• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, October 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೆಪಿಟಿಸಿಎಲ್‌ ಮಹತ್ವದ ಮೈಲಿಗಲ್ಲು : ಬೆಂಗಳೂರಿನಲ್ಲಿ 12 ಕಿ.ಮೀ. 220 ಕೆವಿ ಮಲ್ಟಿ ಸರ್ಕ್ಯೂಟ್ ಪ್ರಸರಣ ಮಾರ್ಗ ಯಶಸ್ವಿ ಕಮಿಷನ್ | KPTCL

ಪ್ರತಿಧ್ವನಿ by ಪ್ರತಿಧ್ವನಿ
October 6, 2026
in Top Story, ಕರ್ನಾಟಕ
0
KPTCL successfully commissions a 12 km, 220 kV multi circuit transmission line in Bengaluru
Share on WhatsAppShare on FacebookShare on Telegram

ಬೆಂಗಳೂರು :  ನಗರದ ನಿರಂತರ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಹಾಗೂ ವಿದ್ಯುತ್ ಪ್ರಸರಣ ಜಾಲವನ್ನು ಮತ್ತಷ್ಟು ಸಶಕ್ತಗೊಳಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) 12 ಕಿಲೋಮೀಟರ್ ಉದ್ದದ 220 ಕೆವಿ ಮಲ್ಟಿ ಸರ್ಕ್ಯೂಟ್ ಪ್ರಸರಣ ಮಾರ್ಗವನ್ನು ಯಶಸ್ವಿಯಾಗಿ ಕಮಿಷನ್ ಮಾಡಿದೆ. ಬೆಂಗಳೂರು (Bengaluru) ತಾಂತ್ರಿಕ ಹಾಗೂ ಸ್ಥಳಾವಕಾಶದ ಸವಾಲುಗಳ ನಡುವೆಯೂ ಈ ಬೃಹತ್ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಕೆಪಿಟಿಸಿಎಲ್ ತನ್ನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ADVERTISEMENT

ಡಬಲ್ LILO ಸಂಪರ್ಕದೊಂದಿಗೆ ಜಾಲ ಬಲವರ್ಧನೆ

ಈ ಮಹತ್ವದ ಯೋಜನೆಯನ್ನು ಬಾಗಲೂರು ರಸ್ತೆ ಕ್ರಾಸಿಂಗ್ ಸಮೀಪದ ಕೇಬಲ್ ಟರ್ಮಿನೇಟಿಂಗ್ ಟವರ್‌ನಿಂದ ಅನುಷ್ಠಾನಗೊಳಿಸಲಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 220 ಕೆವಿ ಹೂಡಿ–ಎಚ್‌ಬಿಆರ್ ಹಾಗೂ ಐಟಿಐ–ಮಾನ್ಯತಾ ಟೆಕ್ ಪಾರ್ಕ್ ಪ್ರಸರಣ ಮಾರ್ಗಗಳಿಗೆ ಡಬಲ್ LILO (ಲೈನ್-ಇನ್ ಲೈನ್-ಔಟ್) ಸಂಪರ್ಕವನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆಯಿಂದಾಗಿ ನಗರದ ಪ್ರಮುಖ ತಾಂತ್ರಿಕ ಮತ್ತು ವಸತಿ ವಲಯಗಳಿಗೆ ವಿದ್ಯುತ್ ಪ್ರಸರಣ ಸಾಮರ್ಥ್ಯ ಹೆಚ್ಚಲಿದ್ದು, ಗ್ರಿಡ್‌ನ ಕಾರ್ಯಕ್ಷಮತೆ ಹಾಗೂ ವಿಶ್ವಾಸಾರ್ಹತೆ ಮತ್ತಷ್ಟು ಸುಧಾರಿಸಲಿದೆ.

Priyanka Gandhi : ECI ಬಿಜೆಪಿ ಪರ ಕೆಲಸ ಮಾಡುತ್ತಿದೆ! — ವಿಪಕ್ಷಗಳ ಗಂಭೀರ ಆರೋಪ..! #gyaneshkumar #ece

ದಟ್ಟ ನಗರ ಪ್ರದೇಶದಲ್ಲಿ ವಿಶೇಷ ಎಂಜಿನಿಯರಿಂಗ್ ವಿನ್ಯಾಸ

ಜನನಿಬಿಡ ಬೆಂಗಳೂರು ನಗರ ಪ್ರದೇಶದಲ್ಲಿ ಪ್ರಸರಣ ಜಾಲ ವಿಸ್ತರಿಸುವುದು ಅತ್ಯಂತ ಕ್ಲಿಷ್ಟಕರವಾದ ಕಾರ್ಯವಾಗಿತ್ತು. ಸ್ಥಳಾವಕಾಶದ ಕೊರತೆ, ಹಾಲಿ ವಿದ್ಯುತ್ ಜಾಲಗಳು, ಸಂಚಾರ ದಟ್ಟಣೆ ಹಾಗೂ ಇತರೆ ನಗರ ಮೂಲಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಎಂಜಿನಿಯರಿಂಗ್ ವಿನ್ಯಾಸವನ್ನು ರೂಪಿಸಲಾಯಿತು. ಯೋಜನೆಯ ಭಾಗವಾಗಿ, ವಿದ್ಯಾನಗರ ಪ್ರದೇಶದಲ್ಲಿ ಲಭ್ಯವಿದ್ದ ಮಾರ್ಗದ ಜಾಗವನ್ನು ತಾಂತ್ರಿಕವಾಗಿ ಸಮರ್ಥವಾಗಿ ಬಳಸಿಕೊಂಡು 220 ಕೆವಿ ಮಲ್ಟಿ ಸರ್ಕ್ಯೂಟ್ ಮಾರ್ಗವನ್ನು ನಿರ್ಮಿಸಲಾಗಿದೆ. ಕಿರಿದಾದ ಕಾರ್ಯಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕೆಪಿಟಿಸಿಎಲ್ ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಈ ಕಾಮಗಾರಿಯನ್ನು ಯಶಸ್ವಿಗೊಳಿಸಿದ್ದಾರೆ.

ಇಂಧನ ಸಚಿವ ಕೆ.ಜೆ. ಜಾರ್ಜ್ ಶ್ಲಾಘನೆ

ಯೋಜನೆಯ ಯಶಸ್ವಿ ಅನುಷ್ಠಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, “ಬೆಂಗಳೂರಿನಲ್ಲಿ ವಿದ್ಯುತ್ ಬೇಡಿಕೆ ಕ್ಷಿಪ್ರವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಪ್ರಸರಣ ಮೂಲಸೌಕರ್ಯವನ್ನು ಆಧುನೀಕರಿಸಲಾಗುತ್ತಿದೆ. ನಗರ ಪ್ರದೇಶದ ಪ್ರತಿಯೊಂದು ಯೋಜನೆಗೂ ಅದರದ್ದೇ ಆದ ಭೌಗೋಳಿಕ ಮತ್ತು ತಾಂತ್ರಿಕ ಮಿತಿಗಳಿರುತ್ತವೆ. ಈ ಯೋಜನೆಯಲ್ಲಿ ಎದುರಾದ ಎಲ್ಲಾ ಅಡೆತಡೆಗಳಿಗೆ ಕೆಪಿಟಿಸಿಎಲ್ ತಂಡವು ಸೂಕ್ತ ಎಂಜಿನಿಯರಿಂಗ್ ಪರಿಹಾರ ಕಂಡುಕೊಂಡು ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಅತ್ಯಂತ ಶ್ಲಾಘನೀಯ,” ಎಂದು ತಿಳಿಸಿದರು.

ಸಿಬ್ಬಂದಿಯ ಸಮನ್ವಯಕ್ಕೆ ಸಂದ ಜಯ: ಎಂಡಿ ಡಾ. ವಿ. ರಾಮ್ ಪ್ರಸಾತ್ ಮನೋಹರ್

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಈ ಯೋಜನೆಯ ತಾಂತ್ರಿಕ ಅಗತ್ಯಗಳು ಅತ್ಯಂತ ವಿಶಿಷ್ಟವಾಗಿದ್ದವು. ಸ್ಥಳೀಯ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಪ್ರಾಯೋಗಿಕವಾಗಿ ಕಾರ್ಯಸಾಧ್ಯವಾದ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಯಿತು. ಚಾಲ್ತಿಯಲ್ಲಿದ್ದ ವಿದ್ಯುತ್ ಜಾಲ ಹಾಗೂ ನಗರ ಮೂಲಸೌಕರ್ಯದ ನಡುವೆ 12 ಕಿ.ಮೀ. ಉದ್ದದ ಮಲ್ಟಿ ಸರ್ಕ್ಯೂಟ್ ಮಾರ್ಗವನ್ನು ಕಮಿಷನ್ ಮಾಡಿರುವುದು ನಮ್ಮ ಎಂಜಿನಿಯರ್‌‌ಗಳು ಮತ್ತು ಸಿಬ್ಬಂದಿಯ ತಾಂತ್ರಿಕ ಕೌಶಲ ಹಾಗೂ ದಕ್ಷತೆಗೆ ಸಾಕ್ಷಿಯಾಗಿದೆ. ಕೆಪಿಟಿಸಿಎಲ್‌ನ ಪ್ರತಿಯೊಂದು ಯೋಜನೆಯನ್ನು ವಿದ್ಯುತ್ ಬೇಡಿಕೆ, ಗ್ರಿಡ್ ಸ್ಥಿರತೆ, ಸುರಕ್ಷತೆ ಮತ್ತು ಭವಿಷ್ಯದ ದೀರ್ಘಕಾಲೀನ ಅಗತ್ಯಗಳನ್ನು ಪರಿಗಣಿಸಿಯೇ ರೂಪಿಸಲಾಗುತ್ತದೆ,” ಎಂದು ವಿವರಿಸಿದರು.

ಎವರೆಸ್ಟ್ ಜೀರಿಗೆ ಪುಡಿಯಲ್ಲಿ ಅಪಾಯಕಾರಿ ಕೀಟನಾಶಕ ಅಂಶ ಪತ್ತೆ: ಮಾರುಕಟ್ಟೆಯಿಂದ ಹಿಂಪಡೆಯಲು  ಆದೇಶ | FSSAI

Tags: bengalurucommissionsKPTCL
Previous Post

ಎವರೆಸ್ಟ್ ಜೀರಿಗೆ ಪುಡಿಯಲ್ಲಿ ಅಪಾಯಕಾರಿ ಕೀಟನಾಶಕ ಅಂಶ ಪತ್ತೆ: ಮಾರುಕಟ್ಟೆಯಿಂದ ಹಿಂಪಡೆಯಲು  ಆದೇಶ | FSSAI

Next Post

SHOCKING : ಶೌಚಾಲಯದಲ್ಲೇ ಪಾತ್ರೆ ತೊಳೆದ ಸಿಹಿ ಅಂಗಡಿ ಸಿಬ್ಬಂದಿ : ವಿಡಿಯೋ ವೈರಲ್

Related Posts

ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿ; OSD ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
Top Story

ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿ; OSD ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

by ಪ್ರತಿಧ್ವನಿ
October 6, 2026
0

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಚಂಡೀಗಢದ ಕ್ಯಾಂಪ್ ಕಚೇರಿ ಮೇಲೆ ಕೇಂದ್ರ ತನಿಖಾ ದಳ (CBI) ಮಂಗಳವಾರ ಶೋಧ ನಡೆಸಿದೆ. ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ...

Read moreDetails
ಹಾಲು, ಬಸ್‌ ದರ ಏರಿಕೆಗೆ ಸಂಪುಟ ಅಸ್ತು? ಸಭೆಯಲ್ಲಿ 40ಕ್ಕೂ ಹೆಚ್ಚು ನಿರ್ಧಾರ!

ಹಾಲು, ಬಸ್‌ ದರ ಏರಿಕೆಗೆ ಸಂಪುಟ ಅಸ್ತು? ಸಭೆಯಲ್ಲಿ 40ಕ್ಕೂ ಹೆಚ್ಚು ನಿರ್ಧಾರ!

October 6, 2026
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

October 6, 2026
SIR Allegations of ‘vote theft’ in Karnataka: FIR registered against BJP leaders

ಕರ್ನಾಟಕದಲ್ಲಿ ‘ವೋಟ್‌ ಚೋರಿ’ ಆರೋಪದ ಬಿರುಗಾಳಿ: ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲು | SIR

October 6, 2026
SIR Former CM Siddaramaiah offers advice and instructions via video conference

SIR : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ: ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ, ಸೂಚನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

October 6, 2026
Next Post
SHOCKING Sweet shop staff wash dishes in the toilet; video goes viral

SHOCKING : ಶೌಚಾಲಯದಲ್ಲೇ ಪಾತ್ರೆ ತೊಳೆದ ಸಿಹಿ ಅಂಗಡಿ ಸಿಬ್ಬಂದಿ : ವಿಡಿಯೋ ವೈರಲ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada