• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ

ಪ್ರತಿಧ್ವನಿ by ಪ್ರತಿಧ್ವನಿ
July 12, 2026
in Top Story, ಕರ್ನಾಟಕ, ರಾಜಕೀಯ
0
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ
Share on WhatsAppShare on FacebookShare on Telegram

ಬೆಂಗಳೂರು: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಹರಡಿರುವ ಸುದ್ದಿಗಳಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅಧೀಕೃತ ಸ್ಪಷ್ಟನೆ ನೀಡಿದೆ.

ADVERTISEMENT
Byrathi Suresh: BMTC ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಿದ ಸಾರಿಗೆ ಸಚಿವ...

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೆಪಿಸಿಎಲ್‌, 2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಸ್ಪಷ್ಟಪಡಿಸುವುದೇನೆಂದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ (SC-NBWL) ರಚಿಸಿದ್ದ ಉಪ ಸಮಿತಿಯು ಸಿದ್ಧಪಡಿಸಿದ ವರದಿಯು ಕೇವಲ ಕಾನೂನುಬದ್ಧ ಪರಿಶೀಲನಾ ಪ್ರಕ್ರಿಯೆಯ ಒಂದು ಹಂತವಾಗಿದ್ದು, ಅದನ್ನು 89ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಪರಿಗಣನೆಗಾಗಿ ಮಂಡಿಸಲಾಗಿತ್ತು.

ವಿಸ್ತೃತ ಚರ್ಚೆಯ ನಂತರ, SC-NBWL, ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (NIAS) ನೀಡುವ ಅಭಿಪ್ರಾಯಗಳನ್ನು ಹಾಗೂ ಪ್ರಸ್ತಾವನೆ ಕುರಿತು ಎತ್ತಲಾಗಿರುವ ವಿಷಯಗಳಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

S Janaki Passes Away: ಎಸ್. ಜಾನಕಿ ಮಂಡ್ಯ, ಮೈಸೂರು ಜನರನ್ನು ಹೆಚ್ಚು ಪ್ರೀತಿಸುತ್ತಿದ್ರು..

SC-NBWL ನೀಡಿದ ನಿರ್ದೇಶನದ ಅನುಸಾರ, ಕರ್ನಾಟಕ ಸರ್ಕಾರವು ಯೋಜನೆಯ ಸ್ವತಂತ್ರ ಮೌಲ್ಯಮಾಪನ ನಡೆಸುವ ಜವಾಬ್ದಾರಿಯನ್ನು NIASಗೆ ವಹಿಸಿತು. NIAS ಸ್ಥಳ ಪರಿಶೀಲನೆ ನಡೆಸಿ, ತಾಂತ್ರಿಕ ವಿವರಗಳು ಹಾಗೂ ಲಭ್ಯವಿರುವ ಪರಿಸರ ಸಂಬಂಧಿತ ಮಾಹಿತಿಗಳ ಆಧಾರದ ಮೇಲೆ ತನ್ನ ಮೌಲ್ಯಮಾಪನವನ್ನು ಕೈಗೊಂಡಿತು. NIAS ವರದಿಯನ್ನು 24.06.2026 ರಂದು ಸಲ್ಲಿಸಲಾಯಿತು.

 

ನಂತರ, SC-NBWL ಪ್ರಸ್ತಾಪಿಸಿದ್ದ ಅಂಶಗಳಿಗೆ ಉತ್ತರ ನೀಡುವ ಅನುಪಾಲನಾ ವರದಿ, NIAS ವರದಿ ಹಾಗೂ ಅಗತ್ಯ ಸ್ಪಷ್ಟೀಕರಣಗಳನ್ನು ಒಳಗೊಂಡ ದಾಖಲೆಗಳನ್ನು 30.06.2026 ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEF&CC) ಸಲ್ಲಿಸಲಾಗಿದ್ದು, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಮುಂದಿನ ಪರಿಗಣನೆಗಾಗಿ ಕಳುಹಿಸಲಾಗಿದೆ.

Eshwar Khandre About Karnataka Local Body Election: ಸ್ಥಳೀಯ ಚುನಾವಣೆ, ಗುಡ್​ನ್ಯೂಸ್ ಕೊಟ್ಟ ಈಶ್ವರ್ ಖಂಡ್ರೆ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆಯು ಪ್ರಸ್ತುತ MoEF&CCಯಲ್ಲಿ ಮುಂದಿನ ನಿರ್ಧಾರಕ್ಕಾಗಿ ಪರಿಶೀಲನೆಯಲ್ಲಿದೆ. ಸಕ್ಷಮ ಪ್ರಾಧಿಕಾರದ ಪರಿಗಣನೆ ಹಾಗೂ ಮುಂದಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು 01.10.2026ಕ್ಕೆ ಮುಂದೂಡಿದೆ. ಯೋಜನೆಯ ಪ್ರಸ್ತಾವನೆಯ ಪ್ರಕ್ರಿಯೆಯಲ್ಲಿ ಎಲ್ಲಾ ಕಾನೂನುಬದ್ಧ ಕ್ರಮಗಳು ಹಾಗೂ ಪರಿಸರ ಸಂಬಂಧಿತ ಅಗತ್ಯ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ ಎಂದು ಕೆಪಿಸಿಎಲ್ ಪುನರುಚ್ಚರಿಸುತ್ತದೆ ಎಂದು ತಿಳಿಸಿದೆ.

Tags: KarnatakaKarnataka PoliticsKPCLPower Departmentsharavathi pumped storage project
Previous Post

ಮಗನ ಅಗಲಿಕೆಯ ನೋವಿನಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್. ಜಾನಕಿ

Next Post

ವಿಯೆಟ್ನಾಂನಲ್ಲಿ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮ**

Related Posts

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ
Top Story

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ

by ಪ್ರತಿಧ್ವನಿ
July 13, 2026
0

ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಕಲಾವಿದರ ನಡುವೆಯೂ ವೃತ್ತಿಪರ ಭಿನ್ನಾಭಿಪ್ರಾಯಗಳು ಹಾಗೂ ಅಭಿರುಚಿಯ ವ್ಯತ್ಯಾಸಗಳು ಹೊಸದೇನಲ್ಲ. ಆದರೆ ದಕ್ಷಿಣ ಭಾರತದ ಇಬ್ಬರು ದಿಗ್ಗಜರಾದ ಮಹಾನಟಿ ಸಾವಿತ್ರಿ ಮತ್ತು ಗಾನಕೋಗಿಲೆ...

Read moreDetails
ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

July 12, 2026
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

July 12, 2026
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ.ಕೆ ಶಿವಕುಮಾರ್

July 12, 2026
ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

July 12, 2026
Next Post
ವಿಯೆಟ್ನಾಂನಲ್ಲಿ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮ**

ವಿಯೆಟ್ನಾಂನಲ್ಲಿ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮ**

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada