ಕಳೆದ ಎರಡು ತಿಂಗಳಿಂದ ಸುಮಾರು 18 ಸರಗಳ್ಳತನ (Chain snatching) ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ಸರಗಳ್ಳನ ಕಾಲಿಗೆ ತುಮಕೂರು ಪೊಲೀಸರು (Tumkur police) ಗುಂಡಿಕ್ಕಿದ್ದಾರೆ. ಮಧುಗಿರಿ ಡಿವೈಎಸ್‌ಪಿ (Madugiri DYSP) ನೇತೃತ್ವದಲ್ಲಿ ಆರೋಪಿ ಚಿನ್ನು ಎಂಬಾತನನ್ನ ಬಂಧಿಸಲಾಗಿತ್ತು.

ತಲೆ ಮರೆಸಿಕೊಮಡಿದ್ದ ಮತ್ತೊಬ್ಬ ಆರೋಪಿ ಆಂಧ್ರಪ್ರದೇಶದ (Andra pradesh) ಹಿಂದೂಪುರ ಮೂಲದ ರಿಜ್ವಾನ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹೊಸಕೋಟೆ ಬಳಿ ಸೆರೆ ಸಿಕ್ಕ ರಿಜ್ವಾನ್‌ನನ್ನು ಮದುಗಿರಿಗೆ ಕರೆತರುವಾಗ ಈಜಿಹಳ್ಳಿ ಕ್ರಾಸ್ ಬಳಿ ಬಹಿರ್ದೆಸೆಗೆ ಹೋಗಲು ಜೀಪ್‌ನಿಂದ ಇಳಿದಿದ್ದ.
ಈ ವೇಳೆ ಸ್ಥಳದಲ್ಲಿ ಬಿದ್ದಿದ್ದ ಬಿಯರ್ ಬಾಟಲಿ ಚೂರು ತೆಗೆದು ಪೇದೆ ರಮೇಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗೆ ಇನ್ಸ್‌ಪೆಕ್ಟರ್ ಹಮಮಂತರಾಯಪ್ಪ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಮಾಹಿತಿ ನೀಡಿದ್ದಾರೆ.