• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಾತಿಗಣತಿ ಅಧ್ಯಯನಕ್ಕೆ ಸಿಎಂ ಸೂಚನೆ.. ವರದಿ ಓದುತ್ತಿರೋ ಮಿನಿಸ್ಟರ್ಸ್​

ಕೃಷ್ಣ ಮಣಿ by ಕೃಷ್ಣ ಮಣಿ
April 13, 2025
in Top Story, ಕರ್ನಾಟಕ, ರಾಜಕೀಯ
0
ಜಾತಿಗಣತಿ ಅಧ್ಯಯನಕ್ಕೆ ಸಿಎಂ ಸೂಚನೆ.. ವರದಿ ಓದುತ್ತಿರೋ ಮಿನಿಸ್ಟರ್ಸ್​
Share on WhatsAppShare on FacebookShare on Telegram

ಕಾಂತರಾಜು ಸಮಿತಿ ವರದಿಯನ್ನ ಅಧ್ಯಯನ ಮಾಡಿ, ಆರ್ಥಿಕ, ಸಾಮಾಜಿ, ಶೈಕ್ಷಣಿಕ ವರದಿಯನ್ನ ಓದಿಕೊಳ್ಳಿ. ಅನುಮಾನಗಳಿದ್ರೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಿ. ಸರ್ಕಾರದ ಕಾನೂನು ತಜ್ಞರಿಂದ ಅನುಮಾನ​ ಬಗೆಹರಿಸಿಕೊಳ್ಳಿ, ಜಾತಿ ಜನಗಣತಿ ವರದಿ ಎಲ್ಲೂ ಸೋರಿಕೆ ಆಗಬಾರದು. ಏನೇ ಇದ್ರೂ ಏಪ್ರಿಲ್​ 17ರೊಳಗೆ ಬಗೆಹರಿಸಿಕೊಂಡು ಸಂಪುಟ ಸಭೆಗೆ ಬನ್ನಿ. ಏಪ್ರಿಲ್​ 17ರ ವಿಶೇಷ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ಚರ್ಚಿಸಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ADVERTISEMENT

ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಸಚಿವರುಗಳೆಲ್ಲಾ ಅಭಿಪ್ರಾಯ ಹೇಳಿದ್ಮೇಲೆ ಜಾತಿ ಜನಗಣತಿ ವರದಿಗೆ ಭಿನ್ನಾಭಿಪ್ರಾಯ ಎದುರಾದರೆ ಸಂಪುಟ ಉಪಸಮಿತಿ ರಚಿಸಬಹುದು. ಸಚಿವರುಗಳಿಂದ ತೀವ್ರ ವಿರೋಧ ವ್ಯಕ್ತವಾದ್ರೆ ಜನಾಭಿಪ್ರಾಯ ಸಂಗ್ರಹಿಸೋ ಲೆಕ್ಕಾಚಾರದಲ್ಲೂ ಸಿಎಂ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಜಾತಿಜನಗಣತಿಯನ್ನ ಜಾರಿಗೆ ತರುವ ಆತುರ.. ಸಚಿವರು, ಶಾಸಕರು, ಜಾತಿವಾರು ನಾಯಕರಿಗೆ ಜಾತಿ ಜನಗಣತಿಯಲ್ಲಿ ಏನಿದೆ ಅಂತ ತಿಳಿದುಕೊಳ್ಳೋ ಕಾತುರ ಹೆಚ್ಚಾಗಿದೆ.

ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಜಾತಿ ಜನಗಣತಿ ಅಧ್ಯಯನ ಮಾಡೊಕೆ ನಮಗೂ ಹೇಳಿದ್ದಾರೆ. ಎಪ್ರಿಲ್ ‌ 17ಕ್ಕೆ ಅಂತಿಮವಾಗಿ ತೀರ್ಮಾನ ಆಗಲಿದೆ. ಅದರಲ್ಲಿ ಏನಿದೆ ಅಂತಾ ನಮಗೂ ಗೊತ್ತಿಲ್ಲ ಅಧ್ಯಯನ ಮಾಡಬೇಕು. ಜಾತಿ ಗಣತಿ ವರದಿ ಮಂಡನೆ ಆಗೋದು ಬಹಳ ಅವಶ್ಯಕತೆ ಇದೆ. ಇದು ಜನರ ಪ್ರಗತಿಗಾಗಿ ಮಾಡುತ್ತಿದ್ದೇವೆ. ಜಾತಿ ಗಣತಿಯನ್ನ ಈ ವರ್ಷ ಕೇಂದ್ರ ಸರ್ಕಾರ ಮಾಡುತ್ತಿದೆ. ಜನರ ಸ್ಥಿತಿಗತಿ ಅಧ್ಯಯನ ವರದಿ ಮಾಡಿದ್ದೇವೆ‌. ಇದಕ್ಕೆ ಯಾರು ವಿರೋಧ ಮಾಡೋ ಅವಶ್ಯಕತೆ ಇಲ್ಲ. ವರದಿಯನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ ಎಂದಿದ್ದಾರೆ.

Siddaramaiah:  ಅರ್ಜೆಂಟ್‌ನಲ್ಲೇ ಹೊರಟ ಸಿದ್ರಾಮಯ್ಯ| #pratidhvani

ಮೂರು ದಿನ ವಿಶೇಷ ಅಧಿವೇಶನ ಕರೆಯಬೇಕು, ಸದನದಲ್ಲಿ ಚರ್ಚೆ ಆಗಬೇಕು. ರಾಜ್ಯಕ್ಕೆ ಸಹ ಗೊತ್ತಾಗಬೇಕು ಅದರಲ್ಲಿ ಏನಿದೆ ಎಂದು. ಕ್ಯಾಬಿನೆಟ್ ಅಷ್ಟೇ ಅಲ್ಲದೇ ಸದನದಲ್ಲಿ ಚರ್ಚೆ ‌ಆಗಬೇಕು. ಜಾತಿಗಣತಿಗೆ ವಿರೋಧದ ಪ್ರಶ್ನೆಯೇ ಇಲ್ಲ. ಅಂಕಿ ಅಂಶಗಳ ಆಧಾರದ ಮೇಲೆ ಸದನದಲ್ಲಿ ಚರ್ಚೆ ಆಗಬೇಕು. ಹಿಂದಿನ ಸರ್ಕಾರ ಮಾಡಬೇಕಿತ್ತು ಮಾಡಲಿಲ್ಲ. ಈ ಮಧ್ಯ ಐದು ವರ್ಷ ನಮ್ಮ ಸರ್ಕಾರ ಇರಲಿಲ್ಲ. ಬೇರೆ ಬೇರೆ ಕಾರಣಗಳಿಂದ ವರದಿ ಮಂಡನೆ ಆಗಲಿಲ್ಲ.
ನಮ್ಮ ಸರ್ಕಾರದ ಪ್ರಣಾಳಿಕೆಯಂತೆ ನಾವು ವರದಿ ಮಂಡನೆ ಮಾಡುತ್ತೇವೆ. ಬಿಡಗಡೆಯಾದ ಅಂಕಿ ಅಂಶಗಳು ಕರೆಕ್ಟ್​ ಇವೆ. ಸೋರಿಕೆ ಅನೋ ಪ್ರಶ್ನೆ ಇಲ್ಲ. ಒಂದು ದಿನ ಸತ್ಯ ಹೊರಗೆ ಬರುತ್ತದೆ ಎಂದಿದ್ದಾರೆ.

ಜನಾಕ್ರೋಶ ಯಾತ್ರೆ ಡೈವರ್ಟ್ ಮಾಡೋಕೆ ಜಾತಿ ಗಣತಿ ವರದಿ ಬಿಡುಗಡೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದು, ಇದು ಶಾಶ್ವತವಾದ ಸರ್ವೇ, ಬಿಜೆಪಿ ಒಂದೆರೆಡು ದಿನದ ಹೋರಾಟ ಟೆಂಪರವರಿ ಇರುತ್ತದೆ. ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ ಅನೋದನ್ನ ಸದನದಲ್ಲಿ ಚರ್ಚೆ ಮಾಡಲಿ.‌ ರಾಜ್ಯದ ಜನತೆಗೆ ಎಲ್ಲವೂ ಗೊತ್ತಾಗಲಿ. ಸರ್ವೇಯನ್ನ ಪಕ್ಷದ ಕಾರ್ಯಕರ್ತರು ಮಾಡಿಲ್ಲ. ಬೇರೆ ಬೇರೆ ಸಮಾಜದ ಟೀಚರ್​ಗಳು ಸರ್ವೇಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾರ ಒತ್ತಡಕ್ಕೆ ಮಣಿದಿಲ್ಲ ಎಂದಿದ್ದಾರೆ ಸತೀಶ್ ಜಾರಕಿಹೊಳಿ.

Tags: BJPcasteCaste CensusCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಅದ್ಧೂರಿಯಾಗಿ ಜರುಗಿದ ದ್ರೌಪದಮ್ಮನ ಹೂವಿನ ಕರಗ

Next Post

ಜಾತಿ ಸಂಘರ್ಷ ಮಾಡಲು ಸರ್ಕಾರ ಪ್ಲ್ಯಾನ್​ ಮಾಡಿದ್ಯಾ..?

Related Posts

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”
Top Story

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಇಡೀ ರಾಜ್ಯ ಸರ್ಕಾರವೇ ನವದೆಹಲಿಗೆ ಶಿಫ್ಟ್‌ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ...

Read moreDetails
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

May 26, 2026
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

May 26, 2026
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
Next Post
ಜಾತಿ ಸಂಘರ್ಷ ಮಾಡಲು ಸರ್ಕಾರ ಪ್ಲ್ಯಾನ್​ ಮಾಡಿದ್ಯಾ..?

ಜಾತಿ ಸಂಘರ್ಷ ಮಾಡಲು ಸರ್ಕಾರ ಪ್ಲ್ಯಾನ್​ ಮಾಡಿದ್ಯಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada