ಕಿಡ್ನಿ ಸ್ಟೋನ್ ಸಮಸ್ಯೆ ಅನ್ನೋದು ತುಂಬಾನೆ ಕಾಮನ್ ಆಗಿದೆ..ತಲೆನೋವು ,ಹಲ್ಲು ನೋವು ಇಂತಹ ನೋವನ್ನೆ ಸಹಿಸಲಾಗುವುದಿಲ್ಲ. ಅದ್ರಲ್ಲಿ ಕಿಡ್ನಿ ನೋವು ಅಬ್ಬಬ್ಬಾ ಯಾರಿಗು ಕೂಡ ತಡೆಯಲಾಗುವುದಿಲ್ಲ.. ಯಮಯಾತನೆ ಅಂತಾನೆ ಹೇಳ್ಬಹುದು.ಈ ಕಿಡ್ನಿ ಸ್ಟೋನ್ ಬರಿವುದಕ್ಕೆ ಪ್ರಮುಖ ಕಾರಣ ಏನೆಲ್ಲ ಅನ್ನುವುದರ ಮಾಹಿತಿ ಇಲ್ಲಿದೆ..

ಡಿಹೈಡ್ರೇಷನ್
ದೇಹದಲ್ಲಿ ನೀರಿನ ಕೊರತೆ ಹೆಚ್ಚಾದಾಗ.. ಅಂದ್ರೆ ಸರಿಯಾಗಿ ನೀರನ್ನು ಕುಡಿಯದೆ ಇದ್ದಾಗ ಮೂತ್ರಪಿಂಡದಲ್ಲಿ ಕಲ್ಲುಗಳಾಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ.

ಆಹಾರ
ನಾವು ಸೇವಿಸುವ ಆಹಾರ ತುಂಬಾನೆ ಮುಖ್ಯ..ಹೆಚ್ಚಾಗಿ ಸೋಡಿಯಂ ಇರುವ ಪದಾರ್ಥಗಳನ್ನು ಸೇವಿಸುವುದರಿಂದ,ಅನಿಮಲ್ ಪ್ರೊಟೀನ್ ತಗೊಳೋದ್ರಿಂದ ಹಾಗೂ ಸುಗರ್ ಹೆಚ್ಚಿನ ಮಟ್ಟದಲ್ಲಿ ಸೇವಿಸುವುದರಿಂದ ಕೂಡ ಕಿಡ್ನಿ ಸ್ಟೋನ್ ಆಗುತ್ತೆ
ಅನುವಂಶೀಯವಾಗಿ
ನಮ್ಮ ಮನೆಯಲ್ಲಿ ಯಾರಿಗಾದ್ರು ಇದ್ರೆ..ಅಥವಾ ಕುಟುಂಬದವರಲ್ಲಿ ಯಾರಿಗಾದ್ರು ಕಿಡ್ನಿ ಸ್ಟೋನ್ ಸಮಸ್ಯೆ ಇದ್ರೆ ಕೂಡ ಆಗುತ್ತದೆ..ಜೀನರಿಕ್ ಇಂದನು ಬರುತ್ತದೆ..

ವಾತಾವರಣ
ನಾನು ಇರುವಂತ ವಾತಾವರಣ ತುಂಬಾನೆ ಮ್ಯಾಟರ್ ಆಗುತ್ತದೆ..ಹೈ ಟೆಂಪ್ರೇಚರ್ ಇಂದಾಗಿ ಅಥವಾ ಉಷ್ಣತೆ ಹೆಚ್ಚಿರುವುದರಿಂದಾಗಿ ,ಹಾಗೂ ಗಡಸು ನೀರನ್ನು ಹೆಚ್ಚು ಕುಡಿಯುದರಿಂದನು ಕಿಡ್ನಿ ಸ್ಟೋನ್ ಬರುತ್ತದೆ..

ಮೆಡಿಕೇಶನ್
ಯಾವುದಾದ್ರು ದೀರ್ಘಕಾಲದ ಮೆಡಿಕೇಶನ್ ಅಲ್ಲಿ ಇದ್ದಾಗ,ನಾವು ತಗೊಳುವ ಮಾತ್ರೆಗಳು ಹಾಗೂ ಔಷದಿಯಿಂದ ನು ಕೂಡ ಕಿಡ್ನಿ ಸ್ಟೋನ್ ಬರುತ್ತದೆ…ಹಾಗಾಗಿ ಮೆಡಿಕೇಶನ್ ಅಲ್ಲಿ ಇದ್ದಾಗ ಹೆಚ್ಚು ನೀರನ್ನು ಕುಡಿಬೇಕು..

ತೂಕ
ದೇಹದಲ್ಲಿ ಒಬೆಸಿಟಿ ಹೆಚ್ಚಾದಾಗ ಹಾಗೂ ತೂಕ ಜಾಸ್ತಿ ಆದ್ರೂ ಕೂಡ ಕಿಡ್ನಿ ಸ್ಟೋನ್ ಆಗುತ್ತದೆ..ಹಾಗಾಗಿ ವೈಟ್ ಮ್ಯಾನೇಜ್ಮೆಂಟ್ ತುಂಬಾನೆ ಮುಖ್ಯ..

ಇದೆಲ್ಲದರ ಜೊತೆಗೆ ಯೂರಿನರಿ ಟ್ರ್ಯಾಕ್ ಅಲ್ಲಿ ಇನ್ಫೆಕ್ಷನ್ ಆದಾಗ ಹಾಗೂ ಹಾರ್ಮೋನ್ ನಲ್ಲಿ ಹಿಂಬಾಲೆನ್ಸ್ ಕಂಡಾಗಕೂಡ ಕಿಡ್ನಿ ಸ್ಟೋನ್ ಹೆಚ್ಚಾಗುತ್ತದೆ..