![](https://pratidhvani.com/wp-content/uploads/2024/04/FB_IMG_1713977769133-1024x683.jpg)
ಕಳೆದ 2-3 ದಿನಗಳಿಂದ ಹಾಸನ Hassan ಮೂಲದ ಪ್ರಭಾವಿ ರಾಜಕಾರಣಿಯ ಅಶ್ಲೀಲ ವಿಡಿಯೋ ಸೋಷಿಯಲ್ pen drives ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡ್ತಿದೆ. ರಾಜಕೀಯ ವಲಯದಲ್ಲಿ ಈ ವಿಚಾರ ದೊಡ್ಡ ಸದ್ದು ಮಾಡ್ತಿದ್ದು, ‘ಲೋಕ’ ಎಲೆಕ್ಷನ್ ಗೂ ಮುನ್ನ ದೊಡ್ಡ ಸಂಚಲನ ಉಂಟು ಮಾಡಿದೆ. ಇದೆ ವಿಚಾರ ರಾಜಕೀಯ ನಾಯಕರ ನಡುವಿನ ಕೆಸರೆರಚಾಟಕ್ಕೂ ಸಾಕ್ಷಿಯಾಗಿದೆ. ಹಾಸನ ಮೂಲದ ಪ್ರಭಾವಿ ರಾಜಕೀಯ ಮುಖಂಡನ ಮಗನಿಗೆ ಸೇರಿದ್ದು ಎನ್ನಲಾದ ವಿಡಿಯೋ ವಿಚಾರಕ್ಕೆ KPCC ತನ್ನ ಎಕ್ಸ್ ಖಾತೆ ಟ್ವಿಟ್ ಮೂಲಕ ಸರಿಯಾಗಿಯೇ ಕೌಂಟರ್ ಕೊಟ್ಟಿದೆ.ಕುಮಾರಸ್ವಾಮಿ ಮಾತಾಡಿದ್ದ ವಿಡಿಯೋ ಹರಿಬಿಟ್ಟು ಟಾಂಗ್ ನೀಡಲಾಗಿದೆ.
![](https://pratidhvani.com/wp-content/uploads/2024/04/Screenshot_20240425-174842__01__01-773x1024.jpg)
KPCC ಕೌಂಟರ್ ಏನು..?
ಕುಮಾರಸ್ವಾಮಿಯವರೇ,
ನೀವು ತೋರಿಸಿ, ತೋರಿಸಿ ಜೇಬೋಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ?
ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ?
ಕುಮಾರಸ್ವಾಮಿಯವರೇ,
ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ??
ಎಂದು ಕುಟುಕಲಾಗಿದೆ.ಒಟ್ನಲ್ಲಿ ಯುವ ರಾಜಕೀಯ ನಾಯಕನ ಹಸಿಬಿಸಿ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ.ಮುಂದೆ ಇದು ಯಾವ ರೀತಿ ಟ್ವಿಸ್ಟ್ ಪಡೆದುಕೊಳ್ಳಲಿದೆ ಅನ್ನೋದನ್ನ ಕಾದುನೋಡಬೇಕು.