ADVERTISEMENT
  • Home
  • About Us
  • ಕರ್ನಾಟಕ
Saturday, May 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅದ್ಧೂರಿಯಾಗಿ ಜರುಗಿದ ದ್ರೌಪದಮ್ಮನ ಹೂವಿನ ಕರಗ

ಕೃಷ್ಣ ಮಣಿ by ಕೃಷ್ಣ ಮಣಿ
April 13, 2025
in Top Story, ಕರ್ನಾಟಕ, ವಿಶೇಷ
0
ಅದ್ಧೂರಿಯಾಗಿ ಜರುಗಿದ ದ್ರೌಪದಮ್ಮನ ಹೂವಿನ ಕರಗ
Share on WhatsAppShare on FacebookShare on Telegram

ಸಾವಿರಾರು ಭಕ್ತರ ಜಯಘೋಷ ನಡುವೆ ಅದ್ಧೂರಿ ಕರಗೋತ್ಸವ ನಡೆದಿದೆ. ಸಾವಿರಾರು ಭಕ್ತರು, ನೂರಾರು ವೀರ ಕುಮಾರರ ಜಯಘೋಷದ ಜೊತೆಗೆ ನಟ್ಟ ನಡುರಾತ್ರಿ ದ್ರೌಪದಮ್ಮನ ಕರಗ ದೇವಸ್ಥಾನದಿಂದ ಹೊರ ಬಂತು. ತುಂತುರು ಮಳೆಯ ನಡುವೆ ಕರಗ ಹೊತ್ತ ಅರ್ಚಕ ಜ್ಞಾನೇಂದ್ರ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ ನಡೆಯುತ್ತಿದ್ರೆ, ಖಡ್ಗ ಹಿಡಿದ ವೀರ ಕುಮಾರರು ಸುತ್ತಲು ಕುಣಿಯುತ್ತಾ ಸಾಗಿದರು.

ADVERTISEMENT

ಧರ್ಮರಾಯಸ್ವಾಮಿ ದೇಗುಲ ನವ ವಧುವಿನಂತೆ ಸಿಂಗಾರಗೊಂಡಿತ್ತು. ದೇವಸ್ಥಾನದ ಸುತ್ತಮುತ್ತಲೂ ಸಾವಿರಾರು ಭಕ್ತರು ನೆರೆದಿದ್ರು. 15ನೇ ಬಾರಿ ಹೂವಿನ ಕರಗ ಹೊತ್ತ ಅರ್ಚಕ ಜ್ಞಾನೇಂದ್ರ, ಧರ್ಮರಾಯ ದೇವಸ್ಥಾನ ಪ್ರದಕ್ಷಿಣೆ ಮಾಡಿ, ಕುಂಬಾರ ಪೇಟೆ ರಸ್ತೆ, ರಾಜ ಮಾರ್ಕೆಟ್ ಸರ್ಕಲ್-ಸಿಟಿ ಮಾರ್ಕೆಟ್ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ರು. ಆ ಬಳಿಕ ಸಿಟಿ ಮಾರ್ಕೆಟ್ ಸರ್ಕಲ್-ಪೊಲೀಸ್ ರೋಡ್, ಮಸ್ತಾನ್ ಸಾಬ್ ದರ್ಗಾ, ಬಳೇಪೇಟೆ ಸರ್ಕಲ್, ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಕಬ್ಬನ್ ಪೇಟೆ ಮುಖ್ಯ ರಸ್ತೆ ಮೂಲಕ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಕರಗ ವಾಪಸ್​ ಆಯ್ತು.

ಕರಗ ಆರಂಭಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದ್ರು. ಸಿಎಂ ಸಿದ್ದರಾಮಯ್ಯ ಜೊತೆಗೆ ಗೋವಿಂದರಾಜ್​, ಪಿ.ಆರ್​ ರಮೇಶ್​​ ಸೇರಿದಂತೆ ಹಲವಾರು ನಾಯಕರು ಸಾಥ್ ನೀಡಿದ್ರು. ಸಚಿವ ರಾಮಲಿಂಗಾರೆಡ್ಡಿ, ಡಿಸಿಎಂ ಡಿ.ಕೆ ಶಿವಕುಮಾರ್​ ಕೂಡ ಕರಗಕ್ಕೆ ಭೇಟಿ ನೀಡಿ ದ್ರೌಪದಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ರು.

ಐತಿಹಾಸಿಕ ಬೆಂಗಳೂರು ಕರಗಕ್ಕೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. 7 ಮಂದಿ ಎಸಿಪಿ, 20 ಮಂದಿ ಇನ್​​ಸ್ಪೆಕ್ಟರ್​, 39 ಮಂದಿ ಪಿಎಸ್ಐ , 552 ಮಂದಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. 8 ಕೆಎಸ್​ಆರ್​ಪಿ ತುಕಡಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಹೂವಿನ ಕರಗಕ್ಕೂ ಮುನ್ನ ಮಳೆಯ ನಡುವೆ ರಥೋತ್ಸವ ಮಾಡಿದ ಬಳಿಕ ಅದ್ಧೂರಿ ಕರಗವನ್ನು ಭಕ್ತರು ಕಣ್ತುಂಬಿಕೊಂಡ್ರು.

Tags: Bangalore KaragaBanglorebengaluruKaraga
Previous Post

 ಬೆಲೆ ಏರಿಕೆಯ ಬಿಸಿ – ರಾಜಕಾರಣಿಗಳ ನಾಟಕಗಳು

Next Post

ಜಾತಿಗಣತಿ ಅಧ್ಯಯನಕ್ಕೆ ಸಿಎಂ ಸೂಚನೆ.. ವರದಿ ಓದುತ್ತಿರೋ ಮಿನಿಸ್ಟರ್ಸ್​

Related Posts

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್
Top Story

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

by ಪ್ರತಿಧ್ವನಿ
May 24, 2025
0

https://youtu.be/HvjSUDPcbes ಬೆಂಗಳೂರಿನಲ್ಲಿ ನೆಡೆದ ದುರ್ಘಟನೆ ನಡೆದಿದೆ ಇದೇ ತಿಂಗಳು ಮೇ 21ರಂದು ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಗಳಾದ ಶಶಾಂಕ್ ದಂಪತಿ ಗಳುಹಾಗೂ ಜೆಪ್ಟೋ ಎಂಬಾಲ್ಲಿ ಡೆಲಿವರಿ ಬಾಯ್...

Read moreDetails
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

May 24, 2025
ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

May 24, 2025

ಖಡಕ್ ಕಮಿಷನರ್ ಜ‌ನಸಂಪರ್ಕ ಸಭೆ- ಬೆಚ್ಚಿದ ಅಧಿಕಾರಿ ಸಿಬ್ಬಂದಿಗಳು..!

May 24, 2025
ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

May 24, 2025
Next Post
ಜಾತಿಗಣತಿ ಅಧ್ಯಯನಕ್ಕೆ ಸಿಎಂ ಸೂಚನೆ.. ವರದಿ ಓದುತ್ತಿರೋ ಮಿನಿಸ್ಟರ್ಸ್​

ಜಾತಿಗಣತಿ ಅಧ್ಯಯನಕ್ಕೆ ಸಿಎಂ ಸೂಚನೆ.. ವರದಿ ಓದುತ್ತಿರೋ ಮಿನಿಸ್ಟರ್ಸ್​

Recent News

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್
Top Story

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

by ಪ್ರತಿಧ್ವನಿ
May 24, 2025
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 
Top Story

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

by Chetan
May 24, 2025
ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 
Top Story

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

by Chetan
May 24, 2025
Top Story

ಖಡಕ್ ಕಮಿಷನರ್ ಜ‌ನಸಂಪರ್ಕ ಸಭೆ- ಬೆಚ್ಚಿದ ಅಧಿಕಾರಿ ಸಿಬ್ಬಂದಿಗಳು..!

by ಪ್ರತಿಧ್ವನಿ
May 24, 2025
ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 
Top Story

ರಾಜ್ಯ ಸರ್ಕಾರಕ್ಕೆ ಸಂಕ್ರಾಂತಿ ತನಕ ತೊಂದರೆ ಇಲ್ಲ.. ಆದ್ರೆ ಆ ನಂತರ ..?!!! : ಕೋಡಿ ಮಠದ ಶ್ರೀ ಸ್ಫೋಟಕ ಭವಿಷ್ಯ ! 

by Chetan
May 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

May 24, 2025
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

May 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!