ಮಂಗಳೂರು : ಸುಪ್ರಸಿದ್ಧ ಕುಕ್ಕೆ ದೇವಸ್ಥಾನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಬರೋಬ್ಬರಿ 5000 ವರ್ಷಕ್ಕೂ ಅಧಿಕ ಇತಿಹಾಸವನ್ನು ಹೊಂದಿರುವ ಈ ದೇಗುಲ ಈ ಬಾರಿ 123 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸಿದೆ.

2022ರ ಏಪ್ರಿಲ್ ತಿಂಗಳಿನಿಂದ 2023ರ ಮಾರ್ಚ್ 31ರ ಒಳಗಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಈ ಆದಾಯವನ್ನು ಗಳಿಸಿದೆ. ಒಟ್ಟು 123,64,49,480.47 ರೂ. ಆದಾಯವನ್ನು ಸಂಗ್ರಹಿಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದೆ.
ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಬಂದ ಆದಾಯಗಳ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಈ ದೊಡ್ಡ ಮೊತ್ತದ ಆದಾಯ ಸಂಪಾದಿಸಿದೆ.