ದೆಹಲಿಗೆ ಹೆಚ್ಚಿನ ಲಸಿಕೆ ಪ್ರಮಾಣವನ್ನು ನೀಡಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕಾಗಿ ಆರೋಗ್ಯ ಸಚಿವರು ಸೀರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ಅನ್ನು ನಿರ್ದೇಶಿಸಬೇಕು ಎಂದು ಕೇಜ್ರಿವಾಲ್ ಕೋರಿದ್ದಾರೆ. “ಮೂರನೇ ಅಲೆಯ ಭಯದ ಮಧ್ಯೆ ದೆಹಲಿಯಲ್ಲಿ ಎಲ್ಲರಿಗೂ ಮೂರು ತಿಂಗಳಲ್ಲಿ ಲಸಿಕೆ ನೀಡಲು ನಾವು ಬಯಸುತ್ತೇವೆ” ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಸುಮಾರು 2 ಕೋಟಿ ಜನಸಂಖ್ಯೆ ಇದ್ದು ಅದರಲ್ಲಿ 1.5 ಕೋಟಿ ಜನರು 18 ವರ್ಷಕ್ಕಿಂತ ಮೇಲ್ಪಟ್ಟವರು. ಎಲ್ಲರಿಗೂ ಲಸಿಕೆ ನೀಡಲು 3 ಕೋಟಿ ಲಸಿಕೆ ಅಗತ್ಯವಿದೆ ಎಂದು ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದಾರೆ.
“ನಾವು ಇಲ್ಲಿಯವರೆಗೆ ಸುಮಾರು 5 ಮಿಲಿಯನ್ ಲಸಿಕೆಗಳನ್ನು ಪಡೆದುಕೊಂಡಿದ್ದೇವೆ. ನಮಗೆ 250 ಲಕ್ಷಕ್ಕೂ ಹೆಚ್ಚಿನ ಲಸಿಕೆಗಳ ಅವಶ್ಯಕತೆ ಇದೆ ಆದರೆ ನಮಗೆ ಅಗತ್ಯವಾದ ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.”
ಕೇಜ್ರಿವಾಲ್ ಬರೆದಿರುವ ಪತ್ರದಲ್ಲಿ, ದೆಹಲಿಯಲ್ಲಿ 18+ ವಯಸ್ಸಿನವರ ಡೇಟಾವನ್ನು ನೀಡಿದರು ಅವರು, “ದೆಹಲಿಯಲ್ಲಿ 18 ರಿಂದ 45 ವರ್ಷದ ನಡುವೆ ಸುಮಾರು 92 ಲಕ್ಷ ಜನರಿದ್ದಾರೆ. ಮೇ ನಿಂದ ಜುಲೈ ಅವಧಿಯಲ್ಲಿ ಪ್ರತಿ ತಿಂಗಳು ದೆಹಲಿಗೆ 60 ಲಕ್ಷ ಲಸಿಕೆ ಪ್ರಮಾಣವನ್ನು ಪೂರೈಸುವಂತೆ ನೀವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ಗೆ ಸೂಚಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಕೇಳಿಕೊಂಡಿದ್ದಾರೆ. ”
18-45 ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಎರಡು ತರಹದ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ದೆಹಲಿಗೆ ಪ್ರತಿ ತಿಂಗಳು 83 ಲಕ್ಷ ಲಸಿಕೆಗಳು ಬೇಕಾಗುತ್ತವೆ, ಇದರಿಂದಾಗಿ ಮುಂದಿನ 3 ತಿಂಗಳಲ್ಲಿ ವ್ಯಾಕ್ಸಿನೇಷನ್ ಪೂರ್ಣಗೊಳಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ನಾವು ಪ್ರತಿದಿನ ಸುಮಾರು 1 ಲಕ್ಷ ಜನರಿಗೆ ಲಸಿಕೆಗಳನ್ನು ನೀಡುತ್ತಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ನಾವು ಈ ಸಾಮರ್ಥ್ಯವನ್ನು ದಿನಕ್ಕೆ 3 ಲಕ್ಷಕ್ಕೆ ಹೆಚ್ಚಿಸಲಿದ್ದೇವೆ. ಆದ್ದರಿಂದ, ತಿಂಗಳಿಗೆ 90 ಲಕ್ಷ ಲಸಿಕೆ ಪ್ರಮಾಣವನ್ನು ತಲುಪಿಸುವ ಸಾಮರ್ಥ್ಯ ನಮಗಿದೆ. ದೆಹಲಿಯಲ್ಲಿ ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಸಹ ಸಿದ್ಧಪಡಿಸಲಾಗಿದೆ” ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ.
ಲಸಿಕೆಯ ನೋಂದಣಿ ಪೋರ್ಟಲ್ ನಲ್ಲಿನ ಸಮಸ್ಯೆಯ ಬಗ್ಗೆ ಕೇಜ್ರಿವಾಲ್ ಆರೋಗ್ಯ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಎಲ್ಲಾ ಜನರಿಗೆ ಸುಲಭವಾಗಿ ಲಸಿಕೆ ನೀಡುವಂತೆ ರಾಜ್ಯ ಸರ್ಕಾರಗಳು ತಮ್ಮದೇ ಆದ ಪೋರ್ಟಲ್ ಅಥವಾ ಆ್ಯಪ್ ತಯಾರಿಸುವಂತೆ ಸೂಚಿಸಿದರೆ ಉತ್ತಮ ಎಂದು ಸಿಎಂ ಒತ್ತಾಯಿಸಿದ್ದಾರೆ. “ಅಪ್ಲಿಕೇಶನ್‌ನಲ್ಲಿನ ಸಮಸ್ಯೆಗಳಿಂದಾಗಿ ಸಾಮಾನ್ಯ ಜನರಿಂದ ಸಮಯ ವ್ಯರ್ಥವಾಗುತ್ತಿದೆ”. ಲಸಿಕೆ ಪಡೆಯಲು ಜನರಿಗೆ ತೊಂದರೆಯಾಗದಂತೆ ನೀವು ರಾಜ್ಯಗಳು ತಮ್ಮದೇ ಆದ ಅಪ್ಲಿಕೇಶನ್ ಅಥವಾ ಬೇರೆ ವಿಧಾನವನ್ನು ರಚಿಸಲು ಅವಕಾಶ ನೀಡಬೇಕು ಎಂದು ಕೇಜ್ರಿವಾಲ್ ಕೇಳಿಕೊಂಡಿದ್ದಾರೆ.
ಲಸಿಕೆಯ ಬೆಲೆ ತಾರತಮ್ಯದ ಕುರಿತು ಅನೇಕ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.