ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಕೀರನ್ ಪೊಲಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಬುಧವಾರ ನಿವೃತ್ತಿ ವಿಷಯವನ್ನು ಪ್ರಕಟಿಸಿದರು.
ವೆಸ್ಟ್ ಇಂಡೀಸ್ 123 ಏಕದಿನ ಮತ್ತು 101 ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಕೀರನ್ ಪೊಲಾರ್ಡ್, ಪ್ರಸ್ತುತ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
34 ವರ್ಷದ ಕೀರನ್ ಪೊಲಾರ್ಡ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದರು. ಕಳೆದ ಬಾರಿ ಭಾರತ ವಿರುದ್ಧ ಕೊನೆಯ ಬಾರಿಗೆ ಸರಣಿ ಆಡಿದ್ದರು.