ಕಿಂಗ್ ಕೊಹ್ಲಿ (King Kohli) ಸುಮಾರು 2-3 ವರ್ಷಗಳಿಂದ ಟೆಸ್ಟ್ (Test) ನಲ್ಲಿ ಉತ್ತಮ ಪ್ರದರ್ಶನ ತಂಡಕ್ಕೆ ನೀಡುತ್ತಿಲ್ಲ ಆದ್ರೂ ಸಹ ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy ) ಯಲ್ಲಿ ಕೊಹ್ಲಿ ಫಾರ್ಮ್ನಲ್ಲಿ ಆಂತೂ ಇಲ್ಲವೇ ಇಲ್ಲ. ಆದ್ರೆ ಈಗ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ನಲ್ಲಿ ನಡೆಯುತ್ತಿರುವ ಟೆಸ್ಟ್ನಲ್ಲಿ ವಿರಾಟ್ ಇನ್ನೂ 42 ರನ್ಗಳನ್ನ ಗಳಿಸಿದ್ರೆ ಸುನಿಲ್ ಗವಾಸ್ಕರ್ ಹಾಗೂ ರಾಹುಲ್ ದ್ರಾವಿಡ್ ದಾಖಲೆ ಮಾಡಲಿದ್ದಾರೆ.
ಕಿಂಗ್ ಕೊಹ್ಲಿ ಬ್ಯಾಟ್ನಿಂದ 42 ರನ್ ಮೂಡಿ ಬಂದ್ರೆ ಈ ಸಾಧನೆ ಮಾಡಿದ ಭಾರತದ 5ನೇ ಆಟಗಾರನಾಗಿ ದಾಖಲೆ ಮಾಡಲಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ (Virender Sehwag) ಮತ್ತು ಸುನಿಲ್ ಗವಾಸ್ಕರ್ ಈ ಸಾಧನೆ ಮಾಡಿದವರಾಗಿದ್ದಾರೆ. ಸುನಿಲ್ ಗವಾಸ್ಕರ್ 87 ಇನ್ನಿಂಗ್ಸ್ನಲ್ಲಿ 4,000 ರನ್ ಪೂರೈಸಿದ್ರೆ, ರಾಹುಲ್ ದ್ರಾವಿಡ್ 88 ಇನ್ನಿಂಗ್ಸ್ನಲ್ಲಿ 4,000 ರನ್ ಗಳಿಸಿದ್ದಾರೆ. ಆದ್ರೆ ಕೊಹ್ಲಿ 76 ಇನ್ನಿಂಗ್ಸ್ನಲ್ಲಿ 3,958 ರನ್ಗಳನ್ನ ಗಳಿಸಿದ್ದಾರೆ. ಹೀಗಾಗಿ ಈಗ ನಡೆಯುತ್ತಿರುವ ಟೆಸ್ಟ್ನಲ್ಲಿ 42 ರನ್ಗಳನ್ನ ಕೊಹ್ಲಿ ಹೊಡೆದ್ರೆ ಕಡಿಮೆ ಇನ್ನಿಂಗ್ಸ್ನಲ್ಲಿ ದಾಖಲೆ ಮಾಡಿ ಇತಿಹಾಸ ಪುಟಗಳಿಗೆ ಕಿಂಗ್ ನೇಮ್ ಸೇರಲಿದೆ.