ಕೇರಳದಲ್ಲಿ ಇತ್ತೀಚಿಗೆ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ನ ಕೈವಾಡವಿದೆ ಮತ್ತು ಕೇರಳ ನಿಧಾನವಾಗಿ ಸಿರಿಯಾವಾಗಿ ಬದಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಸುರೇಂದ್ರನ್, ʻನಿಧಾನವಾಗಿ ಕೇರಳ ಸಿರಿಯಾವಾಗಿ ಬದಲಾಗುತ್ತಿದೆ. ಇದು ಕೇರಳದ ಶ್ರೀ ಸಾಮಾನ್ಯನ ಅವಲೋಕನʼ ಎಂದು ಹೇಳಿದ್ದಾರೆ.
ಕಳೆದ 20 ದಿನಗಳಲ್ಲಿ ಕೇರಳದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಪಿಎಫ್ಐ ನಡೆಸಿರುವ 2 ಹತ್ಯೆಗಳ ಬಗ್ಗೆ ನಿಮ್ಮಗೆ ತಿಳಿದಿರಬೇಕು. ಕೊಲೆಯಾದ ವ್ಯಕ್ತಿಗಳ ದೇಹದ ಮೇಲೆ 36 ಕಡೆ ಚೂಪಾದ ಆಯುಧಗಳಿಂದ ಚುಚ್ಚಿದ್ದಾರೆ ಇದು ತರಭೇತಿ ಪಡೆದ ಫಿಎಫ್ಐ ಉಗ್ರರಿಂದ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪ್ರತ್ಯಕ್ಷದರ್ಶಿಯಾಗಿದ್ದರು ಸಹ ಕೇರಳ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯ ಕೂಗಲತೆಯಲ್ಲಿ ಕೊಲೆ ನಡೆದಿದ್ದರು ಸಹ ಪೊಲೀಸರು ವಾಹನ ತಡೆದು ತಪಾಸನೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದೆಲ್ಲೆಡೆ ಆಡಳಿತ ಸರ್ಕಾರದ ನೆರವಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದಾರೆ.
ಸುದ್ದಿಘೋಷ್ಠಿಯಲ್ಲಿ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ಮುರಳೀಧರನ್ ಹಾಜರಿದ್ದರು.