• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಕ್ರೆಬೈಲ್ ಮುದ್ದಿನ ಮರಿಯಾನೆಗೆ ಪುನೀತ್ ಹೆಸರು!

ಪ್ರತಿಧ್ವನಿ by ಪ್ರತಿಧ್ವನಿ
November 11, 2021
in ಕರ್ನಾಟಕ
0
ಸಕ್ರೆಬೈಲ್ ಮುದ್ದಿನ ಮರಿಯಾನೆಗೆ ಪುನೀತ್ ಹೆಸರು!
Share on WhatsAppShare on FacebookShare on Telegram

ರಾಜ್ಯದ ಉದ್ದಗಲಕ್ಕೆ ರಸ್ತೆ, ವೃತ್ತ, ಪಾರ್ಕುಗಳಿಗೆ ಪುನೀತ್ ರಾಜಕುಮಾರ್ ಹೆಸರಿಟ್ಟು ಅಭಿಮಾನಿಗಳು ಅವರ ನೆನಪು ಹಸಿರಾಗಿರಿಸುವ ಯತ್ನ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದ ಜನಪ್ರಿಯ ಆನೆ ಬಿಡಾರವಾದ ಸಕ್ರೆಬೈಲಿನ ಮರಿಯಾನೆಯೊಂದಕ್ಕೆ ಪುನೀತ್ ಅವರ ಹೆಸರಿಡಲು ಶಿವಮೊಗ್ಗ ವನ್ಯಜೀವಿ ವಿಭಾಗ ತೀರ್ಮಾನಿಸಿದೆ.

ADVERTISEMENT

ಸಾಮಾನ್ಯವಾಗಿ ಆನೆ ಬಿಡಾರದಲ್ಲಿ ಹುಟ್ಟುವ ಮರಿಗಳಿಗೆ ದೇವರ  ಹೆಸರು ಇಡುವುದು ವಾಡಿಕೆ. ಕೆಲವೊಮ್ಮೆ ಹಿರಿಯ ಅಧಿಕಾರಿಗಳ ಹೆಸರನ್ನು ಇಡುವುದೂ ಇದೆ. ಆದರೆ ಇದೇ ಮೊದಲ ಬಾರಿಗೆ ಸಕ್ರೆಬೈಲ್ ಆನೆ ಬಿಡಾರದ ಆಡಳಿತ, ಗಂಡು ಮರಿಯಾನೆಯೊಂದಕ್ಕೆ ‘ಪುನೀತ್’  ನಾಮಕರಣ ಮಾಡಿದೆ.

ಅದಕ್ಕೆ ಕಾರಣ, ಪುನೀತ್  ಅವರಿಗೆ ವನ್ಯಜೀವಿಗಳ ಮೇಲೆ ಇದ್ದ ಪ್ರೀತಿ. ಕೆಲವು ದಿನಗಳ ಹಿಂದಷ್ಟೇ ಸಕ್ರೆಬೈಲಿಗೆ ಡಾಕ್ಯುಮೆಂಟರಿಯೊಂದರ ಶೂಟಿಂಗ್ ಗಾಗಿ ಬಂದಿದ್ದ ಪುನೀತ್ ಆಗತಾನೇ ಜನಿಸಿದ್ದ ಆ ಪುಟ್ಟ ಮರಿಯಾನೆಯನ್ನು ಅಪ್ಪಿ ಮುದ್ದಾಡಿದ್ದರು. ಅದೇ ಮೊದಲ ಸಲ ಸಕ್ರೆಬೈಲಿನ ಆನೆ ಬಿಡಾರಕ್ಕೆ ಭೇಟಿ ನೀಡಿದ್ದ ಅಪ್ಪು, ಅಲ್ಲಿದ್ದ ಎಳೆಯ ಆ ಮರಿಯಾನೆಯನ್ನು ಕಂಡು ಮಗುವಂತೆ ಮುದ್ದಾಡಿದ್ದರು. ಆ ಹಿನ್ನೆಲೆಯಲ್ಲೇ ಇದೀಗ, ಅಪ್ಪು ಅಗಲಿಕೆಯ ಬಳಿಕ ಅದೇ ಮರಿಯಾನೆಗೆ ಪುನೀತ್ ಎಂದು ನಾಮಕಾರಣ ಮಾಡಲಾಗಿದೆ.

ಪುನೀತ್ ಭೇಟಿ ನೀಡಿದಾಗ ಕ್ರಾಲ್ ನಲ್ಲಿದ್ದ ನೇತ್ರ ಹೆಣ್ಣಾನೆ ಮತ್ತು ಅದರ ಮರಿಯಾನೆಯನ್ನು ಕಂಡ ಅವರು, ಆ ತಾಯಿ ಮಗುವಿನ ಬಗ್ಗೆ ಮಾಹುತರಿಂದ ಮತ್ತು ವನ್ಯಜೀವಿ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದರು.

ಈ ನಡುವೆ ಬುಧವಾರ ಸಕ್ರೆಬೈಲು ಆನೆ ಬಿಡಾರದಲ್ಲಿ ನೇತ್ರ ಮತ್ತು ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ತಾಯಿಯಿಂದ ಬೇರ್ಪಡುವ ಮರಿಯಾನೆಗೆ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಲಾಗಿದೆ. ಇದು ವನ್ಯಜೀವಿ ವಿಭಾಗ, ವನ್ಯಜೀವಿ ಪ್ರೇಮಿ ಪುನೀತ್ ಅವರಿಗೆ ತೋರಿದ ದೊಡ್ಡ ಗೌರವ.

ವಿಶೇಷ ಅಂದರೆ, ಹೀಗೆ ಮರಿಯಾನೆಗಳಿಗೆ ಹೆಸರಿಡುವ ಪ್ರಕ್ರಿಯೆಯೇ ವಿಶೀಷ್ಟ. ಸಾಮಾನ್ಯವಾಗಿ ಮರಿಯಾನೆ ಹುಟ್ಟಿದ ಕೂಡಲೇ ಅದಕ್ಕೊಂದು ಹೆಸರಿಟ್ಟು ಕೂಗುವ ಪದ್ದತಿಯಿಲ್ಲ. ಬದಲಾಗಿ ಮರಿಯಾನೆಯನ್ನು ಅದರ ತಾಯಿ ಆನೆಯಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆಸಿ, ಅದನ್ನು ಪ್ರತ್ಯೇಕವಾಗಿ ಇರಿಸಿದ ನಂತರವಷ್ಟೆ ಮರಿಯಾನೆಗೆ ಹೆಸರನ್ನ ಇಡಲಾಗುತ್ತದೆ.  ಎಳೆ ಮರಿಗೆ ಸ್ತತಂತ್ರವಾಗಿ ಬದುಕುವ ತರಬೇತಿ ನೀಡುವ ಸಲುವಾಗಿ ಅದರ ತಾಯಿಯಿಂದ ಬೇರ್ಪಡಿಸುವ ಪ್ರಕ್ರಿಯೆಗೆ ವೀನಿಂಗ್ ಎನ್ನಲಾಗುತ್ತದೆ.

ಬುಧವಾರ ಸಕ್ರೆಬೈಲಿನ ಕ್ರಾಲ್ ನಲ್ಲಿ ನೇತ್ರ ಮತ್ತು ಅದರ ಮರಿ ಪುನೀತ್ ರನ್ನು ವೀನಿಂಗ್ ಮೂಲಕ ಬೇರ್ಪಡಿಸಲಾಯಿತು ಮತ್ತು ಇದೇ ಸಂದರ್ಭದಲ್ಲಿ ಮುದ್ದಿನ ಮರಿಗೆ ಪುನೀತ್ ಹೆಸರನ್ನು ನಾಮಕರಣಮಾಡಲಾಯಿತು!

Tags: ಆನೆಪುನೀತ್ ರಾಜ್ ಕುಮಾರ್ಸಕ್ಕರೆಬೈಲು
Previous Post

ಷೇರುಪೇಟೆಯಲ್ಲೀಗ ಐಪಿಒ ಸುಗ್ಗಿ, ಹೂಡಿಕೆದಾರರಿಗೆ ಹಬ್ಬ

Next Post

2022ರ ಯುಪಿ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ: ಮಹಿಳೆಯರಿಗೆ ಭರ್ಜರಿ ಪ್ಯಾಕೇಜ್‌ ಘೋಷಿಸಿದ ಪ್ರಿಯಾಂಕ ಗಾಂಧಿ!

Related Posts

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ
Top Story

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

by ನಾ ದಿವಾಕರ
August 29, 2026
0

ಭಾರತೀಯ ಪ್ರಜಾತಂತ್ರ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ? ವಸಾಹತು ಆಳ್ವಿಕೆಯಲ್ಲಿ , 1947ರ ಹೊಸ್ತಿಲಲ್ಲೂ ಸಹ ಶೇಕಡಾ 13ರಷ್ಟು ಭಾರತೀಯರು ಮಾತ್ರ ಮತದಾನದ ಹಕ್ಕು ಹೊಂದಿದ್ದರು....

Read moreDetails
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
ರೈಲ್ವೆ ಚತುಷ್ಪಥ ಯೋಜನೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ ಪಾಟೀಲ್‌ ಖಂಡನೆ

ರೈಲ್ವೆ ಚತುಷ್ಪಥ ಯೋಜನೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ ಪಾಟೀಲ್‌ ಖಂಡನೆ

August 28, 2026
Next Post
2022ರ ಯುಪಿ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ: ಮಹಿಳೆಯರಿಗೆ ಭರ್ಜರಿ ಪ್ಯಾಕೇಜ್‌ ಘೋಷಿಸಿದ ಪ್ರಿಯಾಂಕ ಗಾಂಧಿ!

2022ರ ಯುಪಿ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ: ಮಹಿಳೆಯರಿಗೆ ಭರ್ಜರಿ ಪ್ಯಾಕೇಜ್‌ ಘೋಷಿಸಿದ ಪ್ರಿಯಾಂಕ ಗಾಂಧಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada