• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, October 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ | Mysuru Dasara

ಪ್ರತಿಧ್ವನಿ by ಪ್ರತಿಧ್ವನಿ
October 11, 2026
in Top Story, ಕರ್ನಾಟಕ
0
Koppal's Gavisiddeshwara Swamiji inaugurates the world-famous Mysuru Dasara festival today
Share on WhatsAppShare on FacebookShare on Telegram

ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 416ನೇ ವರ್ಷದ ಐತಿಹಾಸಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara) ಇಂದು ವಿದ್ಯುಕ್ತ ಚಾಲನೆ ದೊರೆಯಲಿದೆ. ನಗರದ ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 11:50ರಿಂದ ಮಧ್ಯಾಹ್ನ 12:13ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ (Sri Abhinava Gavisiddeshwara Swamiji) ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ADVERTISEMENT

ಉದ್ಘಾಟನೆಯ ಅಂಗವಾಗಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಉತ್ಸವ ಮೂರ್ತಿಯ ಶುದ್ಧಿ ಕಾರ್ಯ ಹಾಗೂ ಮಹಿಷ ಮರ್ದಿನಿ ಅವತಾರದ ಮೂರ್ತಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗಿದೆ. ಉದ್ಘಾಟನಾ ವೇದಿಕೆಯಲ್ಲಿ ಸಾರ್ವಜನಿಕರು ಹಾಗೂ ಗಣ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಸಚಿವರ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಅರಮನೆಯಲ್ಲಿ ಖಾಸಗಿ ದರ್ಬಾರ್ ಮತ್ತು ಸಾಂಪ್ರದಾಯಿಕ ಆಚರಣೆ

ಅಂಬಾವಿಲಾಸ ಅರಮನೆಯಲ್ಲೂ ಇಂದಿನಿಂದ ರಾಜವಂಶಸ್ಥರ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಗರಿಗೆದರಿವೆ. ಮುಂಜಾನೆ ರತ್ನಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ನೆರವೇರಲಿದೆ. ಮಧ್ಯಾಹ್ನದ ವೇಳೆಗೆ ಅವರು ಸಿಂಹಾಸನಾರೋಹಣ ಮಾಡುವ ಮೂಲಕ ಅರಮನೆಯ ಖಾಸಗಿ ದರ್ಬಾರ್‌ಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ದಸರಾ ಸಂಭ್ರಮ ಹಾಗೂ ಪ್ರಮುಖ ದಿನಗಳ ವಿವರ

ಇಂದಿನಿಂದ ಆರಂಭವಾಗುವ ನವರಾತ್ರಿಯ ಪ್ರಯುಕ್ತ ಅಕ್ಟೋಬರ್ 12ರಿಂದ 20ರವರೆಗೆ ಯುವ ದಸರಾ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರಿನಾದ್ಯಂತ ಜರುಗಲಿವೆ. ಅಕ್ಟೋಬರ್ 17, 18, 20 ಮತ್ತು 21ರಂದು ಬನ್ನಿಮಂಟಪದ ಮೈದಾನದಲ್ಲಿ ಡ್ರೋನ್ ಶೋ ಆಯೋಜನೆಗೊಂಡಿದೆ. ಅಕ್ಟೋಬರ್ 20ರಂದು ಆಯುಧ ಪೂಜೆ ನಡೆಯಲಿದ್ದು, ಅಕ್ಟೋಬರ್ 21ರಂದು ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿ ಹಾಗೂ ರಾತ್ರಿ ಪಂಜಿನ ಕವಾಯತು ನೆರವೇರಲಿದೆ.

ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ

ದಸರಾ ಮಹೋತ್ಸವದ ನಿಮಿತ್ತ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಅರಮನೆ ಆವರಣವು ವರ್ಣರಂಜಿತ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ವ್ಯಾಪಕ ಪೊಲೀಸ್ ಭದ್ರತೆ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಇಡೀ ಮೈಸೂರು ನಗರಿ ಹಬ್ಬದ ಸಂಭ್ರಮದಲ್ಲಿ ಮುಳುಗಿದೆ.

ದೈವ ಶ್ರದ್ಧೆ ಧರ್ಮ ಮತ್ತು ಸಾಂಸ್ಥಿಕ ಮಾರುಕಟ್ಟೆ

Tags: Gavisiddeshwara SwamijiinauguratesMysuru Dasara
Previous Post

ದೈವ ಶ್ರದ್ಧೆ ಧರ್ಮ ಮತ್ತು ಸಾಂಸ್ಥಿಕ ಮಾರುಕಟ್ಟೆ

Related Posts

God Faith in the Divine, Dharma, and the Institutional Market
Top Story

ದೈವ ಶ್ರದ್ಧೆ ಧರ್ಮ ಮತ್ತು ಸಾಂಸ್ಥಿಕ ಮಾರುಕಟ್ಟೆ

by ನಾ ದಿವಾಕರ
October 11, 2026
0

ಡಿಜಿಟಲ್ (Digital) ಯುಗದಲ್ಲೂ ಭಾರತದ (India) ಸಾಂಪ್ರದಾಯಿಕ ಸಮಾಜ ಶ್ರದ್ಧಾ ನಂಬಿಕೆಗಳ ಸಂಕೋಲೆಗಳಿಂದ ಮುಕ್ತವಾಗಿಲ್ಲ. ಈ ಬಿಗಿ ಸರಳುಗಳನ್ನೇ ಮತ್ತಷ್ಟು ಬಿಗಿಗೊಳಿಸಲು ಆಧುನಿಕ ತಂತ್ರಜ್ಞಾನವನ್ನೇ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ....

Read moreDetails
ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

October 10, 2026
ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

October 10, 2026
ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

October 10, 2026
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ತನಿಖೆ ನಡೆಸಿದ ಪೊಲೀಸರ ವಿರುದ್ಧವೇ ಇಲಾಖಾ ತನಿಖೆ! ಏಕೆ ?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ತನಿಖೆ ನಡೆಸಿದ ಪೊಲೀಸರ ವಿರುದ್ಧವೇ ಇಲಾಖಾ ತನಿಖೆ! ಏಕೆ ?

October 10, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada