• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ವಾಡಿಕೆಗಿಂತ 135% ಹೆಚ್ಚು ಮಳೆ ಪಡೆದ ಕೇರಳ: ದೇವರ ನಾಡು ಕಂಗಾಲು

ಫಾತಿಮಾ by ಫಾತಿಮಾ
October 22, 2021
in Uncategorized
0
ವಾಡಿಕೆಗಿಂತ 135% ಹೆಚ್ಚು ಮಳೆ ಪಡೆದ ಕೇರಳ: ದೇವರ ನಾಡು ಕಂಗಾಲು
Share on WhatsAppShare on FacebookShare on Telegram

ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ಚಂಡಮಾರುತದ ಸಂಗಮವು ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಕಡೆಗಳಲ್ಲಿ ಮಳೆ ಸುರಿಸುತ್ತಿದೆ. ಉತ್ತರಾಖಂಡ ಮತ್ತು ಕೇರಳದಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ತೀರಾ ಅಸ್ತವ್ಯಸ್ತಗೊಂಡಿದೆ.

ADVERTISEMENT

ವಾಡಿಕೆಯಂತೆ ಕೇರಳದಲ್ಲಿ ಅಕ್ಟೋಬರಿನಲ್ಲಿ 192.7 ಮೀಮೀ ಮಳೆಯಾಗಬೇಕಿತ್ತು. ಆದರೆ ಅಕ್ಟೋಬರ್ 19ರ  ವರೆಗೇ 453.5 ಮಿಮೀ ಆಗಿದೆ. ಇದು ವಾಡಿಕೆಗಿಂತ 135% ಅಧಿಕ. ಅಕ್ಟೋಬರ್ 20 ರ ನಂತರ ಕೇರಳದಲ್ಲಿ ಮತ್ತೊಂದು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಈಗಾಗಲೇ ಎಚ್ಚರಿಸಿದೆ.

ಅಕ್ಟೋಬರ್ ತಿಂಗಳಲ್ಲಿ ಮಳೆ ಸುರಿಯುವುದು ಅಸಾಮಾನ್ಯ ಘಟನೆಯಲ್ಲ. ಆದರೆ ಈ ಸಮಯದಲ್ಲಿ ಸಾಮಾನ್ಯವಾಗಿ ಮುಂಗಾರು ಹಿಂದಡಿ ಇಟ್ಟು ಹಿಂಗಾರು ಸುರಿಯಬೇಕು. ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ 1 ರ ವೇಳೆಗೆ ಹಿಂತೆಗೆದುಕೊಳ್ಳಲು ಆರಂಭಿಸುತ್ತದೆ ಮತ್ತು ಅಕ್ಟೋಬರ್ ವೇಳೆಗೆ ಸಂಪೂರ್ಣವಾಗಿ ಹೋಗಬೇಕು. ಆದರೆ  2019 ಮತ್ತು 2020 ರಲ್ಲಿ  ಮುಂಗಾರು ಅಕ್ಟೋಬರ್‌ನಲ್ಲಿ ತನ್ನ ಹಿಂತೆಗೆತವನ್ನು ಆರಂಭಿಸಿತ್ತು ಮತ್ತು ಈ ವರ್ಷವೂ ಅದೇ ನಿರೀಕ್ಷೆಯಿದೆ ಎಂದು ಐಎಂಡಿ ಈ ಮೊದಲೇ ವರದಿ ಮಾಡಿತ್ತು.

ಆದರೆ ಕಳೆದ ಆರು ದಿನಗಳಲ್ಲಿ ಸುರಿಯುತ್ತಿರುವ ವಿಪರೀತ ಮಳೆಗೆ ಅರಬ್ಬೀ ಸಮುದ್ರದಲ್ಲಿ ರೂಪುಗೊಂಡ ಕಡಿಮೆ ಒತ್ತಡವೇ ಕಾರಣ ಎಂದು ಐಎಂಡಿ ಹೇಳಿದೆ. ಉಕ್ಕಿ ಹರಿಯುತ್ತಿರುವ ನದಿಗಳು, ಪ್ರವಾಹಕ್ಕೆ ಸಿಲುಕಿರುವ ವಾಹನಗಳು, ಭೂಕುಸಿತದಿಂದ ಜರ್ಜರಿತವಾದ ಮನೆಗಳು ದೇವರ ರಾಜ್ಯವನ್ನ ಕಂಗಾಲು ಮಾಡಿದೆ.

ಅಕ್ಟೋಬರ್‌ 19ರ ವರೆಗೆ ಕನಿಷ್ಠ 27 ಮಂದಿ ಸಾವನ್ನಪ್ಪಿದದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿ ಅಂಶಗಳು ಮಾಹಿತಿ ನೀಡಿದೆ. ಕೊಟ್ಟಾಯಂ ಜಿಲ್ಲೆಯೊಂದರಲ್ಲೇ ಭೂಕುಸಿತದಿಂದ 13 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಾರೆ ಅಧಿಕಾರಿಗಳು.  ಇಡುಕ್ಕಿ ಜಿಲ್ಲೆಯಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ ಸ್ಥಳದಿಂದ ಒಂಬತ್ತು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇಬ್ಬರು ವ್ಯಕ್ತಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಮಲಪ್ಪುರಂ ಜಿಲ್ಲೆಯ ಮೂವರು ಮೀನುಗಾರರು ಕೂಡ ನಾಪತ್ತೆಯಾಗಿದ್ದಾರೆ. ಕೇವಲ ಪ್ರವಾಹ ಅಥವಾ ಭೂಕುಸಿದಿಂದ ಮಾತ್ರವಲ್ಲದೆ ಇತರ ಕಾರಣಗಳಿಂದಲೂ ಜನತೆ ಸಾವೀಗೀಡಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿರುವ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಕೌಶಿಕನ್  “ವಾಹನದ ಕೆಳಗೆ ಸಿಲುಕಿದ್ದರಿಂದ ಇಬ್ಬರು ಮತ್ತು ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ” ಎಂದಿದ್ದಾರೆ. ಪ್ರವಾಹದಲ್ಲಿ ಸಿಲುಕಿದರವರನ್ನು ರಕ್ಷಿಸಿದ ಬಳಿಕವಷ್ಟೇ ಒಟ್ಟು ಕಾಣೆಯಾದವರ ಸಂಖ್ಯೆಯನ್ನು ನಿರ್ಧರಿಸಲು ಸಾಧ್ಯ ಎಂದು ಕೌಶಿಕನ್ ಹೇಳಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಿಗೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

ಆಗಸ್ಟ್ 2018 ರಲ್ಲೂ ಇದೇ ರೀತಿಯ ಘಟನೆ ಸಂಭವಿಸಿದ್ದು ಕೇರಳದಲ್ಲಿ ಸುರಿದ ಧಾರಾಕಾರ ಮಳೆಗೆ ಕನಿಷ್ಠ 324 ಜನರು ಸಾವನ್ನಪ್ಪಿದ್ದರು ಮತ್ತು 300,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು.‌ ಅದು ಆ ರಾಜ್ಯವು ಸುಮಾರು ಒಂದು ಶತಮಾನದಲ್ಲಿ ಕಂಡ ಭೀಕರ ಪ್ರವಾಹವಾಗಿತ್ತು.  ಕೇರಳದ 14 ಜಿಲ್ಲೆಗಳಲ್ಲಿ 13 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್‌ ಘೋಷಿಸಿತ್ತು.

ಕೇರಳದಲ್ಲಿ ಧಾರಾಕಾರ ಮಳೆ ಸುರಿಯುವುದು ಹೊಸದಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತಗಳು ತೀವ್ರವಾಗುತ್ತಿವೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಇದಕ್ಕೆ ಎಷ್ಟು ಕಾರಣವೋ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿರುವ ಅಕ್ರಮ ಕಲ್ಲು ಗಣಿಗಾರಿಕೆ, ಕಾಡು ಮತ್ತು ಹುಲ್ಲುಗಾವಲುಗಳ ನಾಶ, ನೀರಿನ ಹರಿವಿನ ಬದಲಾವಣೆ ಮತ್ತು ನದಿ ತೀರದಲ್ಲಿ ಮರಳು ಗಣಿಗಾರಿಕೆ ಇತ್ಯಾದಿ ಮಾನವ ಹಸ್ತಕ್ಷೇಪಗಳು ಹೆಚ್ಚಾಗಿರುವುದೂ ಇಂತಹ ಅನಾಹುತಗಳಿಗೆ ಕಾರಣ ಎಂದು  ತಜ್ಞರು ಅಭಿಪ್ರಾಯ ಪಡುತ್ತಾರೆ. ಮಣ್ಣಿನ ಇಂಗುವಿಕೆಯ ಸಾಮರ್ಥ್ಯ‌ಕ್ಕಿಂತಲೂ ಹೆಚ್ಚಿನ ಮಳೆ ಸುರಿದಾಗ  ಸಹಜವಾಗಿಯೇ ನೀರು ಸಿಕ್ಕ ಸಿಕ್ಕ ದಿಕ್ಕಿನಲ್ಲಿ ಹರಿಯತೊಡಗುತ್ತದೆ. ಹಾಗಾಗಿ ನಗರೀಕರಣ ಹೆಚ್ಚಾದಂತೆ ಪ್ರವಾಹವೂ ಹೆಚ್ಚುತ್ತಿದೆ, ಪ್ರತಿ ವರ್ಷ‌ ಸಂಭವಿಸುವ ಜೀವ, ಆಸ್ತಪಾಸ್ತಿ ಹಾನಿಯೂ ಹೆಚ್ಚುತ್ತಿದೆ.

Previous Post

ಗಡಿ ಪ್ರದೇಶ ಅತಿಕ್ರಮಣಕ್ಕೆ ಮುಂದಾದ ಚೀನಾ; ಕಣ್ಗಾವಲು ಹೆಚ್ಚಿಸಿದ ಭಾರತದಿಂದ ಹೆರಾನ್ ಡ್ರೋಣ್ ಅಳವಡಿಕೆ

Next Post

ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಎಲ್ಲಿದ್ದರು? ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

Related Posts

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ
Uncategorized

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ

by ಪ್ರತಿಧ್ವನಿ
May 16, 2026
0

ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರ ಕುರ್ಚಿಗಳಿಗೆ ಬಿಳಿ...

Read moreDetails
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
Next Post
ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಎಲ್ಲಿದ್ದರು? ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಎಲ್ಲಿದ್ದರು? ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada