• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, October 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕರ್ನಾಟಕದಲ್ಲಿ ‘ವೋಟ್‌ ಚೋರಿ’ ಆರೋಪದ ಬಿರುಗಾಳಿ: ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲು | SIR

ಪ್ರತಿಧ್ವನಿ by ಪ್ರತಿಧ್ವನಿ
October 6, 2026
in Top Story, ಕರ್ನಾಟಕ, ರಾಜಕೀಯ
0
SIR Allegations of ‘vote theft’ in Karnataka: FIR registered against BJP leaders
Share on WhatsAppShare on FacebookShare on Telegram

ಬೆಂಗಳೂರು :  ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ, ಕರ್ನಾಟಕದ (Karnataka) ಹಲವು ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಮತಗಳನ್ನು ಕಡಿತಗೊಳಿಸಲು ಯತ್ನಿಸಲಾಗಿದೆ ಎಂಬ ‘ವೋಟ್ ಚೋರಿ’ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ADVERTISEMENT

ಮತದಾರರು ಸ್ಥಳಾಂತರಗೊಂಡಿದ್ದಾರೆ, ಗೈರುಹಾಜರಾಗಿದ್ದಾರೆ ಅಥವಾ ಮತದಾನಕ್ಕೆ ಅನರ್ಹರಾಗಿದ್ದಾರೆ ಎಂಬ ಸಬೂಬು ನೀಡಿ ದೊಡ್ಡ ಪ್ರಮಾಣದಲ್ಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಅರ್ಹ ಮತದಾರರ ಹೆಸರು, ವಿಳಾಸ ಮತ್ತು EPIC ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪದಡಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಮುಖಂಡರ ವಿರುದ್ಧ ಸರಣಿ ಎಫ್‌ಐಆರ್‌ಗಳು ದಾಖಲಾಗಿವೆ.

ಭಾಲ್ಕಿಯಲ್ಲಿ ನಕಲಿ ಸಹಿ ಪ್ರಕರಣ: 32 ಮಂದಿಯ ಮೇಲೆ ಎಫ್‌ಐಆರ್

ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಸೆಪ್ಟೆಂಬರ್ 21 ಮತ್ತು 22ರಂದು ಸುಮಾರು 3,244 ಮತದಾರರ ವಿರುದ್ಧ ಫಾರ್ಮ್-7 ಸಲ್ಲಿಸಲಾಗಿತ್ತು. ದೂರುದಾರ ಮೊಹಮ್ಮದ್ ಅತೀಕ್ ಅಹ್ಮದ್ ಅವರ ಹೆಸರನ್ನೂ ಈ ಪಟ್ಟಿಯಲ್ಲಿ ಅನಧಿಕೃತವಾಗಿ ಸೇರಿಸಲಾಗಿತ್ತು. ಮತದಾರರ ನಕಲಿ ಸಹಿಗಳನ್ನು ಬಳಸಿ, ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಆಕ್ಷೇಪಣೆ ಸಲ್ಲಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭಾಲ್ಕಿ ಟೌನ್ ಪೊಲೀಸರು 32 ಮಂದಿಯ ವಿರುದ್ಧ ಅಕ್ಟೋಬರ್ 1ರಂದು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಬಬಲೇಶ್ವರದಲ್ಲಿ ಕೆಲವೇ ವ್ಯಕ್ತಿಗಳಿಂದ ಸಾವಿರಾರು ಅರ್ಜಿ ಸಲ್ಲಿಕೆ

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಸೆಪ್ಟೆಂಬರ್ 22ರಂದು ಸಲ್ಲಿಕೆಯಾದ ಒಟ್ಟು 1,373 ಅರ್ಜಿಗಳ ಪೈಕಿ ಬರೋಬ್ಬರಿ 1,363 ಅರ್ಜಿಗಳನ್ನು ಕೇವಲ 10 ಮಂದಿ ಸಲ್ಲಿಸಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ನೂರಾರು ಮತದಾರರ ಖಾಸಗಿ EPIC ಸಂಖ್ಯೆ ಮತ್ತು ವಿಳಾಸದ ದಾಖಲೆಗಳು ಕೆಲವೇ ವ್ಯಕ್ತಿಗಳ ಕೈಗೆ ಹೇಗೆ ತಲುಪಿದವು ಎಂಬುದು ಗಂಭೀರ ತನಿಖೆಗೆ ಕಾರಣವಾಗಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ.

ಬೆಳಗಾವಿ ಉತ್ತರದಲ್ಲಿ ಅಲ್ಪಸಂಖ್ಯಾತರ ಮತಗಳಿಗೆ ಕತ್ತರಿ ಹಾಕುವ ಯತ್ನದ ಆರೋಪ

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸುಮಾರು 3,000 ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯೂ ವೀರಭದ್ರನಗರದ ಸರ್ಕಾರಿ ಉರ್ದು ಶಾಲೆ ವ್ಯಾಪ್ತಿಯಲ್ಲಿ 198 ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ಮುಖಂಡ ರವಿ ಬಿ. ಪಾಟೀಲ್ ಸೇರಿದಂತೆ ಹಲವರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 30ರಂದು ಪ್ರಕರಣ ದಾಖಲಾಗಿದ್ದು, ಬಳಿಕ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಮೂಡಿಗೆರೆಯಲ್ಲಿ 6,259 ಅರ್ಜಿಗಳ ಭಾರೀ ಸಲ್ಲಿಕೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 22ರಿಂದ 24ರ ಅವಧಿಯಲ್ಲಿ ದಾಖಲೆ ಪ್ರಮಾಣದ 6,259 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂದಿರುವ ಆಕ್ಷೇಪಣೆಗಳು ನಕಲಿಯೇ ಅಥವಾ ನಿಯಮಬದ್ಧವೇ ಎಂಬುದರ ಬಗ್ಗೆ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ನರಸಿಂಹರಾಜ ಕ್ಷೇತ್ರದಲ್ಲಿ 1200 ಅರ್ಜಿಗಳು

ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸುಮಾರು 1,200 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಾಮಾಜಿಕ ಕಾರ್ಯಕರ್ತ ಸೈಯದ್ ಹಸರತ್ ಉಲ್ಲಾ ಮತ್ತು ಅವರ ಕುಟುಂಬವು ಹಲವು ವರ್ಷಗಳಿಂದ ಅದೇ ವಿಳಾಸದಲ್ಲಿ ವಾಸವಾಗಿದ್ದರೂ ಅವರು ಊರು ಬಿಟ್ಟಿದ್ದಾರೆ ಎಂದು ಬಿಂಬಿಸಿ ಅರ್ಜಿ ಸಲ್ಲಿಸಲಾಗಿತ್ತು. ಇವರೊಂದಿಗೆ ಇನ್ನೂ 28 ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ ಹಿನ್ನೆಲೆಯಲ್ಲಿ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿ ಸೇರಿದಂತೆ ಹಲವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮಲ್ಲೇಶ್ವರಂನಲ್ಲಿ ಬಿಜೆಪಿ ಸದಸ್ಯೆ ವಿರುದ್ಧ  ಕೇಸ್

ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದ ವಾರ್ಡ್ 64ರ ಎಂಟು ಮತಗಟ್ಟೆಗಳಲ್ಲಿ ಒಟ್ಟು 778 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಾಂಗ್ರೆಸ್ ಮುಖಂಡರ ದೂರಿನ ಮೇರೆಗೆ ವೈಯಾಲಿಕಾವಲ್ ಪೊಲೀಸರು ಬಿಜೆಪಿ ಸದಸ್ಯೆ ಜಿ.ಎಸ್. ವಸಂತಲಕ್ಷ್ಮಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮತದಾರರು ಆ ಪ್ರದೇಶದಲ್ಲೇ ಇದ್ದರೂ ಅವರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ತಪ್ಪಾಗಿ ಬಿಂಬಿಸಿರುವ ಕುರಿತು ತನಿಖೆ ಮುಂದುವರಿದಿದೆ.

ಬಳ್ಳಾರಿಯಲ್ಲಿ 7,561 ಮತದಾರರ ಪಟ್ಟಿ ಸಲ್ಲಿಕೆ ಯತ್ನ: ಬಿಎಲ್ಎ ವಿರುದ್ಧ ಎಫ್‌ಐಆರ್

ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಬಿಎಲ್ಎ ಹಾಗೂ ಪಾಲಿಕೆ ಪ್ರತಿಪಕ್ಷ ನಾಯಕ ಟಿ. ಶ್ರೀನಿವಾಸ್ ಮೋತ್ಕೂರ್ ಅವರು ಒಟ್ಟು 7,561 ಮತದಾರರ ವಿರುದ್ಧ ಫಾರ್ಮ್-7 ಸಲ್ಲಿಸಲು ಮುಂದಾಗಿದ್ದರು. ಸೂಕ್ತ ದಾಖಲೆಗಳಿಲ್ಲದ ಕಾರಣ ಚುನಾವಣಾ ಅಧಿಕಾರಿಗಳು ಇವರ ಅರ್ಜಿಯನ್ನು ತಿರಸ್ಕರಿಸಿದ್ದರು. ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಪ್ರಮಾಣದಲ್ಲಿ ಆಕ್ಷೇಪಣೆ ಸಲ್ಲಿಸಲು ಯತ್ನಿಸಿದ ಆರೋಪದ ಮೇಲೆ ಬ್ರೂಸ್ಪೇಟೆ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಅನುಮತಿಯೊಂದಿಗೆ ಶೋಧ ಕಾರ್ಯವೂ ನಡೆದಿದೆ.

ರಾಜ್ಯಾದ್ಯಂತ ತನಿಖೆಯ ಹಾದಿಯಲ್ಲಿ ‘ಫಾರ್ಮ್-7’ ವಿವಾದ

ಇತ್ತ ಜಯನಗರ ಕ್ಷೇತ್ರದಲ್ಲಿಯೂ 4,300ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ತೆಗೆಯಲು ಸಂಚು ನಡೆದಿದೆ ಎಂದು ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಪ್ರತ್ಯೇಕ ದೂರು ನೀಡಿದ್ದಾರೆ. ಬೃಹತ್ ಪ್ರಮಾಣದಲ್ಲಿ ಫಾರ್ಮ್-7 ಸಲ್ಲಿಕೆ ಮಾಡುವುದು ಕಾನೂನುಬದ್ಧ ಹಕ್ಕು ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದ್ದರೂ, ಮತದಾರರ ಗೌಪ್ಯ ಮಾಹಿತಿ ದುರ್ಬಳಕೆ, ನಕಲಿ ಸಹಿ ಸೃಷ್ಟಿ ಮತ್ತು ಅರ್ಹ ಮತದಾರರನ್ನು ಅಳಿಸಿಹಾಕಲು ನಡೆದ ಯತ್ನಗಳ ಸುತ್ತ ಎದ್ದಿರುವ ಹಲವು ಗಂಭೀರ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಹಾಗೂ ಪೊಲೀಸರ ತನಿಖೆಯಿಂದಲೇ ಸ್ಪಷ್ಟ ಉತ್ತರ ಸಿಗಬೇಕಿದೆ.

SIR : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ: ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ, ಸೂಚನೆ ನೀಡಿದ ಮಾಜಿ ಸಿದ್ದರಾಮಯ್ಯ

Tags: FIRSIRvote theft
Previous Post

SIR : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ: ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ, ಸೂಚನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

Next Post

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

Related Posts

ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿ; OSD ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
Top Story

ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿ; OSD ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

by ಪ್ರತಿಧ್ವನಿ
October 6, 2026
0

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಚಂಡೀಗಢದ ಕ್ಯಾಂಪ್ ಕಚೇರಿ ಮೇಲೆ ಕೇಂದ್ರ ತನಿಖಾ ದಳ (CBI) ಮಂಗಳವಾರ ಶೋಧ ನಡೆಸಿದೆ. ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ...

Read moreDetails
ಹಾಲು, ಬಸ್‌ ದರ ಏರಿಕೆಗೆ ಸಂಪುಟ ಅಸ್ತು? ಸಭೆಯಲ್ಲಿ 40ಕ್ಕೂ ಹೆಚ್ಚು ನಿರ್ಧಾರ!

ಹಾಲು, ಬಸ್‌ ದರ ಏರಿಕೆಗೆ ಸಂಪುಟ ಅಸ್ತು? ಸಭೆಯಲ್ಲಿ 40ಕ್ಕೂ ಹೆಚ್ಚು ನಿರ್ಧಾರ!

October 6, 2026
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

October 6, 2026
SIR Former CM Siddaramaiah offers advice and instructions via video conference

SIR : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ: ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ, ಸೂಚನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

October 6, 2026
Viral Video: Usha Vance, wife of the US Vice President, narrowly escapes a fall while disembarking from a helicopter

Virl Video :  ಹೆಲಿಕಾಪ್ಟರ್‌ ಇಳಿಯುವಾಗ ಜಾರಿ ಬೀಳುವುದರಿಂದ ಪಾರಾದ ಅಮೆರಿಕ ಉಪಾಧ್ಯಕ್ಷನ ಪತ್ನಿ ಉಷಾ ವ್ಯಾನ್ಸ್!

October 6, 2026
Next Post
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada