• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುತ್ತು ಕೊಟ್ಟು ಮತ ಕೇಳಿದ BJP ಸಂಸದ.. ವಿಪಕ್ಷಗಳ​​ ಪಾಲಿಗೆ ದಿವ್ಯಾಸ್ತ್ರ..

ಕೃಷ್ಣ ಮಣಿ by ಕೃಷ್ಣ ಮಣಿ
April 11, 2024
in Top Story, ಇದೀಗ, ರಾಜಕೀಯ
0
ಮುತ್ತು ಕೊಟ್ಟು ಮತ ಕೇಳಿದ BJP ಸಂಸದ.. ವಿಪಕ್ಷಗಳ​​ ಪಾಲಿಗೆ ದಿವ್ಯಾಸ್ತ್ರ..
Share on WhatsAppShare on FacebookShare on Telegram

ಕೃಷ್ಣಮಣಿ

ADVERTISEMENT

ಲೋಕಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ, ಎಲ್ಲಾ ಪಕ್ಷಗಳು ಜನರ ಮನಸ್ಸು ಗೆಲ್ಲುವುದಕ್ಕೆ ಭಾರೀ ಕಸರತ್ತು ಮಾಡಿವೆ. ಈ ನಡುವೆ ಬಿಜೆಪಿ ಹಾಲಿ ಸಂಸದ ಮತಯಾಚನೆ ವೇಳೆ ಯುವತಿಯ ಕೆನ್ನೆಗೆ ಮುತ್ತು ಕೊಟ್ಟಿರುವ ವಿಡಿಯೋ ಭಾರೀ ವೈರಲ್​ ಆಗಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಗೇನ್​ ಮುರ್ಮು (Khagen_murmu) ಮುತ್ತು ಕೊಟ್ಟು ಎಡವಟ್ಟು ಮಾಡಿಕೊಂಡಿರುವ ಸಂಸದ. ಚಂಚಲ್​ ವ್ಯಾಪ್ತಿಯ ಶ್ರಿಹಿಪುರ್​ನಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಸ್ಥಳೀಯ ಯುವತಿಯ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದು ಕಾಗೇನ್​ ಮುರ್ಮು ಫೇಸ್​ಬುಕ್​ ಪೇಜ್​ನಲ್ಲಿ ಲೈವ್​ ಸ್ಟ್ರೀಮ್​ ಆಗಿದೆ. ಆ ಬಳಿಕ ವಿಡಿಯೋ ಡಿಲೀಟ್​ ಮಾಡಲಾಗಿದೆ.

ಇದು ಸ್ತ್ರೀಯರಿಗೆ ‘ಮೋದಿ ಕಾ ಪರಿವಾರ’ದ ಗೌರವ!!

ಫೋಟೋ ಹಾಕಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಟಿಎಂಸಿ (TMC) ಪ್ರಧಾನಿ ಮೋದಿ ಬೇಟಿ ಬಚಾವೋ ಬೇಟಿ ಪಡಾವೋ ಆಂಧೋಲನ ಉಲ್ಲೇಖಿಸಿ ಟ್ವೀಟ್​ ಮಾಡಿದೆ. ಬಿಜೆಪಿ ಮಹಿಳೆಯರಿಗೆ ಕೊಡುವ ಗೌರವ ಹೇಗಿದೆ ನೋಡಿ, ಮಹಿಳಾ ವಿರೋಧಿ ಎನ್ನುವುದಕ್ಕೆ ಕೊರತೆಯಿಲ್ಲ ಎಂದಿದೆ. ನೀವು ಏನನ್ನು ನೋಡುತ್ತಿದ್ದೀರಿ ಅದನ್ನು ಸತ್ಯವಾಗಲೂ ನಂಬುವುದಿಲ್ಲ, ಆದರೂ ಅವರು ಬಿಜೆಪಿ ಹಾಲಿ ಸಂಸದ ಹಾಗು ಬಿಜೆಪಿ ಅಭ್ಯರ್ಥಿ ಕಾಗೇನ್​ ಮುರ್ಮು ಅವರೇ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಮೋದಿ ಕಾ ಪರಿವಾರ (Modi Ka Parivar) ನಾರಿಯರಿಗೆ ಕೊಡುವ ಗೌರವ ಇದಾಗಿದೆ ಎಂದು ವ್ಯಂಗ್ಯ ಮಾಡಿದೆ. ಆದರೆ ಕಾಗೇನ್​ ಮುರ್ಮು ಮಾತ್ರ ಸಮರ್ಥನೆ ಮಾಡಿಕೊಂಡಿದ್ದು, ಮಗುವಿಗೆ ಕೊಡುವ ರೀತಿಯಲ್ಲಿ ಭಾವಿಸಿದ್ದೆ. ಇದರಲ್ಲಿ ತಪ್ಪು ತಿಳಿವುದು ಬೇಡ ಎಂದಿದ್ದಾರೆ.

‘ಬಿಜೆಪಿ ನಾಯಕರಿಂದ ನಿಮ್ಮ ಮಗಳನ್ನು ರಕ್ಷಿಸಿಕೊಳ್ಳಿ’

ರಾಜ್ಯ ಕಾಂಗ್ರೆಸ್​​ ಕೂಡ ಕಾಗೇನ್​ ಮುರ್ಮು ಮುತ್ತು ಕೊಟ್ಟಿದ್ದನ್ನು ಟೀಕಿಸಿದ್ದು, ಮಹಾಜನಗಳೇ, ಬಿಜೆಪಿಯವರಿಂದ ನಿಮ್ಮ ನಿಮ್ಮ ಮನೆಯ “ಬೇಟಿ ಬಚಾವ್” ಮಾಡಿಕೊಳ್ಳಿ ಎಂದು ವ್ಯಂಗ್ಯ ಮಾಡಿದೆ. ಚುನಾವಣಾ ಪ್ರಚಾರದ ವೇಳೆ ಮತ ಕೇಳುವ ಬದಲು ಮುತ್ತು ನೀಡಿ ಯುವತಿಯೊಬ್ಬರಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ನಂತಹ ಮಹಿಳಾ ಪೀಡಕನನ್ನು ಸಮರ್ಥಿಸುವ, ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ರಕ್ಷಣೆ ಮಾಡಿ ಹೂವಿನ ಹಾರ ಹಾಕಿ ಸ್ವಾಗತ ಮಾಡುವ ಬಿಜೆಪಿಯಿಂದ ದೇಶದ ಮಹಿಳೆಯರ ಘನತೆ, ಗೌರವ ಉಳಿಯುವುದು ಸಾಧ್ಯವಿಲ್ಲ ಎಂದು ಕುಟುಕಿದೆ. ಅತಿ ಹೆಚ್ಚು ಅತ್ಯಾಚಾರ ಆರೋಪ ಹೊತ್ತಿರುವವರ ಪಕ್ಷ ಬಿಜೆಪಿ, ಅತಿ ಹೆಚ್ಚು ಮಹಿಳಾ ಪೀಡಕರಿರುವ ಪಕ್ಷ ಬಿಜೆಪಿ, ಅತಿ ಹೆಚ್ಚು ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾದವರ ಪಕ್ಷ ಬಿಜೆಪಿ. ಇಂತಹ ದುರುಳರ ಸಾಮ್ರಾಜ್ಯವಾಗಿರುವ ಬಿಜೆಪಿಯವರಿಂದ “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂಬ ಸಂಸ್ಕೃತಿಗೆ ಅರ್ಥ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

ಮುತ್ತು ಕೊಟ್ಟಿದ್ದರಲ್ಲಿ ತಪ್ಪೇನಿದೆ..? ಯುವತಿಯ ಪ್ರಶ್ನೆ..

ಕಾಗೇನ್​ ಮುರ್ಮು ಮುತ್ತು ಕೊಟ್ಟ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗ್ತಿದ್ದ ಹಾಗೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದ್ದು, ಮಾನಹಾನಿ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಕಾಗೇನ್​ ಮುರ್ಮು ಹೇಳಿದ್ದಾರೆ. ಇನ್ನು ಮುತ್ತು ಕೊಟ್ಟ ಬಗ್ಗೆ ಯುವತಿ ಪ್ರತಿಕ್ರಿಯೆ ನೀಡಿದ್ದು, ಮುತ್ತು ನೀಡಿದ ಸಂದರ್ಭದಲ್ಲಿ ನನ್ನ ಜೊತೆಗೆ ನನ್ನ ಅಪ್ಪ ಅಮ್ಮನೂ ಇದ್ದರು. ಅವರು ನನ್ನನ್ನು ಮಗಳಂತೆ ಭಾವಿಸಿ ಮುತ್ತು ಕೊಟ್ಟಿದ್ದರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸಿದ್ದಾರೆ. ಆದರೆ ಕಾಂಗ್ರೆಸ್​ (Congress) ಹಾಗು ಟಿಎಂಸಿ ನಾಯಕರ ಟೀಕಾಸ್ತ್ರಕ್ಕೆ ಆಹಾರ ಸಿಕ್ಕಂತಾಗಿದೆ. ಆದರೂ ಸಾರ್ವಜನಿಕವಾಗಿ ಮುತ್ತು ಕೊಟ್ಟಿರುವುದು ಭಾರತೀಯರು ಸಹಿಸಿಕೊಳ್ಳುವುದು ಕೊಂಚ ಕಷ್ಟವೇ ಸರಿ. ಏನಂತೀರಾ..?

Tags: Congress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ಸಿಎಂ ವಿರುದ್ಧ ಅಪಪ್ರಚಾರದ ಪೋಸ್ಟ್‌.. ಕಾಂಗ್ರೆಸ್‌ನಿಂದ ದೂರು ದಾಖಲು

Next Post

ಇಂದಿನ ಚುನಾವಣಾ ಪ್ರಚಾರ.. ಕೇಸರಿ ನಾಯಕರ ಅಬ್ಬರ ಎಲ್ಲಿ..?

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

April 23, 2026
ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

April 23, 2026
Next Post
ಇಂದಿನ ಚುನಾವಣಾ ಪ್ರಚಾರ.. ಕೇಸರಿ ನಾಯಕರ ಅಬ್ಬರ ಎಲ್ಲಿ..?

ಇಂದಿನ ಚುನಾವಣಾ ಪ್ರಚಾರ.. ಕೇಸರಿ ನಾಯಕರ ಅಬ್ಬರ ಎಲ್ಲಿ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada