ರಾಜ್ಯದಲ್ಲಿ ಕೆಇಎ ಪರೀಕ್ಷೆ ಅಕ್ರಮವಾಗಿದೆ ಎಂಬ ಆರೋಪ ಕೇಳಿಬಂದಾಗಿನಿಂದ ಹಲವು ರಾಜಕೀಯ ವಾದ ವಿವಾದಕ್ಕೆ ಕಾರಣವಾಗಿತ್ತು. ಈಗ ಆ ಅಕ್ರಮದ ಕಿಂಗ್ ಪಿನ್ ಆರ್.ಡಿ ಪಾಟೀಲ್ ಅಫಜಲಪುರ- ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಲೆಮರೆಸಿಕೊಂಡೇ ಈತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಆರ್ ಡಿ ಪಾಟೀಲ್ ಜಾಮೀನು ಅರ್ಜಿ ವಿಚಾರಣೆ ನ.16 ಕ್ಕೆ ಕೋರ್ಟ್ ಮುಂದೂಡಿದೆ. ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಗೆ ರಕ್ಷಣೆ ನೀಡಿದ್ದ ಆರೋಪದಲ್ಲಿ ಫ್ಲಾಟ್ ಮಾಲೀಕ ಹಾಗೂ ಮ್ಯಾನೇಜರ್ ಹಾಪುರದ ಶಂಕರ ಗೌಡಯಾಳವಾರ್ ಹಾಗೂ ದಿಲೀಪ್ ಪವಾರ್ ನನ್ನು ಬಂಧಿಸಲಾಗಿದೆ . ಅದೇ ರೀತಿ ಪಾಟೀಲ್ ಸಹಚರ ಶಿವಕುಮಾರ್ ನನ್ನು ಕೂಡ ಬಂಧಿಸಲಾಗಿತ್ತು.

ಅಕ್ಟೋಬರ್ 28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ನಿಗಮ ಮತ್ತು ಮಂಡಳಿ ನೇಮಕಾತಿ ಪರೀಕ್ಷೆಯ (Exam Scam) ವೇಳೆ ಅಭ್ಯರ್ಥಿಗಳಿಗೆ ಬ್ಲೂ ಟೂತ್ ಮೂಲಕ ಮಾಹಿತಿ ನೀಡಿ ಅಕ್ರಮ ಎಸಗಲಾಗಿತ್ತು. ಇದರ ಮಾಸ್ಟರ್‌ಮೈಂಡ್ ಆರ್.ಡಿ. ಪಾಟೀಲ್ ಪರಾರಿಯಾಗಿದ್ದ.











