ಕರ್ನಾಟಕದಲ್ಲಿ ಕೋವಿಡ್ ಸಕ್ರಿಯ ಸೋಂಕಿನ ಪ್ರಕರಣಗಳು ಇಳಿಕೆ ಕಂಡಿದ್ದು. ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಅಭಿಯಾನದ ಅಂಕಿ ಅಂಶಗಳು ಹಿಮ್ಮುಖವಾಗುತ್ತಿರುವುದು ಇತ್ತೀಚಿನ ಬಹಿರಂಗಗೊಂಡಿರುವ ದತ್ತಾಂಶದಿಂದ ತಿಳಿದು ಬಂದಿದೆ.
ದೈನಂದಿನ ಕೋವಿಡ್ ಬುಲೇಟಿನ್‌ನ 30 ದಿನಗಳ ದತ್ತಾಂಶಗಳ ಪ್ರಕಾರ ಎರಡನೇ ಅಲೆ ಆರಂಭವಾದಾಗಿನಿಂದ ಕೋವಿಡ್ ಪರೀಕ್ಷೆಯು ಅತಿ ಕಡಿಮೆ ಮಟ್ಟವನ್ನು ತಲುಪಿದೆ. ಇದರಿಂದ ಹೊಸ ಪ್ರಕರಣಗಳ ಪತ್ತೆಯು ಕಡಿಮೆಯಾಗಿದೆ.
ರಾಜ್ಯಾದ್ಯಂತ ಲಸಿಕೆ ಅಭಿಯಾನದಲ್ಲು ತೀವ್ರ ಕುಸಿತ ಕಂಡಿದೆ. ಕಳೆದ ವಾರ (ಅಕ್ಟೋಬರ್ 11-17ರ ವರೆಗೆ) ಕೇವಲ 1.75 ಮಿಲಿಯನ್ ಲಸಿಕೆಗಳನ್ನು ನೀಡಲಾಗಿದೆ. ಇದು ಮೂರು ವಾರಗಳ(ಸೆಪ್ಟೆಂಬರ್ 27ರಿಂದ ಅಕ್ಟೋಬರ್3ರ ವರೆಗೆ) ಸಾಧಿಸಿದ ಗುರುಗಿಂತ ಶೇಕಡ 20.17% ಕನಿಷ್ಟ ಮಟ್ಟವನ್ನು ತಲುಪಿದೆ.

ರಾಜ್ಯಾದ್ಯಂತ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿರುವ ಕಾರಣ ಲಸಿಕಾಭಿಯಾನದಲ್ಲಿ ಹಿನ್ನಡೆ ಸಾಧಿಸುತ್ತಿದೆ. ಹೆಚ್ಚಿನ ಜನರು ಎರಡನೇ ಡೋಸ್‌ಗೆ ಅರ್ಹರಾಗಿರುವ ಕಾರಣ ಲಸಿಕೆ ಅಭಿಯಾನದಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಕಾಣಬಹುದು. ಭಾನುವಾರ ರಾಜ್ಯದಲ್ಲಿ ಶೇಕಡ 40.33%ರಷ್ಟು ಜನೆರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
ರಾಜ್ಯದಲ್ಲಿ ಕಳೆದ ವಾರ ರಾಜ್ಯದಲ್ಲಿ 6.2ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದು ಹದಿನೈದು ದಿನಗಳ ಹಿಂದೆ ನಡೆಸಿದ 7.68ಲಕ್ಷ ಪರೀಕ್ಷೆಗಳಿಗಿಂತ ಶೇಕಡ 18.9ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ರಾಜ್ಯದಲ್ಲಿ ಒಟ್ಟು 2,342 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಭಾನುವಾರ ರಾಜ್ಯದಲ್ಲಿ 326 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಬೆಂಗಳೂರು ನಗರದಲ್ಲಿ 173 ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾನುವಾರ 380 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಇದರಿಂದ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9,450ಕ್ಕೆ ಏರಿಕೆಯಾಗಿದೆ.
ಮಿಕ್ಕಂತೆ ಭಾನುವಾರ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಮೈಸೂರು ಜಿಲ್ಲೆಯಲ್ಲಿ 42 ಹೊಸ ಪ್ರಕರಣಗಳು ಪತ್ತೆಯಾದರೆ, ದಕ್ಷಿಣ ಕನ್ನಡದಲ್ಲಿ 22, ತುಮಕೂರು ಜಿಲ್ಲೆಯಲ್ಲಿ 17 ಪ್ರಕರಣಗಳು ಪತ್ತೆಯಾಗಿವೆ.

ಕಳೆದ ವಾರ ರಾಜ್ಯದಲ್ಲಿ 0-9 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಹದಿನೈದು ದಿನಗಳ ಹಿಂದೆ ದಾಖಲಾದ ಪ್ರಕರಣಗಳಿಗಿಂತ ಏರಿಕೆಯಾಗಿದೆ. 10-19 ವರ್ಷದವರಲ್ಲಿ ಈ ವಾರ 379 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದು ಕಳೆದ ವಾರ ದಾಖಲಾದ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ.