2023-24ನೇ ಸಾಲಿನ SSLC ಪರೀಕ್ಷೆ ಕಳೆದ ತಿಂಗಳ ಮೊದಲ ವಾರದಲ್ಲಿ ನಡೆದಿತ್ತು. ಇದೀಗ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಈಗಾಗಲೇ ಪೂರ್ಣಗೊಂಡಿದ್ದು, ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿಕಕ ಫಲಿತಾಂಶ ಪ್ರಕಟ ಮಾಡಲಿದೆ. ಫಲಿತಾಂಶ ಪ್ರಕಟಕ್ಕೆ ಸಕಲ ಸಿದ್ದತೆ ಮಾಡಿಕೊಂಡಿಕೊಳ್ಳಲಾಗಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಬೆಳಗ್ಗೆ 10.30ಕ್ಕೆ ಪರೀಕ್ಷಾ ಫಲಿತಾಂಶ ಪ್ರಕಟ ಆಗಲಿದೆ. SSLC ಪರೀಕ್ಷೆ ಬರೆದಿರುವ 8 ಲಕ್ಷದ 69 ಸಾವಿರ ವಿದ್ಯಾರ್ಥಿಗಳು ಕೆಲವೇ ನಿಮಿಷಗಳಲ್ಲಿ ತಮ್ಮ ಪರೀಕ್ಷೆಯ ಫಲಿತಾಂಶ ಏನಾಗಿದೆ ಎನ್ನುವುದನ್ನು ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದು ಮಕ್ಕಳ ಭವಿಷ್ಯ ಅಲ್ಲ. ಕೇವಲ ಪರೀಕ್ಷಾ ಫಲಿತಾಂಶ.
ಏಪ್ರಿಲ್ 15 ರಂದು SSLC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭ ಆಗಿತ್ತು. ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿ, ಅಂಕಗಳ ವಿಂಗಡಣೆ ಕಾರ್ಯ ಮುಗಿದಿದ್ದು, ಮಕ್ಕಳು ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ಫಲಿತಾಂಶ ಘೋಷಣೆ ಆದ ಕೆಲವೇ ನಿಮಿಷಗಳಲ್ಲಿ ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ವೆಬ್ಸೈಟ್ನಲ್ಲಿ Website ಫಲಿತಾಂಶ ಲಭ್ಯ ಆಗಲಿದೆ. www.kseeb.kar.nic.in ಮತ್ತು www.karresults.nic.in ನಲ್ಲಿ SSLC Result ಸಿಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್ ಮಂಜುಶ್ರೀ ಮಾಹಿತಿ ನೀಡಿದ್ದಾರೆ.
ಪೋಷಕರೇ ಇದು ಎಸ್ಎಸ್ಎಲ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿ ಭವಿಷ್ಯವಲ್ಲ. ಇದೊಂದು ಪರೀಕ್ಷೆ ಫಲಿತಾಂಶ. ಎಸ್ಎಸ್ಎಲ್ಸಿ ಫೇಲ್ ಆದವರು ಮುಂದೆ IAS, IPS ಮಾಡಿದವರೂ ಇದ್ದಾರೆ. SSLC ಯಲ್ಲಿ Fail ಆಗಿ PUC ಪರೀಕ್ಷೆಯಲ್ಲಿ Rank ಪಡೆದು ಡಾಕ್ಟರ್ ಆದವರೂ ತುಂಬಾ ಜನ ಇದ್ದಾರೆ. SSLC ಪರೀಕ್ಷೆಯಲ್ಲಿ Rank ಬಂದವರನ್ನು ಕರೆದು IAS/IPS ಅಧಿಕಾರಿಯನ್ನಾಗಿ ಮಾಡುವುದಿಲ್ಲ. ಬೇಸರ ಬೇಡ, ಮಕ್ಕಳ ಮೇಲೆ ಕೋಪವೂ ಬೇಡ. ಪಿಯುಸಿಯಲ್ಲಿ ಚೆನ್ನಾಗಿ ಓದುವಂತೆ ಉತ್ತೇಜಿಸಿ. ಮಕ್ಕಳಿಗೆ ಮಾರ್ಗದರ್ಶನ ಮಾಡಿ ಸಾಕು.
ಕೃಷ್ಣಮಣಿ