
ಕೆ ಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಎರಡು ವರ್ಷಗಳ ನಂತರ ಕನ್ನಂಬಾಡಿ ಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು ರೈತರಲ್ಲಿ ಸಂತಸ ಮನೆಮಾಡಿದೆ. ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಗೆ ಕನ್ನಡಿಗರ ಜೀವನಾಡಿ ಕಾವೇರಿ ಹುಕ್ಕಿ ಹರಿಯುತ್ತಿದ್ದು, ಜುಲೈ ತಿಂಗಳು ಮುಗಿಯುವ ಮುನ್ನವೇ ಕೆ ಆರ್ ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ.ಸದ್ಯ ಕೆಆರ್‌ಎಸ್ ಜಲಾಶಯವು ಗರಿಷ್ಠ ನೀರಿನ ಮಟ್ಟವನ್ನು ತಲುಪಿದೆ. ಜಲಾಶಯದಲ್ಲಿ 49 ಟಿಎಂಸಿ ನೀರು ಸಂಗ್ರಹವಾಗಿದೆ.ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದ ಪರಿಣಾಮವಾಗಿ ಕಾವೇರಿ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿಯಾಗಲಿಲ್ಲ. ಈ ವರ್ಷ ಕಾವೇರಿ ನದಿ ಕಣಿವೆಯಲ್ಲಿ ಹಾಗೂ ಕೇರಳದಲ್ಲಿ ಉತ್ತಮ ಮಳೆಯಾಗಿದ್ದು, ಜುಲೈ ಮುಗಿಯುವ ಮುನ್ನವೇ ಕಾವೇರಿ ತು,ಬಿ ಹರಿದಿದ್ದಾಳೆ. ಕಳೆದ ಒಂದು ವಾರದಿಂದ ಒಳಹರಿವಿವು ಹೆಚ್ಚಿದ್ದು, ಬುಧವಾರ(ಜುಲೈ,24) ಸಂಜೆ ಹೊತ್ತಿಗೆ ಕನ್ನಂಬಾಡಿ ಅಣೆಕಟ್ಟು ಭರ್ತಿಯಾಗಿದೆ.
ಜಲಾಶಯವು ಗರಿಷ್ಠ ನೀರಿನ ಮಟ್ಟ 124.8 ಅಡಿ ತಲುಪಿದ್ದು, ನೆನ್ನೆ ಸಂಜೆಯಿಂದಲೇ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದ್ದು, ಈ ಬಾರಿ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಭಾಗದ ಜನರು ಕಾವೇರಿ ನೀರಿಗೆ ಆತಂಕ ಪಡಬೇಕಿಲ್ಲ. ಇನ್ನುಳಿದಂತೆ ಸಾಂಪ್ರದಾಯದಂತೆ ನಡೆದುಕೊಂಡಿರೋ ಬಾಗಿನ ಸಮರ್ಪಣೆ ಕಾರ್ಯಕ್ರಮ ಜುಲೈ 29ಕ್ಕೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗುತ್ತಿದೆ.





