2025 ರ ipl ಮೆಗಾ ಹರಾಜಿಗೂ ಮುನ್ನ ಐಪಿಎಲ್ ಕೌನ್ಸಿಲ್ (Ipl council) ಈ ಬಾರಿಯ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಹರಾಜಿನಲ್ಲಿ ಬಿಡ್ (Bid) ಆಗಿ ಟೂರ್ನಿಯಿಂದ ದೂರ ಉಳಿಯುತ್ತಿದ್ದಂತ ವಿದೇಶಿ ಆಟಗಾರರಿಗೆ ಮೂಗುದಾರ ಹಾಕಲು ಕಠಿಣ ನಿರ್ಣಯ ಕೈಗೊಂಡಿದೆ. ಹರಾಜಿನ ಬಳಿಕ ದೂರ ಉಳಿಯುವ ಆಟಗಾರನಿಗೆ 2 ವರ್ಷದ ನಿಷೇಧ ಹೇರಿದೆ.
ಇನ್ನು ಫ್ರಾಂಚೈಸಿ ಪರ್ಸ್ ಮೌಲ್ಯವನ್ನು 90 ಕೋಟಿಯಿಂದ ರೂ. (90 crores) 120 ಕೋಟಿಗೆ ( 120 crores) ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿಯಲ್ಲಿ ಈ ನಿಯಮಗಳನ್ನು ಅಂತಿಮಗೊಳಿಸಲಾಗಿದೆ. 100 ಕೋಟಿಗೆ ಸೀಮಿತವಾಗಿದ್ದ ಹರಾಜಿ ಮೊತ್ತ 120 ಕೋಟಿಗೆ ಏರಿಸಲಾಗಿದೆ. 2026ಕ್ಕೆ 151 ಕೋಟಿ, 2027ಕ್ಕೆ 157 ಕೋಟಿಗೆ ಏರಿಕೆಯಾಗಲಿದೆ.