರುಪೇಟೆಯಲ್ಲೀಗ ಐಪಿಒ ಸುಗ್ಗಿ, ಹೂಡಿಕೆದಾರರಿಗೆ ಹಬ್ಬ
Share on WhatsAppShare on FacebookShare on Telegram

ಕರೊನಾ ಸಂಕಷ್ಟ ಪೂರ್ಣವಾಗಿ ಮುಗಿಯುವ ಮುನ್ನವೇ ಬಂಡವಾಳ ಪೇಟೆಯಲ್ಲಿ ಐಪಿಒಗಳ ಸುಗ್ಗಿ ಆರಂಭವಾಗಿದ್ದು, ಹೂಡಿಕೆದಾರರಿಗೆ ನಿತ್ಯವೂ ಹಬ್ಬದ ವಾತವರಣ. ನವೆಂಬರ್ 10 ರಂದು ಬಾಂಬೆ ಸ್ಟಾಕ್ ಎಕ್ಸ್ಚೆಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ (ಎನ್ಎಸ್ಇ) ನಲ್ಲಿ ಲಿಸ್ಟ್ ಆದ ನೈಕಾ (ಎಫ್ಎಸ್ಎನ್ ಇ-ಕಾಮರ್ಸ್) ಕಂಪನಿಯ ಷೇರುಗಳು ಹೂಡಿಕೆದಾರರಿಗೆ ಮೊದಲ ದಿನವೇ ಶೇ.100 ರಷ್ಟು ಲಾಭ ತಂದುಕೊಟ್ಟಿದೆ. 

ADVERTISEMENT

ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ದರ 1125 ರುಪಾಯಿ ನಿಗದಿ ಮಾಲಾಗಿತ್ತು. ನೈಕಾ ತಾನು ವಿತರಣೆಗೆ ನೀಡಲು ಮೀಸಲಾಗಿದ್ದ ಷೇರುಗಳ 91 ಪಟ್ಟು ಹೆಚ್ಚು ಬೇಡಿಕೆ ಪಡೆದಿತ್ತು. ಬಿಎಸ್ಐ ನಲ್ಲಿ 2001 ರುಪಾಯಿಗೆ, ಎನ್ಎಸ್ಇನಲ್ಲಿ 2018 ರುಪಾಯಿಗಳಿಗೆ ಅಂದರೆ, ಶೇ.79ರಷ್ಟು ಲಾಭಾಂಶದೊಂದಿಗೆ ಲಿಸ್ಟ್ ಆಯಿತು.  ದಿನದ ವಹಿವಾಟಿನ ವೇಳೆ 2248 ರುಪಾಯಿಗೆ ಜಿಗಿದಿದ್ದ ನೈಕಾ ಷೇರು ವಹಿವಾಟಿನ ಮೊದಲ ದಿನವೇ ಶೇ.100ರಷ್ಟು ಲಾಭ ತಂದುಕೊಟ್ಟಿದೆ. ಅಷ್ಟೇ ಅಲ್ಲದೇ ಆರಂಭದ ದಿನವೇ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 1 ಲಕ್ಷ ಕೋಟಿ ರುಪಾಯಿ ದಾಟಿದೆ.

2021ರಲ್ಲಿ ಷೇರುಪೇಟೆ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಷ್ಟು ಕಂಪನಿಗಳು ಬಂಡವಾಳ ಪೇಟೆಗೆ ದಾಪುಗಾಲಿಟ್ಟಿವೆ. ಇದುವರೆಗಿನ ಐಪಿಐಗಳ ಸಂಖ್ಯೆಯು ಅರ್ಧ ಶತಕ ದಾಟಿದೆ. ಮತ್ತೊಂದು ಪ್ರಮುಖ ಮೈಲಿಗಲ್ಲು ಏನೆಂದರೆ, ಭಾರತದ ಷೇರುಪೇಟೆಯ ಅತಿ ದೊಡ್ಡ ಐಪಿಒ ಪೇಟಿಎಂ ಕಂಪನಿಯದು. 18,300 ಕೋಟಿ ರುಪಾಯಿಗಳ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ. ಪ್ರತಿ ಷೇರಿನ ದರ ಕನಿಷ್ಠ 2,080 ಮತ್ತು ಗರಿಷ್ಠ 2150 ರುಪಾಯಿ ನಿಗದಿ ಮಾಡಲಾಗಿದೆ. ವಿಜಯಶಂಕರ ಶರ್ಮ ಪ್ರವರ್ತಕರಾಗಿರುವ ಪೇಟಿಎಂ (ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್) ಷೇರುಗಳಿಗೆ ನಿರೀಕ್ಷಿತ ಬೇಡಿಕೆ ಬಂದಿಲ್ಲ. ಒಟ್ಟಾರೆ ಚಿಲ್ಲರೆ ಹೂಡಿಕೆದಾರರಿಂದ 1.8ರಷ್ಟು ಪಟ್ಟು ಬೇಡಿಕೆ ಬಂದಿದೆ. ಸಾಂಸ್ಥಿಕ ಹೂಡಿಕೆದಾರರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಆದರೆ, ವಿತರಣೆ ಪೂರ್ವದಲ್ಲೇ ಏಂಜೆಲ್ ಇನ್ವೆಸ್ಟರ್ ಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. 

ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿರುವ ಮತ್ತು ಡಿಜಿಟಲ್ ಪೇಮೆಂಟ್ ವ್ಯವಸ್ಥೆ ವ್ಯಾಪಕವಾಗಿ ಹರಡಲು ಕಾರಣವಾಗಿರುವ ಪೇಟಿಎಂನಲ್ಲಿ ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ ಹೆಚ್ಚಿನ ಪಾಲು ಹೊಂದಿದೆ. ಪೇಟಿಎಂ ಮುಂದಿನ ವಾರ ಬಿಎಸ್ಇ ಮತ್ತು ಎನ್ಎಸ್ಇ ಗಳಲ್ಲಿ ಲಿಸ್ಟ್ ಆಗಲಿದೆ. ಆಗ ಪೇಟಿಎಂನಲ್ಲಿ ದುಡಿಯುತ್ತಿರುವ ಕನಿಷ್ಠ 1000ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ವಿವಿಧ ಸಂದರ್ಭಗಳಲ್ಲಿ ಇಸಾಪ್ (ಎಂಪ್ಲಾಯಿ ಸ್ಟಾಕ್ ಆಫ್ಶನ್) ಮೂಲಕ ಷೇರುಗಳನ್ನು ವಿತರಿಸಿದೆ. 10 ರುಪಾಯಿ ಮೌಲ್ಯದ ಆ ಷೇರುಗಳು ಈಗ 2000 ರುಪಾಯಿ ಮೇಲ್ಪಟ್ಟ ಮೌಲ್ಯ ಬಂದಿದೆ.

ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿದ ಮೊತ್ತದ ಆಧಾರದ ಮೇಲೆ ಗರಿಷ್ಠ ಬಂಡವಾಳ ಸಂಗ್ರಹಿಸಿದ ಭಾರತದ ಅತಿದೊಡ್ಡ ಐಪಿಒಗಳ ವಿವರ ಇಲ್ಲಿದೆ. ಈ ಹತ್ತು ಕಂಪನಿಗಳ ಪೈಕಿ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳು ಬ್ಯಾಂಕುಗಳು ಮತ್ತು ಅಂಗ ಸಂಸ್ಥೆಗಳ ಐದು ಕಂಪನಿಗಳು ಸೇರಿವೆ. ಕೋಲ್ ಇಂಡಿಯಾ, ಜನರಲ್ ಇನ್ಸುರೆನ್ಸ್ ಕಾರ್ಪೋರೆಷನ್ ಆಫ್ ಇಂಡಿಯಾ ಎಸ್ಬಿಐ ಕಾರ್ಡ್ ಅಂಡ್ ಪೇಮೆಂಟ್ ಸರ್ವೀಸ್, ನ್ಯೂ ಇಂಡಿಯಾ ಅಷ್ಯೂರೆನ್ಸ್, ಎಸ್ಬಿಐ ಲೈಫ್ ಇನ್ಸುರೆನ್ಸ್- ಈ ಐದು ಕಂಪನಿಗಳ ಪೈಕಿ ನಾಲ್ಕು ಕಂಪನಿಗಳು 2017ರ ನಂತರ ಲಿಸ್ಟಾಗಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕೋಲ್ ಇಂಡಿಯಾದ ಶೇ.10ರಷ್ಟು ಷೇರುಗಳನ್ನು ಸಾರ್ವಜನಿರಿಗೆ ವಿತರಿಸಲಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಂಗ ಸಂಸ್ಥಗಳಾಗಿದ್ದ ಎಸ್ಪಿಐ ಕಾರ್ಡ್ ಮತ್ತು ಎಸ್ಬಿಐ ಲೈಫ್ ಇನ್ಸುರೆನ್ಸ್ ಗಳನ್ನು ಪ್ರತ್ಯೇಕ ಸಂಸ್ಥೆಗಳನ್ನಾಗಿ ಬೇರ್ಪಡಿಸಿದೆ. ಪೇಟಿಎಂ ಮುಂದಿನವಾರ ಲಿಸ್ಟಾಗಬೇಕಿದೆ. ಈಗ ಲಿಸ್ಟಾಗಿರುವ ಪಟ್ಟಿಯಲ್ಲಿರುವ 9 ಕಂಪನಿಗಳ ಪೈಕಿ ರಿಲಯನ್ಸ್ ಪವರ್ ಕಂಪನಿಯಲ್ಲಿ ಹೂಡಿಕೆ ಮಾಡಿದವರು ಭಾರಿ ನಷ್ಟ ಅನುಭವಿಸಿದ್ದಾರೆ. ಉಳಿದ ಕಂಪನಿಗಳಲ್ಲಿ ಹೂಡಿಕೆ ಮಾಡಿದವರು ಲಾಭ ಪಡೆದಿದ್ದಾರೆ.

ಪೇಟಿಎಂ (2021)- ₹18,300 ಕೋಟಿ 

ಕೋಲ್ ಇಂಡಿಯಾ (2010) – ₹15,199  ಕೋಟಿ

ಜನರಲ್ ಇನ್ಸುರೆನ್ಸ್ ಕಾರ್ಪೋರೆಷನ್ ಆಫ್ ಇಂಡಿಯಾ (2017) ₹11,275 ಕೋಟಿ

ಎಸ್ಬಿಐ ಕಾರ್ಡ್ ಅಂಡ್ ಪೇಮೆಂಟ್ ಸರ್ವೀಸ್ (2020) ₹10,341 ಕೋಟಿ

ರಿಲಯನ್ಸ್ ಪವರ್ (2008) ₹10,123 ಕೋಟಿ

ನ್ಯೂಇಂಡಿಯಾ ಅಷ್ಯೂರೆನ್ಸ್ (2017) ₹9,586 ಕೋಟಿ

ಜೊಮ್ಯಾಟೊ (2021) ₹9,375 ಕೋಟಿ

ಡಿಎಲ್ಎಫ್ (2007) ₹9,188 ಕೋಟಿ

ಎಚ್ಡಿಎಫ್ಸಿ ಲೈಫ್ ಇನ್ಸುರೆನ್ಸ್ (2017) ₹8,695 ಕೋಟಿ

ಎಸ್ಬಿಐ ಲೈಫ್ ಇನ್ಸುರೆನ್ಸ್ (2017) ₹8,389  ಕೋಟಿ

Tags: ಐಪಿಒಷೇರುಪೇಟೆಸುಗ್ಗಿಹೂಡಿಕೆದಾರ
Previous Post

ಟಿಪ್ಪು ನಿನ್ನದೇನಿದೆ ತಪ್ಪು ನಮ್ಮ ಕಣ್ಣೋಟವೇ ಕಪ್ಪು

Next Post

ಸಕ್ರೆಬೈಲ್ ಮುದ್ದಿನ ಮರಿಯಾನೆಗೆ ಪುನೀತ್ ಹೆಸರು!

Related Posts

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌
Top Story

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

by ಪ್ರತಿಧ್ವನಿ
February 6, 2026
0

ನಿನ್ನೆ ಗುಜರಾತ್‌ನ ವಡೋದರಾದಲ್ಲಿರುವ ಕೋಟಂಬಿಯ BCA ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಡೆಲ್ಲಿ ಕ್ಯಾಪಿಟಲ್ಸ್(DC)...

Read moreDetails
Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

February 6, 2026
ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

February 6, 2026
Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

February 6, 2026
BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

February 5, 2026
Next Post
ಸಕ್ರೆಬೈಲ್ ಮುದ್ದಿನ ಮರಿಯಾನೆಗೆ ಪುನೀತ್ ಹೆಸರು!

ಸಕ್ರೆಬೈಲ್ ಮುದ್ದಿನ ಮರಿಯಾನೆಗೆ ಪುನೀತ್ ಹೆಸರು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada