ಬೆಂಗಳೂರು : ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಇದ್ದುದ್ದಕ್ಕೆ ಹತಾಶಗೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾದಿಯನ್ನೇ ಶೆಟ್ಟರ್ ತುಳಿದಿದ್ದಾರೆ.

ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾದ ಬಳಿಕ ಶೆಟ್ಟರ್ ಈಶ್ವರಪ್ಪ ಹಾಗೂ ಯಡಿಯೂರಪ್ಪರಂತೆಯೇ ರಾಜಕೀಯ ನಿವೃತ್ತಿ ಘೋಷಿಸಬಹುದು ಎಂದು ಬಹುತೇಕರು ಊಹಿಸಿದ್ದರು. ಆದರೆ 2ನೇ ಪಟ್ಟಿಯಲ್ಲಿ ತಮ್ಮ ಹೆಸರು ಇರಬಹುದೆಂದು ಕಾಯುತ್ತಿದ್ದ ಶೆಟ್ಟರ್ ತಮ್ಮ ನಿರೀಕ್ಷೆ ಹುಸಿಯಾಗುತ್ತಿದ್ದಂತೆಯೇ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಶೆಟ್ಟರ್ ಕೆಪಿಸಿಸಿ ಎದುರು 5 ಷರತ್ತುಗಳನ್ನು ಇಟ್ಟು ಬಳಿಕ ಪಕ್ಷ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಹಾಗಾದರೆ ಆ ಐದು ಷರತ್ತುಗಳು ಯಾವುದು ಅನ್ನೋದನ್ನು ನೋಡೋದಾದ್ರೆ, ಪಕ್ಷದಲ್ಲಿ ನನ್ನ ಗೌರವಕ್ಕೆ ತಕ್ಕುದಾದ ಸ್ಥಾನಮಾನ ಸಿಗಬೇಕು. ಕಾಂಗ್ರೆಸ್ನಲ್ಲಿ ಎಂದಿಗೂ ನನ್ನ ಘನತೆಗೆ ಧಕ್ಕೆ ಬರುವಂತಹ ಕೆಲಸ ಮಾಡಬಾರದು. ಹುಬ್ಬಳ್ಳಿ ವಿಚಾರದಲ್ಲಿ ನನ್ನ ಅಭಿಪ್ರಾಯಗಳಿಗೆ ಗೌರವ ನೀಡಬೇಕು. ನನಗೆ ಮಾತ್ರವಲ್ಲದೇ ನನ್ನೊಂದಿಗೆ ಪಕ್ಷ ಸೇರುವ ನನ್ನ ಆಪ್ತರಿಗೆ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.