ನನ್ನ ಸಹೋದರ ಹೊಸ ಪಕ್ಷ ಕಟ್ಟಿದರೆ ನಾನೇನು ಮಾಡಲಿ ಎಂದು ಗಾಲಿ ಜರ್ನಾದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ಹಿರಿಯ ಸಹೋದರ ಕರುಣಾಕರ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಹರಪ್ಪನಹಳ್ಳಿಯಲ್ಲಿ ಈ ಕುರಿತು ಮಾತನಾಡಿದ ಕರುಣಾಕರ ರೆಡ್ಡಿ ನೀವು ಎಷ್ಟೇ ಕೇಳಿದ್ದರು ನಾನು ಕಳೆದ 26 ವರ್ಷಗಳಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ ನೀವೇನೆ ಕೇಳಿದ್ದರು ನಾನು ಹೇಳುವುದು ಇದೇ ಎಂದು ಪತ್ರಕರ್ತರ ಮೇಲೆ ಗರಂ ಆದರು.
ಇನ್ನು ಜರ್ನಾದನ ರೆಡ್ಡಿಯವರನ್ನ ಮನವೊಲಿಸಿ ಪಕ್ಷಕ್ಕೆ ವಾಪಸ್ ಕರೆತರುವ ವಿಚಾರವಾಗಿ ಪ್ರತಿಕ್ರಿಯಿಸಿ ಅದು ಪಕ್ಷದ ವರಿಷ್ಠರಿಗೆ ಬಿಟ್ಟ ತೀರ್ಮಾನ ಅದರ ಬಗ್ಗೆ ಅವರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.






