• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಭ್ರಷ್ಟಾಚಾರ ಆರೋಪದಡಿ ಡಿಕೆಶಿ ವಿರುದ್ಧ ದೂರು ದಾಖಲು!

Any Mind by Any Mind
October 18, 2021
in ಕರ್ನಾಟಕ
0
ಭ್ರಷ್ಟಾಚಾರ ಆರೋಪದಡಿ ಡಿಕೆಶಿ ವಿರುದ್ಧ ದೂರು ದಾಖಲು!
Share on WhatsAppShare on FacebookShare on Telegram

ಕಾಂಗ್ರೆಸ್ ಮಾಜಿ ಸಂಸದ ಉಗ್ರಪ್ಪ ಹಾಗೂ ಉಚ್ಛಾಟಿತ ಕಾಂಗ್ರೆಸ್‌ ನಾಯಕ ಸಲೀಂ ನಡುವೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತಾದ ಹಗರಣದ ಸಂಭಾಷಣೆಯೊಂದು ಸೋರಿಕೆಯಾದ ಬೆನ್ನಲ್ಲೇ ಡಿಕೆಶಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಾಗಿದೆ.

ADVERTISEMENT

ದೂರಿನಲ್ಲಿನ ವಿವರಗಳು ಏನೇನು?

ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ನೀಡಿರುವ ದೂರಿನಲ್ಲಿ ಅನ್ವಯವಾಗುವಂತೆ, ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಡಿ.ಕೆ.ಶಿವಕುಮಾರ್‌ ಅವರ ಭ್ರಷ್ಟಾಚಾರದ ಬಗ್ಗ ಸಂಪೂರ್ಣ ಮಾಹಿತಿ ತಿಳಿದಿದೆ. ಡಿ.ಕೆ.ಶಿವಕುಮಾರ್‌ ನೀರಾವರಿ ಹಾಗೂ ಜಲ ಸಂಪನ್ಮೂಲ ಸಚಿವರಾಗಿದ್ದಾಗ ೮ ರಿಂದ ೧೨ ಪರ್ಸಂಟೇಜ್‌ ಕಮೀಷನ್‌ ಪಡೆದಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್‌ ನಾಯಕರೇ ಮಾಡಿದ್ದಾರೆ. ೨೦೨೩ ರ ಚುನಾವಣೆಗಾಗಿ ಕೋಟಿ ರೂಪಾಯಿಗೂ ಅಧಿಕ ಭ್ರಷ್ಟಾಚಾರದ ಹಣ ಸಂಪಾದನೆಯ ಆರೋಪ ಕೂಡ ಇದೆ.  ಅಕ್ರಮ ಹಣ ಸಂಪಾದನೆಯ ಬಗ್ಗೆ ಗೊತ್ತಿದ್ದರೂ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ ಎಂಬುದಾಗಿ ನ್ಯೂಸ್ ಫಸ್ಟ್ ಲೈವ್ ವರದಿ ಮಾಡಿದೆ.

https://newsfirstlive.com/2021/10/18/complaint-against-dk-shivakumar-and-rahul-gandhi/

ಇತ್ತೀಚೆಗೆ  ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ, ಕಾಂಗ್ರೆಸ್ನ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ಗುಟ್ಟಾಗಿ ಮಾತನಾಡಿಕೊಂಡಿದ್ದು, ನಂತರ ಮಾಧ್ಯಮಗಳಲ್ಲಿ ಈ ಸಂಭಾಷಣೆ ಸಾಕಷ್ಟು ಚರ್ಚೆಯನ್ನುಂಟು ಮಾಡಿತ್ತು. ಇದಾದ ಬಳಿಕ, ಕಾಂಗ್ರೆಸ್ ಶಿಸ್ತು ಪರಿಪಾಲನಾ ಸಮಿತಿ ಮುಖ್ಯಸ್ಥರಾದ ರೆಹಮಾನ್ ಖಾನ್ ಅವರು, ಸಲೀಂ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು, ಅಲ್ಲದೇ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

ಉಗ್ರಪ್ಪ ರಕ್ಷಣೆಗೆ ಮುಂದಾಯ್ತ ಕಾಂಗ್ರೆಸ್?

ಮಾಜಿ ಸಂಸದ ಉಗ್ರಪ್ಪನವರು ಕಾಂಗ್ರೆಸ್‌ ಸೇರಿದಾಗಿನಿಂದ ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ಜೀವನದುದ್ದಕ್ಕೂ ಸಂಸ್ಕಾರಯುತ ಮೌಲ್ಯಗಳ ಜೊತೆ ಶಿಸ್ತನ್ನು ಅಳವಡಿಸಿಕಒಂಡು ಬದುಕುತ್ತಿದ್ದು ಅವರನ್ನು ಅಮಾನತು ಮಾಡಿರುವುದು ಅವಸರದ ನಿರ್ಧಾರವಾಗಿದೆ ಎಂದು ಕಾಂಗ್ರೆಸ್ ಶಿಸ್ತು ಪರಿಪಾಲನಾ ಸಮಿತಿ ಮುಖ್ಯಸ್ಥ ರೆಹಮಾನ್‌ ಖಾನ್‌ ಸ್ಪಷ್ಟಪಡಿಸಿದ್ದರು.

ರಾಜಕೀಯದಲ್ಲಿ ಚಪ್ಪಾಳೆ ಹೊಡೆಯುವವರೂ ಇದ್ದಾರೆ! ಡಿಕೆಶಿ ತಿರುಗೇಟು

 ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿ, ಪಕ್ಷ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಶಿಸ್ತಿನ ಸಮಿತಿ ರಚನೆಯಾಗಿದೆ. ಮಾಧ್ಯಮದಲ್ಲಿ ನಾನು ನೋಡಿರುವಂತೆ ಅದಕ್ಕೂ ನನಗೂ ಯಾವುದೂ ಸಂಬಂಧವಿಲ್ಲ. ನಾನು ಯಾವ ಪರ್ಸಂಟೇಜ್ ನಲ್ಲಿಯೂ ಭಾಗಿಯಾಗಿಲ್ಲ, ಭ್ರಷ್ಟಾಚಾರಕ್ಕೂ ನನಗೂ ದೂರ, ಪರ್ಸೆಂಟೇಜ್ ತೆಗೆದುಕೊಳ್ಳುವ ಅಗತ್ಯ ನನಗಿಲ್ಲ. ರಾಜಕೀಯದಲ್ಲಿ ಹಾರ ಹಾಕಿ ಸಮ್ಮಾನ ಮಾಡುವವರಿರುತ್ತಾರೆ.  ಹೊಗಳುವವರೂ, ತೆಗಳುವವರೂ, ಜೈಕಾರ ಹಾಗುವವರೂ ಇರುತ್ತಾರೆ. ಇವೆಲ್ಲದರ ಜೊತೆಗೆ ಇಲ್ಲಿ ಕಲ್ಲು, ಚಪ್ಪಲಿ, ಮೊಟ್ಟೆ ಎಸೆಯುವವರೂ ಇರುತ್ತಾರೆ. ನಾವು ಎಲ್ಲವನ್ನೂ ಸ್ವೀಕರಿಸಲು ತಯಾರಿರಬೇಕು ಎಂದಾಗ ಹಾಗಾದರೆ ಇವರು ಯಾವ ವರ್ಗಕ್ಕೆ ಸೇರಿದವರು ಎಂದು ನೀವೇ ನಿರ್ಧಾರ ಮಾಡಿ ಎಂದರು.

ಮಾಧ್ಯಮಗಳು ಪ್ರಸಾರ ಮಾಡಿದ್ದು ತಪ್ಪು ಎನ್ನುತ್ತಿಲ್ಲ!

ಮಾಧ್ಯಮಗಳು ನಾಯಕರ ಸಂಭಾಷಣೆಗಳನ್ನು ಪ್ರಸಾರ ಮಾಡಿದ್ದು ತಪ್ಪು ಎಂದು ನಾನು ಹೇಳುವುದಿಲ್ಲ. ಈ ಹಿಂದೆ ಅನಂತ್ ಕುಮಾರ್ ಮತ್ತು ಯಡಿಯೂರಪ್ಪನವರು ಹೇಳಿದ್ದ ಮಾತುಗಳನ್ನು, ಹೆಚ್. ವಿಶ್ವನಾಥ್ ಹೇಳಿದ್ದ ಮಾತು, ಯತ್ನಾಳ್ ಅವರು ಹೇಳಿದ್ದ ಮಾತುಗಳನ್ನು ತೋರಿಸಿದ್ದೀರಿ, ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ ಎಂದು ಡಿಕೆಶಿ ತಿಳಿಸಿದರು. ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿಯೇ ನಡೆಯುವುದು, ಅದರ ನಾಯಕರು ಕೋವಿಡ್ ಹೆಸರಲ್ಲಿಯೇ ಸಾಕಷ್ಟು ಅಕ್ರಮ ಹಣ ಮಾಡಿದ್ದಾರೆ ಎಂದು ಆರೋಪಿಸಿದರು.

Tags: ಉಗ್ರಪ್ಪಡಿಕೆ ಶಿವಕುಮಾರ್ಬಿ ಎಸ್ ಯಡಿಯೂರಪ್ಪಬಿಜೆಪಿಭ್ರಷ್ಟಾಚಾರಭ್ರಷ್ಟಾಚಾರ ನಿಗ್ರಹ ದಳಸಿದ್ದರಾಮಯ್ಯ
Previous Post

ಸಮಾಜದ ದಿಕ್ಕುತಪ್ಪಿಸುತ್ತಿದೆಯೇ ಅಧಿಕಾರ ರಾಜಕಾರಣ ?

Next Post

ರಾಜ್ಯದಲ್ಲಿ ಕುಸಿತ ಕಂಡ ಲಸಿಕೆ ಅಭಿಯಾನ; COVID-19 ಪರೀಕ್ಷೆ ಸಂಖ್ಯೆಯಲ್ಲೂ ಕುಸಿತ

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
Next Post
ರಾಜ್ಯದಲ್ಲಿ ಕುಸಿತ ಕಂಡ ಲಸಿಕೆ ಅಭಿಯಾನ; COVID-19 ಪರೀಕ್ಷೆ ಸಂಖ್ಯೆಯಲ್ಲೂ ಕುಸಿತ

ರಾಜ್ಯದಲ್ಲಿ ಕುಸಿತ ಕಂಡ ಲಸಿಕೆ ಅಭಿಯಾನ; COVID-19 ಪರೀಕ್ಷೆ ಸಂಖ್ಯೆಯಲ್ಲೂ ಕುಸಿತ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada