
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ SDA ಆತ್ಮಹತ್ಯೆ ಮಾಡಿಕೊಂಡಿದ್ದು, 35 ವರ್ಷದ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ. ತಹಶೀಲ್ದಾರ್ ಬಸವರಾಜ ನಾಗರಾಳ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿನ್ನೆಯಷ್ಟೆ ಸವದತ್ತಿ ತಹಶೀಲ್ದಾರ್ ಕಚೇರಿಗೆ ವರ್ಗಾವಣೆ ಆಗಿದ್ದರು ಎನ್ನಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣ ಆಗಿದೆ.
ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ SDA ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೂ ಮೊದಲು ಮೂವರ ಹೆಸರು ಉಲ್ಲೇಖ ಮಾಡಿದ್ದಾರೆ. ತಹಶೀಲ್ದಾರ್ ಕಚೇರಿ ವಾಟ್ಸಾಪ್ ಗ್ರೂಪ್ನಲ್ಲಿ ಮೂವರ ಹೆಸರು ಉಲ್ಲೇಖ ಮಾಡಿದ್ದು, ತಹಶೀಲ್ದಾರ್ ಬಸವರಾಜ್ ನಾಗರಾಳ್, ಸೋಮು ಹಾಗು ಅಶೋಕ್ ಕಬ್ಬಳಿಗರ್ ಕಾರಣ ಎಂದಿದ್ದಾರೆ. ಸೋಮು ಹೆಸರು ಬೆಳಗಾವಿ ರಾಜಕೀಯದಲ್ಲಿ ಚಿರಪರಿಚಿತ ಆಗಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕ ಎನ್ನಲಾಗಿದೆ. ತನ್ನ ಸಾವಿಗೆ ಸೋಮು ಕಾರಣ ಎಂದು ಉಲ್ಲೇಖಿಸಿದ್ದಾರೆ.

SDA ರುದ್ರಣ್ಣ ಯಡವಣ್ಣವರ್ ಸಾವಿನ ಸುದ್ದಿ ಕೇಳಿ ಪ್ರಜ್ಞೆ ತಪ್ಪಿದ್ದಾರೆ ಪತ್ನಿ ಗಿರಿಜಾ. ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರೋ ಗಿರಿಜಾ, ಪತಿಯ ಮೃತದೇಹ ನೋಡಿ ಪ್ರಜ್ಞೆ ತಪ್ಪಿದ್ದಾರೆ. ಸ್ಥಳದಲ್ಲಿ ರುದ್ರಣ್ಣ ತಾಯಿ ಮಲ್ಲಮ್ಮ ಆಕ್ರಂದನ ಮುಗಿಲು ಮುಟ್ಟಿದೆ. ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ SDA ರುದ್ರಣ್ಣ ಯಡವಣ್ಣವರ್ ಬಗ್ಗೆ ಪೊಲೀಸ್ರು ತನಿಖೆ ನಡೆಸಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಪಂಚನಾಮೆ ನಡೆಸಿ ಶವ ಶಿಪ್ಟ್ ಮಾಡಿದ್ದಾರೆ.
ಕುಟುಂಬಸ್ಥರ ಸಮ್ಮುಖದಲ್ಲೇ ಪೊಲೀಸರು ಪಂಚನಾಮೆ ಮಾಡಿದ್ದಾರೆ. ಶವ ಕೆಳಕ್ಕೆ ತರ್ತಿದ್ದಂತೆ ತಾಯಿ, ಪತ್ನಿ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶವ ಶಿಪ್ಟ್ ಮಾಡಲಾಗಿದೆ. ವಾಟ್ಸಪ್ ಮೆಸೇಜ್ ಬಗ್ಗೆಯೂ ತನಿಖೆ ಮಾಡ್ತೀವಿ ಅಂತಾ ಬೆಳಗಾವಿ ಡಿಸಿ ಮಹಮ್ಮದ್ ರೋಷನ್ ಹೇಳಿದ್ದಾರೆ.
