ಕೆಎಲ್ ರಾಹುಲ್ ಅವರಿಗೆ ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೇ ಕಾಡುತ್ತಿರುವ ತೊಡೆಸಂದು ಗಾಯದ (Groin Injury) ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಜೈ ಶಾ, “ಹೌದು, ಮಂಡಳಿಯು ಅವರ ಫಿಟ್ನೆಸ್ ಬಗ್ಗೆ ಯೋಚಿಸುತ್ತಿದೆ. ಶೀಘ್ರದಲ್ಲೇ ಅವರು ಜರ್ಮನಿಗೆ ಹೋಗಲಿದ್ದಾರೆ” ಎಂದು CricBuzz ವರದಿಯಲ್ಲಿ ಉಲ್ಲೇಖಿಸಿದೆ.
ವರದಿ ಪ್ರಕಾರ, ಇಂಗ್ಲೆಂಡ್ ಟೆಸ್ಟ್ ತಂಡದ ಉಪನಾಯಕರಾಗಿದ್ದ ಕೆಎಲ್ ರಾಹುಲ್ ಅವರು ಈ ತಿಂಗಳ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಜರ್ಮನಿಗೆ ತೆರಳಲಿದ್ದು, ಬಿಸಿಸಿಐ ಈಗ ಕೆಎಲ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರು ಉಪನಾಯಕನನ್ನು ಹೆಸರಿಸಬೇಕಾಗಿದೆ.
ಕೆಎಲ್ ರಾಹುಲ್ ಅವರು ಐಪಿಎಲ್ 2022ರ ಸಮಯದಲ್ಲಿ ಉತ್ತಮ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಬಲ ತೊಡೆಸಂದು ಗಾಯದಿಂದಾಗಿ ಪ್ರೋಟೀಸ್ ವಿರುದ್ಧ ಮುಂಬರುವ ಐದು ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದರು.
30 ವರ್ಷದ ರಾಹುಲ್ ತವರು ನೆಲದಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶವನ್ನು ಕಳೆದುಕೊಂಡಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿ ತಮ್ಮ ಟ್ವಿಟರ್ ನಲ್ಲಿ ಹೃತ್ಪೂರ್ವಕ ಬರಹವನ್ನು ಹಂಚಿಕೊಂಡಿದ್ದಾರೆ.