ಮೈಸೂರು (mysuru) ಕ್ಷೇತ್ರದಿಂದ ಸಂಸದ ಪ್ರತಾಪ ಸಿಂಹಗೆ (prathap simha) ಮತ್ತೆ ಟಿಕೆಟ್ ಸಿಗಲ್ಲ, ಈಗಾಗಲೇ ಮೈಸೂರು ಕಡಗು ಕ್ಷೇತ್ರದ ಟಿಕೆಟ್ (ticket) ಪೂನಲ್ ಆಗಿದ್ದು ಖುದ್ದು ಅಮಿತ್ ಶಾ (amith sha) ಯದುವೀರ್ ಒಡೆಯರ್ (yaduveer odeyar) ಜೊತೆ ಮಾತನಾಡಿದ್ದಾರೆ. ಈ ಬಾರಿ ಬಿಜೆಪಿಯಿಂದ (bjp) ಯದುವೀರ್ ಕಣಕ್ಕಿಳಿಯೋದು ಖಾತ್ರಿ ಎಂಬ ಸುದ್ದಿಗಳ ನಡುವೆ, ಮಂಗಳವಾರ ತಡರಾತ್ರಿ ಅಚ್ಚರಿಯ ಬೆಳವಣಿಗೆಯಾಗಿದೆ.
ಮಂಗಳವಾರ ತಡರಾತ್ರಿ ಸಂಸದ ಪ್ರತಾಪ್ ಸಿಂಹ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಡಾ.ರಾಧಮೋಹನ ದಾಸ್ ಅಗರವಾಲ್(Dr.radha mohan das) ಅವರನ್ನ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ತಮ್ಮ ಟಿಕೆಟ್ (ticket) ವಿಚಾರಚಾಗಿ ಹುಟ್ಟಿಕೊಂಡಿರುವ ಗೊಂದಲಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದಾರೆ. ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು(developement works) ಮತ್ತು ತಮಗಿರುವ ಜನ ಬೆಂಬಲದ ಬಗ್ಗೆ ಇದೇ ಸಂದರ್ಭದಲ್ಲಿ ಡಾ.ರಾಧಾ ಮೋಹನ್ ದಾಸ್ರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಈ ಭೇಟಿ ಮತ್ತು ಮಾತುಕಥೆ ಬಳಿಕ ಟ್ವಿಟ್(tweet) ಮಾಡಿರುವ ಪ್ರತಾಪ್ ಸಿಂಹ ಮತ್ತೊಮ್ಮೆ ತಮಗೇ ಟಿಕೆಟ್ ಸಿಗೋ ವಿಶ್ವಾಸ ಹೊರಹಾಕಿದ್ದಾರೆ. ಆದ್ರೆ ಇತ್ತ ಪ್ರತಾಪ್ ಸಿಂಹಗೆ (prathap simha) ಟಿಕೆಟ್ ಕೈತಪ್ಪೋ ಚರ್ಚೆ ವ್ಯಾಪಕವಾಗಿರೋದು ಅವರ ಅಭಿಮಾನಗಳನ್ನ ತೀವ್ರವಾಗಿ ಕೆರಳಿಸಿದೆ. ಹೀಗಾಗಿ, ಪ್ರತಾಪ್ ಸಿಂಹ ಅಭಿಮಾನಿಗಳು, ಬೆಂಬಲಿಗರು ಇಂದು ಬೆಳಗ್ಗೆ 11 ಗಂಟೆಗೆ ಮೈಸೂರು(mysuru) ಹಿನಕಲ್ ಫೈ ಓವರ್ ಕೆಳಗೆ ಧರಣಿಗೆ ಮುಂದಾಗಿದ್ದಾರೆ..ಆ ಮೂಲಕ ಮೂರನೇ ಬಾರಿಯೂ ಪ್ರತಾಪ್ ಸಿಂಹ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಲಿದ್ದಾರೆ.