ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿ ಪ್ರಶಾಂತ್ ನೀಲ್ ನಿರ್ದೇಶನದ ಭಾರೀ ನಿರೀಕ್ಷೆ ಮೂಡಿಸಿರುವ ಕೆಜಿಎಫ್-2 ಚಿತ್ರ ನಾಳೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದ್ದು, ಮೊದಲ ದಿನವೇ ಕನಿಷ್ಠ ೧೬೫ ಕೋಟಿ ರೂ. ಗಳಿಸಲಿದೆ ಎನ್ನಲಾಗಿದೆ.
ಕೆಜಿಎಫ್-೨ ಚಿತ್ರ ಕರ್ನಾಟಕದಲ್ಲಿ 3000 ಸೇರಿದಂತೆ ಜಗತ್ತಿನಾದ್ಯಂತ 9 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿದೆ. ಮೊದಲ ಭಾಗದ ಯಶಸ್ವಿನಿಂದ ಅಭಿಮಾನಿಗಳು ಕಾತರದಿಂದ ಈ ಚಿತ್ರವನ್ನು ಎದುರು ನೋಡುತ್ತಿದ್ದಾರೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೊದಲ ದಿನದ ಎಲ್ಲಾ ಟಿಕೆಟ್ ಗಳು ಮಾರಾಟವಾಗಿವೆ. ಪಿವಿಆರ್ ಮುಂತಾದೆಡೆ ಮಾಲ್ ಗಳಲ್ಲಿ ಗೊಂದಲ ಬಗೆಹರಿದಿದ್ದು, ಇಲ್ಲಿಯೂ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.
ಸಿನಿಮಾ ಪಂಡಿತರ ಪ್ರಕಾರ ಕೆಜಿಎಫ್-2 ಮೊದಲ ದಿನವೇ 200 ಕೋಟಿ ರೂ. ಬಾಚುವ ನಿರೀಕ್ಷೆ ಇದೆ. ಆರ್ ಆರ್ ಆರ್ ಮೊದಲ ದಿನ 750 ಕೋಟಿ ರೂ. ಸಂಗ್ರಹಿಸಿದ್ದು, ೨ ವಾರದಲ್ಲಿ 1000 ಕೋಟಿ ರೂ. ಬಾಚಿಕೊಳ್ಳುವ ಮೂಲಕ ದಾಖಲೆ ಬರೆದಿದೆ. ಈ ದಾಖಲೆ ಮುರಿಯುವುದೇ ಎಂಬುದು ಕಾದು ನೋಡಬೇಕಿದೆ. ಆದರೆ ಕನ್ನಡ ಚಿತ್ರಗಳಿಗೆ ಹೋಲಿಸಿದರೆ ಇದು ನಿಜಕ್ಕೂ ದೊಡ್ಡ ಮೈಲುಗಲ್ಲು ಎಂದೇ ಹೇಳಬಹುದು.

ಯಾವುದೇ ಪರಭಾಷಾ ಚಿತ್ರ ಬಿಡುಗಡೆ ಆಗಬೇಕಾದರೆ ಹೆಚ್ಚು ಪಾಲು ಕೊಡುತ್ತಾರೆ. ಕನ್ನಡದಲ್ಲೂ ಮೊದಲ ವಾರ ಹೆಚ್ಚು ಪಾಲು ಬೇಕು ಎಂದು ಮಾಲ್ ಗಳಲ್ಲಿರುವ ಥಿಯೇಟರ್ ಗಳು ಪಟ್ಟು ಹಿಡಿದಿದ್ದವು. ಈ ಗೊಂದಲ ಬಗೆಹರಿದಿದ್ದು, ಇಲ್ಲಿಯೂ ನಾಳೆಯಿಂದ ಕೆಜಿಎಫ್-2೨ ಅಬ್ಬರಿಸಲಿದೆ.
ಇದೇ ವೇಳೆ ಅಭಿಮಾನಿಗಳ ತೀವ್ರ ಒತ್ತಡದಿಂದಾಗಿ ಗುರುವಾರ ಬೆಳಿಗ್ಗೆ ಪ್ರದರ್ಶನ ಕಾಣಬೇಕಿದ್ದ ಕೆಜಿಎಫ್ -2 ಮುಂಜಾನೆಯಿಂದಲೇ ಪ್ರದರ್ಶನ ಆರಂಭಿಸಲಿವೆ. ಕೆಲವೆಡೆ ಇಂದು ರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಲಿದೆ.
ಕೆಂಗೇರಿಯ ವೆಂಕಟೇಶ್ವರ ಥಿಯೇಟರ್ ನಲ್ಲಿ ಒಂದೇ ದಿನ ೧೦ ಶೋ ಪ್ರದರ್ಶನ ಕಾಣಲಿದ್ದು, ಹೊಸ ದಾಖಲೆ ಬರೆಯಲಿದೆ.