ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಕೆರೆಬೇಟೆ” ಸಿನಿಮಾ ಆಯ್ಕೆಯಾಗಿದೆ.
55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಗೋವಾದಲ್ಲಿ (Goa) 55ನೇ ‘ಭಾರತೀಯ ಅಂತಾರಾಷ್ಟ್ರೀಯಾ ಸಿನಿಮೋತ್ಸವ’(International Film Festival of India) ನವೆಂಬರ್ 20 ರಿಂದ 28ರ ತನಕ ನಡೆಯಲಿದೆ. ಗೋವಾದ ಪಣಜಿಯಲ್ಲಿ (Panaji In Goa) ನಡೆಯುವ ಚಿತ್ರೋತ್ಸವದಲ್ಲಿ ದೇಶ ವಿದೇಶದ ಹಲವರು ಭಾಗಿಯಾಗಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಸಿನಿಮೋತ್ಸವದಲ್ಲಿ “ಕೆರೆಬೇಟೆ” ಪ್ರದರ್ಶನ ಕಾಣಲಿದೆ.
ಜೋಕಾಲಿ ಸಿನಿಮಾ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿ ನಂತರ ರಾಜಹಂಸ ಸಿನಿಮಾ ಮೂಲಕ ನಟನೆ ಜೊತೆಗೆ ನಿರ್ಮಾಣವನ್ನು ಮಾಡಿದ್ದರು. “ಕೆರೆಬೇಟೆ”ಗೆ ರಾಜ್ ಗುರು ಆಕ್ಷನ್ ಕಟ್ ಹೇಳಿದ್ದಾರೆ ನಾಯಕನಾಗಿ ಜೋಕಾಲಿ ಮತ್ತು ರಾಜಹಂಸ ಖ್ಯಾತಿಯ ಗೌರಿಶಂಕರ್ (Gowri Shankar) ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಗೌರಿಶಂಕರ್ ಗೆ ಜೋಡಿಯಾಗಿ ಬೆಂಗಳೂರಿನ ಬಿಂದು ಶಿವರಾಮ್ (Bindu Shivaram) ಅಭಿನಯಿಸಿದ್ದಾರೆ.
ಗೌರಿ ಶಂಕರ್ ನಾಯಕನಾಗಿ ನಟಿಸಿ ನಿರ್ಮಾಣ ಮಾಡಿರುವ ಮಲೆನಾಡಿನ ಕಥೆಯಾಧಾರಿಸಿದಂತ “ಕೆರೆಬೇಟೆ” ಸಿನಿಮಾ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.
ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ (Goa Film Festival) ‘ಭಾರತೀಯ ಪನೋರಮಾ’ (Indian Panorama) ವಿಭಾಗ ಪ್ರಮುಖವಾಗಿದೆ. ಇದರಲ್ಲಿ 25 ಕಥಾಚಿತ್ರ ಹಾಗೂ 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಇಂಡಿಯನ್ ಪನೋರಮಾ (Indian Panorama) ವಿಭಾಗದ ಆರಂಭಿಕ ಸಿನಿಮಾವಾಗಿ ಬಾಲಿವುಡ್ನ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ (‘Freedom Veer Savarkar’) ಸಿನಿಮಾ ಪ್ರದರ್ಶನ ಆಗಲಿದೆ. ಎರಡನೇ ಸಿನಿಮಾವಾಗಿ ಕನ್ನಡದ “ಕೆರೆಬೇಟೆ” ಆಯ್ಕೆ ಆಗಿದೆ.
ಭಾರತದ ಜನಪ್ರಿಯ ಸಿನಿಮಾಗಳನ್ನು ಕೂಡ ಆಯ್ಕೆ ಮಾಡಲಾಗಿದೆ. ಮಲಯಾಳಂ (Malayalam), ತಮಿಳು(Tamil), ಮರಾಠಿ(Marathi), ಬೆಂಗಾಲಿ(Bengali), ತೆಲುಗು(Telugu) ಭಾಷೆಯ ಸಿನಿಮಾಗಳು ಪ್ರದರ್ಶನ ಕಾಣಲಿವೆ.