2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಗಣಿ-ಧನಿ ಮಾಜಿ ಸಚಿವ ಜರ್ನಾದನ ರೆಡ್ಡಿ ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಪರ-ವಿರೋಧದ ಚರ್ಚೆಯನ್ನ ಹುಟ್ಟುಹಾಕಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಿಂದೆ ಹಲವಾರು ಜನ ರಾಜಕೀಯ ಪಕ್ಷ ಸ್ಥಾಪಿಸಿದ್ದರು ಸಹ ಯಶಸ್ಸು ಕಂಡಿದ್ದು ಕಡಿಮೆ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

ಈ ಹಿಂದೆ ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸಿದ್ದು ಯಶಸ್ಸು ಕಂಡಿದ್ದು ತೀರಾ ವಿರಳ ಎಲ್ಲರಿಗೂ ಅವರದ್ದೇ ಆದ ಧ್ಯೇಯ ಹಾಗು ಗುರಿಯಿರುತ್ತದೆ ರೆಡ್ಡಿ ಅವರಿಗೆ ತಮ್ಮ ಯೋಜನೆಗಳ ಬಗ್ಗೆ ಗಟ್ಟಿ ನಂಬಿಕೆ ಇರಬಹುದು. ಆದರೆ, ಅವರ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪರಿಣಾಮ ಬೀರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ಹೊಸ ಪಕ್ಷಗಳ ಉದಯ ಸಹಜ ಅದರಂತೆ ಬಿಜೆಪಿಯಲ್ಲಿರುವ ರೆಡ್ಡಿ ಬೆಂಬಲಿಗರಲ್ಲಿ ಈ ಬಗ್ಗೆ ಗೊಂದಲವಿರುತ್ತದೆ ಯಾಕೆಂದರೆ ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರದಲ್ಲಿ ಅವರದ್ದೇ ಆದ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದ್ದಾರೆ.






